ಟಗರು ಚಿತ್ರದ ಮತ್ತೊಂದು ಮೈಲಿಗಲ್ಲು: 25ನೇ ವಾರದತ್ತ ಸಿನಿಮಾ ಪ್ರದರ್ಶನ
ಸೂರಿ ನಿರ್ದೇಶನದ ಟಗರು ಸಿನಿಮಾ 25ನೇ ವಾರ ಪೂರೈಸುತ್ತಿರುವ ಸಂಭ್ರಮದಲ್ಲಿದೆ, ಮೈಸೂರಿನ ಶಾಂತಲಾ ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿದ್ದು, ದಾಖಲೆ ನಿರ್ಮಿಸಲು ...

Published On :
ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ಸಿನಿಮಾಗಳು ಒಂದು ಇಲ್ಲವೇ ಎರಡು ವಾರ ಪ್ರದರ್ಶನ ಕಾಣುವುದೇ ಕಷ್ಟ. ಇಂಥ ಸಮಯದಲ್ಲಿ ಶಿವರಾಜ್ ಕುಮಾರ್ ನಟಿಸಿರುವ ಟಗರು ಸಿನಿಮಾ 25ನೇ ವಾರ ಪೂರೈಸುತ್ತಿದೆ.
ಸೂರಿ ನಿರ್ದೇಶನದ ಟಗರು ಸಿನಿಮಾ 25ನೇ ವಾರ ಪೂರೈಸುತ್ತಿರುವ ಸಂಭ್ರಮದಲ್ಲಿದೆ, ಮೈಸೂರಿನ ಶಾಂತಲಾ ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿದ್ದು, ದಾಖಲೆ ನಿರ್ಮಿಸಲು ಹೊರಟಿದೆ.
ನನ್ನ ವೃತ್ತಿ ಜೀವನದಲ್ಲಿ ನನ್ನ ಹಲವು ಸಿನಿಮಾಗಳು 25ನೇ ವಾರ ಪೂರೈಸಿವೆ, ಆದರೆ ಇತ್ತೀಚಿನ ಸಮಯದಲ್ಲಿ ಈ ಸಿನಿಮಾ ಇಷ್ಟು ದೀರ್ಘಸಮಯ ಓಡುತ್ತಿದೆ, ನನಗೆ ತುಂಬಾ ಸಂತಸವಾಗಿದೆ, ನಿರ್ದೇಶಕ ಸೂರಿ ಮತ್ತು ನಿರ್ಮಾಪಕ ಶ್ರೀಕಾಂತ್ ಅವರಿಗೆ ಎಲ್ಲಾ ಕ್ರೆಡಿಟ್ ಸಲ್ಲಬೇಕು, ಅವರಿಂದಲೇ ಟಗರು ಸಾಧ್ಯವಾದದ್ದು ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
ಚಿತ್ರಕಥೆ ಪ್ರೇಕ್ಷಕರಿಗೆ ಹತ್ತಿರವಾದದ್ದಾಗಿತ್ತು ಹೀಗಾಗಿ ಸಿನಿಮಾ ಯಶಸ್ಸು ಕಾಣಲು ಸಾಧ್ಯವಾಯಿತು,. ಇಲ್ಲಿ ನಾಯಕ, ನಾಯಕಿ ಅಥವಾ ಸೂಪರ್ ಸ್ಟಾರ್ ಎಂಬುದು ಗಣನೀಯ ಅಂಶವಲ್ಲ, ಒಟ್ಟಾರೆ ಕಥೆ ಹಾಗೂ ಸಿನಿಮಾದ ಪ್ರತಿಯೊಂದು ಪಾತ್ರಕ್ಕೂ ಮಹತ್ವ ನೀಡಲಾಗಿದೆ.
ನನ್ನ ಪಾತ್ರ ಹೊರತುಪಡಿಸಿ, ಡಾಲಿ ಪಾತ್ರಕ್ಕೂ ಅಷ್ಟೇ ಮಹತ್ವ ನೀಡಲಾಗಿದೆ, ಶಿವ, ಜಿರಲೆಗೂ ಕೂಡ ಸಿನಿಮಾದಲ್ಲಿ ಮಹತ್ವ ನೀಡಲಾಗಿದೆ, ಅದೇ ಸಿನಿಮಾದ ಸೌಂದರ್ಯ ಎಂದು ಹೇಳಿದ್ದಾರೆ.
ಇಂಥಹ ಮೈಲಿಗಲ್ಲು ಸಾಧ್ಯವಾಗಲು ಕಾರಣ ನಿರ್ಮಾಪಕರ ಆಸಕ್ತಿ ಕಾರಣ ಎಂದು ನಿರ್ದೇಶಕ ಸೂರಿ ಹೇಳಿದ್ದಾರೆ,.ಸಿನಿಮಾ ಬಿಡುಗಡೆಯಾದ ಮೊದಲನೇ ಹಾಗೂ 2ನೇ ವಾರದಲ್ಲಿ ಸಿನಿಮಾ ಬಗ್ಗೆ ಪ್ರೇಕ್ಷಕರನ್ನು ಕೇಳಲಾಗಿತ್ತು, 3ನೇ ವಾರದಲ್ಲಿ ಪ್ರೇಕ್ಷಕರು ಅದನ್ನೇ ರಿಪೀಟ್ ಮಾಡುತ್ತಿರುವುದಾಗಿ ಕಾಣಿಸಿತ್ತು, 25ನೇ ವಾರದಲ್ಲಿ ಪೋಸ್ಚರ್ ರಾಜ್ಯಾದ್ಯಂತ ಕಾಣಿಸುತ್ತಿರುವುದು ನನಗೆ ಮತ್ತಷ್ಟು ಸಂತಸ ತಂದಿದೆ. ಇಂಥಹ ಮೈಲಿಗಲ್ಲು ಸಾಧ್ಯವಾದದ್ದು ನಿರ್ಮಾಪಕರ ಆಸಕ್ತಿಯಿಂದಾಗಿ ಮಾತ್ರ ಎಂದು ಸೂರಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


