ಸಿನಿಮಾ ಸುದ್ದಿ

ನನ್ನ ಪುತ್ರನನ್ನು ಈ ವರ್ಷ ಚಿತ್ರರಂಗಕ್ಕೆ ಪರಿಚಯಿಸುತ್ತೇನೆ: ರವಿಶಂಕರ್

ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ಖಳನಾಯಕ ರವಿಶಂಕರ್, ತಮ್ಮ ಪುತ್ರ ಅದ್ವೆಯ್ ಪುದಿಪೆಡ್ಡಿ ...

ನನ್ನ ಪುತ್ರನನ್ನು ಈ ವರ್ಷ ಚಿತ್ರರಂಗಕ್ಕೆ ಪರಿಚಯಿಸುತ್ತೇನೆ: ರವಿಶಂಕರ್
ಅದ್ವೆಯ್ ಪುಡಿಪೆಡ್ಡಿ
Published On :

ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ಖಳನಾಯಕ ರವಿಶಂಕರ್, ತಮ್ಮ ಪುತ್ರ ಅದ್ವೆಯ್ ಪುದಿಪೆಡ್ಡಿ ಈ ವರ್ಷ ಚಿತ್ರರಂಗಕ್ಕೆ ಕಾಲಿಡುತ್ತಿರುವುದಾಗಿ ಹೇಳಿದ್ದಾರೆ.

ತಮ್ಮ ಮಗನ ಚಿತ್ರವನ್ನು ತಾವೇ ನಿರ್ದೇಶನ ಮಾಡುತ್ತಿರುವುದಾಗಿಯೂ ಹೇಳಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ತಂದೆ-ಮಗನ ಜೋಡಿಯ ಪ್ರಾಜೆಕ್ಟ್ ಈ ವರ್ಷದಲ್ಲಿಯೇ ಆರಂಭವಾಗಲಿದೆ. ನ್ಯೂಯಾರ್ಕ್ ನ ಲೀ ಸ್ಟ್ರಾಸ್ಬರ್ಗ್ ಥಿಯೇಟರ್ ಅಂಡ್ ಫಿಲ್ಮ್  ಇನ್ಸ್ಟ್ ಟ್ಯೂಟ್ ನಲ್ಲಿ ಒಂದು ವರ್ಷದ ಕೋರ್ಸ್ ಮಾಡಿಕೊಂಡು ಬಂದಿರುವ ಅದ್ವೆಯ್ ತಮ್ಮ ತಂದೆಯ ಮಾರ್ಗದರ್ಶನದಲ್ಲಿ ಹೀರೋ ಆಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಕಾತರರಾಗಿದ್ದಾರೆ.

ಕಂಠದಾನ ಕಲಾವಿದರಾಗಿಯೂ ಗುರುತಿಸಿಕೊಂಡಿರುವ ರವಿಶಂಕರ್ ಸದ್ಯ ತಮ್ಮ ಮಗನಿಗಾಗಿ ಮಾಡುತ್ತಿರುವ ಸಿನಿಮಾದ ಸ್ಕ್ರಿಪ್ಟ್ ಕೆಲಸದಲ್ಲಿ ನಿರತರಾಗಿದ್ದಾರೆ. ಈ ವರ್ಷ ನನ್ನ ಮಗ ಅದ್ವೆಯ್ ನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತೇನೆ. ಚಿತ್ರದ ಸಬ್ಜೆಕ್ಟ್ ನ್ನು ಮುಗಿಸಿದ ನಂತರ ಚಿತ್ರದ ಬಗ್ಗೆ ಇನ್ನಷ್ಟು ವಿವರಗಳನ್ನು ನೀಡಲಿದ್ದೇನೆ. ನನ್ನ ಬಳಿ ಐದು ವಿಷಯಗಳಿದ್ದು ಅದರ ಚಿತ್ರಕಥೆ ಬರೆಯುವ ಕೆಲಸ ನಡೆಯುತ್ತಿದೆ ಎನ್ನುತ್ತಾರೆ ರವಿಶಂಕರ್.

ಈ ಚಿತ್ರ ರವಿಶಂಕರ್ ನಿರ್ದೇಶನದ ಎರಡನೇ ಚಿತ್ರವಾಗಲಿದ್ದು 16 ವರ್ಷಗಳ ಹಿಂದೆ ದುರ್ಗಿ ಎಂಬ ಚಿತ್ರವನ್ನು ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.