ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕಿ ಅಧಿತಿ ಸಾಗರ್ಗೆ 'ಧಮ್' ಸಂಕಷ್ಟ!
ಕನ್ನಡದ ರ್ಯಾಪರ್ ಚಂದನ್ ಶೆಟ್ಟಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದು ಇದರ ಬೆನ್ನಲ್ಲೇ ಇದೀಗ ಸ್ಯಾಂಡಲ್ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಗಾಯಕಿ ಅಧಿತಿ ಸಾಗರ್...

Published On :
ಬೆಂಗಳೂರು: ಕನ್ನಡದ ರ್ಯಾಪರ್ ಚಂದನ್ ಶೆಟ್ಟಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದು ಇದರ ಬೆನ್ನಲ್ಲೇ ಇದೀಗ ಸ್ಯಾಂಡಲ್ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಗಾಯಕಿ ಅಧಿತಿ ಸಾಗರ್ ಗೆ ಸಂಕಷ್ಟ ಎದುರಾಗಿದೆ.
ರ್ಯಾಂಬೋ 2 ಚಿತ್ರದಲ್ಲಿನ ಧಮ್ ಮಾರೋ ಧಮ್ ಹಾಡಿನ ಸೃಷ್ಟಿಕರ್ತ ಅರ್ಜುನ್ ಜನ್ಯ ಮತ್ತು ಈ ಹಾಡು ಹಾಡಿದ್ದ ಗಾಯಕಿ ಅಧಿತಿ ಸಾಗರ್ ಗೆ ಸಿಸಿಬಿ ಪೊಲೀಸರು ಸಮನ್ಸ್ ನೀಡಲು ಸಿದ್ಧತೆ ನಡೆಸಿದೆ.
ಈ ಹಾಡಿನ ಮೂಲಕ ಗಾಂಜಾ ಹೊಡೆಯಲು ಪ್ರಚೋದನೆ ನೀಡಲಾಗುತ್ತದೆ. ಈ ಹಾಡು ಯುವಜನತೆಗೆ ಗಾಂಜಾ ಸೇವನೆ ಮಾಡಲು ಪ್ರಚೋದನೆ ನೀಡುವ ರೀತಿಯಲ್ಲಿದೆ. ಯುವ ಜನತೆ ಪಾರ್ಟಿ ಹಾಗೂ ಪಬ್ ಗೆ ಹೋದಾಗ ಈ ಹಾಡು ಕೇಳಿ ಗಾಂಜಾಗೆ ಆಕರ್ಷಿತರಾಗಿ ಅದನ್ನು ಸೇವಿಸಲು ಮುಂದಾಗುತ್ತಾರೆ ಎಂಬ ಹಿನ್ನೆಲೆಯಲ್ಲಿ ಸಿಸಿಬಿ ತಂಡ ಇಬ್ಬರಿಗೂ ಸಮನ್ಸ್ ನೀಡಲು ಚಿಂತನೆ ನಡೆಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ರ್ಯಾಪರ್ ಚಂದನ್ ಶೆಟ್ಟಿ ಅವರು ಹೊಸದಾಗಿ ರ್ಯಾಪ್ ಸಾಂಗ್ ವೊಂದನ್ನು ಬಿಡುಗಡೆ ಮಾಡಿದ್ದರು. ಈ ಹಾಡಿನಲ್ಲಿ ಭಂಗಿ ಹೊಡೆದು ನಗುತಾ ಇರು ಬಳಸಿದ್ದರು. ಹೀಗಾಗಿ ಸಿಸಿಬಿ ಪೊಲೀಸರು ಚಂದನ್ ಶೆಟ್ಟಿಗೆ ನೋಟೀಸ್ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
CCB policeಸಿಸಿಬಿ ಪೊಲೀಸ್Arjun Janyaಅರ್ಜುನ್ ಜನ್ಯChandan Shettyಚಂದನ್ ಶೆಟ್ಟಿDum Maro Dumಧಮ್ ಮಾರೋ ಧಮ್Aditi Sagarಅಧಿತಿ ಸಾಗರ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


