KGF 2ನೇ ಟ್ರೈಲರ್ ನೋಡಿದ ಬಾಲಿವುಡ್ ಮಂದಿ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ!
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಿತ್ರದ 2ನೇ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಾಲಿವುಡ್ ಮಂದಿ ಟ್ರೈಲರ್ ನೋಡಿ ಫುಲ್ ಫಿದಾ ಆಗಿದ್ದಾರೆ.

Published On :
ಮುಂಬೈ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಿತ್ರದ 2ನೇ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಾಲಿವುಡ್ ಮಂದಿ ಟ್ರೈಲರ್ ನೋಡಿ ಫುಲ್ ಫಿದಾ ಆಗಿದ್ದಾರೆ.
ಕೆ.ಜಿ.ಎಫ್ ಚಿತ್ರತಂಡ ಇವತ್ತು ಒಂದು ಸರ್ಪೈಸ್ ಕೊಡುತ್ತೆ ಅಂತ ನಿನ್ನೆ ಫರ್ಹಾನ್ ಅಖ್ತರ್ ಮತ್ತು ಯಶ್ ಟ್ವೀಟ್ ಮಾಡಿದ್ದರು. ಅದರಂತ, ಸಂಜೆ ಟ್ರೈಲರ್ 2ನ ರಿಲೀಸ್ ಮಾಡೋದಾಗಿ ಹೇಳಿದ್ದರು. ಇವತ್ತು ಕೆ.ಜಿ.ಎಫ್ ಟೀಮ್ ಜೊತೆಗೆ ಫರ್ಹಾನ್ ಅಖ್ತರ್ ಬಾಲಿವುಡ್ ಅಂಗಳದಲ್ಲಿ ಗ್ರ್ಯಾಂಡ್ ಆಗಿ ಟ್ರೈಲರ್‌ನ ಲಾಂಚ್ ಮಾಡಿದ್ದಾರೆ.
ಕೆಜಿಎಫ್ ಚಿತ್ರದ ಹಿಂದಿ ಅವತರಣಿಕೆಯನ್ನು ಬಾಲಿವುಡ್ ನಟ ಮತ್ತು ನಿರ್ಮಾಪಕ ಫರ್ಹಾನ್ ಅಖ್ತರ್ ವಿತರಣೆ ಮಾಡುತ್ತಿದ್ದು, ಮುಂಬೈನಲ್ಲಿ ಇಂದು ಎಕ್ಸೆಲ್ ಎಂಟರ್ ಟೈನ್ ಮೆಂಟ್ ಸಂಸ್ಥೆ ಕೆಜಿಎಫ್ ಚಿತ್ರದ 2ನೇ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ಖ್ಯಾತನಾಮ ಮಾಧ್ಯಮ ಮತ್ತು ಪತ್ರಿಕೆಗಳ ಪತ್ರಕರ್ತರು ಹಾಗೂ ಬಾಲಿವುಡ್ ಮಂದಿ ಟ್ರೈಲರ್ ವೀಕ್ಷಣೆಗಾಗಿ ಆಗಮಿಸಿದ್ದರು.
ವಿಶೇಷ ಅಂದ್ರೆ, ಬಿಟೌನ್‌ನಲ್ಲಿ ಕೆ.ಜಿ.ಎಫ್ 2 ಚಿತ್ರದ ಟ್ರೈಲರ್ ನೋಡಿದ ಬಾಲಿವುಡ್ ಪತ್ರಕರ್ತರು ಅಕ್ಷರಶಃ ದಂಗಾಗಿದ್ದಾರೆ. ವಾವ್ ಏನ್ ಮೇಕಿಂಗ್ ಗುರು, ಏನಿದು ಸಿನಿಮಾ ರೇಂಜ್ ಅಂತ ಹುಬ್ಬೇರಿಸಿದ್ದಾರೆ. ಟ್ರೈಲರ್ ನೋಡಿ ಚಪ್ಪಾಳೆ ತಟ್ಟಿ ಶಿಳ್ಳೆ ಹಾಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


