ಸಿನಿಮಾ ಸುದ್ದಿ

ಬಿಡುಗಡೆಯಾಯ್ತು ಕೆಜಿಎಫ್ ಚಿತ್ರದ 2ನೇ ಟ್ರೈಲರ್, ಮತ್ತೆ ಫಿದಾ ಆದ ಅಭಿಮಾನಿಗಳು

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ​ ಕೆಜಿಎಫ್ ಚಿತ್ರದ 2ನೇ ಟ್ರೈಲರ್ ಬಿಡುಗಡೆಯಾಗಿದ್ದು, ಈ ಹಿಂದೆ ಬಿಡುಗಡೆಯಾಗಿದ್ದ ಮೊದಲ ಟ್ರೈಲರ್ ಗಿಂತಲೂ ಈಗ ಬಿಡುಗಡೆಯಾಗಿರುವ 2ನೇ ಟ್ರೈಲರ್ ಮತ್ತಷ್ಟು ರೋಚಕವಾಗಿದೆ.

ಬಿಡುಗಡೆಯಾಯ್ತು ಕೆಜಿಎಫ್ ಚಿತ್ರದ 2ನೇ ಟ್ರೈಲರ್, ಮತ್ತೆ ಫಿದಾ ಆದ ಅಭಿಮಾನಿಗಳು
ಕೆಜಿಎಫ್ ಚಿತ್ರದ 2ನೇ ಟ್ರೈಲರ್
Published On :
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್​ ಚಿತ್ರದ 2ನೇ ಟ್ರೈಲರ್ ಬಿಡುಗಡೆಯಾಗಿದ್ದು, ಈ ಹಿಂದೆ ಬಿಡುಗಡೆಯಾಗಿದ್ದ ಮೊದಲ ಟ್ರೈಲರ್ ಗಿಂತಲೂ ಈಗ ಬಿಡುಗಡೆಯಾಗಿರುವ 2ನೇ ಟ್ರೈಲರ್ ಮತ್ತಷ್ಟು ರೋಚಕವಾಗಿದೆ.
ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್ ಚಿತ್ರದ ಎರಡನೇ ಟ್ರೈಲರ್​ ಬಿಡುಗಡೆಯಾಗಿದ್ದು, ಮೊದಲ ಟ್ರೈಲರ್ ಗಿಂತಲೂ ಎರಡನೇ ಟ್ರೈಲರ್ ಮತ್ತಷ್ಟು ರೋಚಕವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಚಿತ್ರದ ಮೊದಲನೇ ಟ್ರೈಲರ್​ ರಿಲೀಸ್​ ಆದ ನಂತರ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್​ವುಡ್ ನತ್ತ ತಿರುಗಿ ನೋಡುವಂತೆ ಮಾಡಿತ್ತು. ಪ್ರತಿಯೊಂದು ಡೈಲಾಗ್​ ಚಿತ್ರದ ಬಗೆಗಿನ ನಿರೀಕ್ಷೆಯನ್ನು ಡಬಲ್​ ಮಾಡಿತ್ತು. ಈಗ ಎರಡನೇ ಟ್ರೈಲರ್​​ ಕೂಡ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದ್ದು, ಚಿತ್ರದ ಹೈಪ್ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಟ್ರೈಲರ್ ನಲ್ಲಿ 'ಚಿನ್ನದ ರೇಟ್​ ಹೆಚ್ಚಿದಂತೆ ಮನುಷ್ಯನ ದುರಾಸೆಯೂ ಹೆಚ್ಚಿತು. ಕೆಜಿಎಫ್​ ದೇಶದ ಅತೀ ದೊಡ್ಡ ಚಿನ್ನ ಗಣಿಗಾರಿಕೆಯ ಸ್ಥಳವಾಗಿತ್ತು. ಇದನ್ನ ಒಬ್ಬನೇ ವ್ಯಕ್ತಿ ಕಂಟ್ರೋಲ್ ಮಾಡಿದ್ರೆ ಹೇಗಿರುತ್ತೆ?' ಅನ್ನೋ ಸಾಲುಗಳು ಚಿತ್ರದ ಕಥೆಯ ಬಗ್ಗೆ ಸುಳಿವು ಕೊಡುತ್ತೆ.
ಅಂತೆಯೇ ಯಶ್​ ಆಕ್ಷನ್​​​ ಸೀನ್ ಗಳ ಝಲಕ್​​ ಕೂಡ ಟ್ರೈಲರ್​ನಲ್ಲಿದ್ದು, 'ಗ್ಯಾಂಗ್​ ಇಟ್ಕೊಂಡು ಬರೋನು ಗ್ಯಾಂಗ್ ಸ್ಟರ್​​ ಆಗ್ತಾನೆ… ಅವನು ಒಬ್ಬನೇ ಬರ್ತಿದ್ದ, ಆತ ಮಾನ್ ಸ್ಟರ್'​ ಅನ್ನೋ ಪಂಚಿಂಗ್​​ ಡೈಲಾಗ್ ಟ್ರೈಲರ್ ನಲ್ಲಿದೆ. ಇದೇ ಡಿಸೆಂಬರ್​​ 21ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ  ಭಾಷೆಗಳಲ್ಲಿ ಏಕಕಾಲದಲ್ಲಿ ಕೆಜಿಎಫ್​ ರಿಲೀಸ್​ ಆಗಲಿದೆ.
ಚಿತ್ರದ ಟ್ರೈಲರ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.