ನೆಚ್ಚಿನ ನಟ 'ದಿ ಬಾಸ್' ಮುಂದೆ ಅಭಿಮಾನಿಯಾದ ನಟ ಧನ್ವೀರ್ ಗೌಡ
ಬಜಾಬ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಧನ್ವೀರ್ ಗೌಡ ಅವರಿಗೆ ಇದೊಂದು ಅವಿಸ್ಮರಣೀಯ ಸಮಯ.

Published On :
ಬಜಾಬ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಧನ್ವೀರ್ ಗೌಡ ಅವರಿಗೆ ಇದೊಂದು ಅವಿಸ್ಮರಣೀಯ ಸಮಯ.
ಹೌದು ತಮ್ಮ ನೆಚ್ಚಿನ ನಟ ತಾವು ಅಭಿನಯಿಸಿರುವ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡುತ್ತಿರುವುದು ಎಂತಹ ನಟನಿಗಾದರು ಅದು ಅವಿಸ್ಮರಣೀಯವಾಗಿರುತ್ತದೆ. ಧನ್ವೀರ್ ಅಭಿನಯದ ಬಜಾರ್ ಚಿತ್ರದಲ್ಲಿನ ಎರಡನೇ ಹಾಡನ್ನು ನಟ ದರ್ಶನ್ ಬಿಡುಗಡೆ ಮಾಡಿದ್ದು ಇದಕ್ಕೆ ಧನ್ವೀರ್ ಫುಲ್ ಖುಷಿಯಾಗಿದ್ದಾರೆ.
ಬಜಾರ್ ಚಿತ್ರ ಮಾಡುವುದಕ್ಕೂ ಮುನ್ನ ನಾನು ದರ್ಶನ್ ಅವರ ದೊಡ್ಡ ಅಭಿಮಾನಿಯಾಗಿದ್ದೆ. ಪ್ರತಿ ವರ್ಷ ದರ್ಶನ್ ಹುಟ್ಟುಹಬ್ಬದ ದಿನ ಅವರ ಮನೆಗೆ ಹೋಗಿ ಶುಭಾಶಯ ಹೇಳುತ್ತಿದ್ದೆ. ಅಂತಹ ನನ್ನ ನೆಚ್ಚಿನ ನಟ ನನ್ನ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಿದ್ದು ನನ್ನ ಖುಷಿಗೆ ಗಡಿಯೇ ಇಲ್ಲದಂತಾಗಿದೆ ಎಂದರು.
ಧನ್ವೀರ್ ಗೆ ನಾಯಕಿಯಾಗಿ ಅಧಿತಿ ಪ್ರಭುದೇವ ಅವರು ನಟಿಸುತ್ತಿದ್ದಾರೆ. ಬಜಾರ್ ಚಿತ್ರವನ್ನು ಸುನಿ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ಸಂಯೋಜಿಸಿದ್ದಾರೆ. ಸಂತೋಷ್ ರೈ ಪತಾಜೆ ಅವರ ಛಾಯಾಗ್ರಹಣವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


