ಜೀವನದಲ್ಲಿ ಹಣದ ಸುತ್ತಲೇ ಎಲ್ಲವೂ ಸುತ್ತುತ್ತಿದೆ: ’ಬಕಾಸುರ” ನಟ ರೋಹಿತ್
ಆರ್.ಜೆ. ರೋಹಿತ್ ತಮ್ಮ ನಟನಾ ಜೀವನದ ಮೊದಲ ಚಿತ್ರ ಕಣ್ವ ಯಶಸ್ಸಿನ ಬಳಿಕ ಇದೀಗ ಎರಡನೇ ಚಿತ್ರವಾದ ’ಬಕಾಸುರ’ ನ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

Published On :
ಬೆಂಗಳೂರು: ಆರ್.ಜೆ. ರೋಹಿತ್ ತಮ್ಮ ನಟನಾ ಜೀವನದ ಮೊದಲ ಚಿತ್ರ ಕರ್ವ ಯಶಸ್ಸಿನ ಬಳಿಕ ಇದೀಗ ಎರಡನೇ ಚಿತ್ರವಾದ ’ಬಕಾಸುರ’ ನ ಬಿಡುಗಡೆಗಾಗಿ ಕಾಯುತ್ತಿದ್ದಾರೆ.
ನವನೀತ್ ನಿರ್ದೇಶನದ ಈ ಚಿತ್ರಕ್ಕೆ ಅವರ ತಂಡದವರೇ ಬಂಡವಾಳವನ್ನು ತೊಡಗಿಸಿದೆ.
’ಹಣಕ್ಕಾಗಿ ಹಸಿವು’ ಎಂದು ಚಿತ್ರದ ಶಿರ್ಷಿಕೆ ಅರ್ಥವಾಗಿದೆ ಎನ್ನುವ ಮೂಲಕ ನಾಯಕ ನಟ ರೋಹಿತ್ ಅದನ್ನು ತಮ್ಮ ಮಾತುಗಳಲ್ಲಿ ಸಮರ್ಥಿಸಿಕೊಂಡಿದ್ದಾರೆ. "ಜೀವನದ ಪ್ರತಿಯೊಂದೂ ಇಂದು ಹಣದೊಡನೆ ಸಂಪರ್ಕ ಹೊಂದಿದೆ" ಅವರು ಹೇಳಿದ್ದಾರೆ. ಅವರು ತಾವು ಆರ್.ಜೆ. ಆಗಲು ಪಟ್ಟ ಕಠಿಣ ಶ್ರಮವನ್ನು ನೆನೆದರು.
"ಮಧ್ಯಮ ವರ್ಗದ ಹಿನ್ನೆಲೆಯ ಕುಟುಂಬದಿಂದ ಬಂದ ನಾನು ಹಣವಿರುವ ಹಾಗು ಹಣವಿಲ್ಲದವರನ್ನು ಸಮಾಜ ಯಾವ ರೀತಿ ಕಾಣುತದೆ ಎನ್ನುವುದನ್ನು ನೋಡಿದ್ದೇನೆ. ನಾನು ಈ ವ್ಯವಸ್ಥೆಯನ್ನು ಬದಲಿಸಲು ಬಯಸಿದ್ದೇನೆ. ಅದಕ್ಕಾಗಿ ರಾಜಕೀಯಕ್ಕೆ ಧುಮುಕಲು ಪ್ರಯತ್ನಿಸಿದೆ. ಆದರೆ ರಾಜಕೀಯ ಸಹ ಹಣವಿಲ್ಲದ ಕ್ಷೇತ್ರವಲ್ಲ ಎನ್ನುವುದನ್ನು ಅರಿತ ನಾನು ರಾಜಕೀಯದಿಂದ ದೂರವಾಗಿ ನಟನೆಗೆ ಇಳಿದೆ."2013ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರೋಹಿತ್ ಹೇಳಿದರು.

"ಅವಕಾಶ ಸಿಕ್ಕರೆ ರಾಜಕೀಯ ಪ್ರವೇಶಕ್ಕೆ ಎರಡನೇ ಬಾರಿ ಪ್ರಯತ್ನಿಸುವೆ" ನಟ ಹೇಳಿದ್ದಾರೆ.
’ಬಕಾಸುರ’ ದಲ್ಲಿ ರೋಹಿತ್ ವಕೀಲನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜತೆ ತೆರೆ ಹಂಚಿಕೊಲ್ಳುತ್ತಿದ್ದಾರೆ.
"ಕ್ಯಾಮರಾವನ್ನು ಎದುರಿಸುವ ಮೊದಲು ಈ ಪಾತ್ರಕ್ಕೆ ಸಾಕಷ್ಟು ಸಿದ್ಧತೆ ಬೇಕಾಗಿತ್ತು. ಆ ಸಿದ್ದತೆಯನ್ನು ನಾನು ಮಾಡಿಕೊಂಡಿದ್ದೆ. ಇದರಿಂದಾಗಿ ರವಿಚಂದ್ರನ್ ಅವರಂತಹಾ ಹಿರಿಯ ನಟರ ಜತೆ ಅಭಿನಯಿಸುವಾಗಲೂ ನನಗೆ ಹಿಂಜತಿತ ಉಂಟಾಗಲಿಲ್ಲ. , ನನ್ನ ಹೋಂ ವರ್ಕ್ ನನಗೆ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡಿತು" ಅವರು ಹೇಳಿದರು.
"ಹಿಂದೆ ನಾನು ಆರ್.ಜೆ. ಆಗಿದ್ದಾಗ ಯಶ್ ಅವರ ಚಿತ್ರ ಪ್ರಚಾರಕ್ಕಾಗಿ ನಾನು ಹೇಗೆಲ್ಲಾ ಕೆಲಸ ಮಾಡಿದ್ದೆ ಎನ್ನುವುದನ್ನು ಆತ ನೆನೆಪಿಸಿಕೊಂಡಿದ್ದಾರೆ. ಅವರೀಗ ನನ್ನ ಚಿತ್ರಕ್ಕೆ ಪ್ರಚಾರ ಕೊಡಲು ಒಪ್ಪಿದ್ದಾರೆ. ಇದಲ್ಲದೆ ಚಿತ್ರದ ಪ್ರ್ಚಾರ ಕಾರ್ಯಕ್ಕೆ ನೆರವಾಗಲು ಇನ್ನಷ್ಟು ಸಂಸ್ಥೆಗಳು ಮುಂದೆ ಬಂದಿದೆ. ಇದು ನನ್ನ ಅದೃಷ್ಟದ ಚಕ್ರ" ರೋಹಿತ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


