ಸಿನಿಮಾ ಸುದ್ದಿ

ತೆಲುಗಿನ ಖ್ಯಾತ ನಿರ್ಮಾಪಕನ ಮಗ ನನ್ನ ಜತೆ ಬಲವಂತವಾಗಿ ಸೆಕ್ಸ್: ಶ್ರೀ ರೆಡ್ಡಿ ಹೊಸ ಬಾಂಬ್

ತೆಲುಗು ಚಿತ್ರರಂಗದಲ್ಲಿ ಕೆಲವು ನಿರ್ಮಾಪಕರು ಮತ್ತು ನಿರ್ದೇಶಕರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದ ನಟಿ ಶ್ರೀ ರೆಡ್ಡಿ ಅವರು ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ...

ತೆಲುಗಿನ ಖ್ಯಾತ ನಿರ್ಮಾಪಕನ ಮಗ ನನ್ನ ಜತೆ ಬಲವಂತವಾಗಿ ಸೆಕ್ಸ್: ಶ್ರೀ ರೆಡ್ಡಿ ಹೊಸ ಬಾಂಬ್
ಶ್ರೀರೆಡ್ಡಿ
Published On :
ತೆಲುಗು ಚಿತ್ರರಂಗದಲ್ಲಿ ಕೆಲವು ನಿರ್ಮಾಪಕರು ಮತ್ತು ನಿರ್ದೇಶಕರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದ ನಟಿ ಶ್ರೀ ರೆಡ್ಡಿ ಅವರು ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ. 
ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕರೊಬ್ಬರ ಪುತ್ರ ಸ್ಟುಡಿಯೋ ಒಂದರಲ್ಲಿ ನನ್ನ ಜತೆ ಸೆಕ್ಸ್ ಮಾಡಿದ್ದರು ಎಂದು ಶ್ರೀರೆಡ್ಡಿ ಆರೋಪಿಸಿದ್ದಾರೆ. 
ನಿರ್ಮಾಪಕರ ಮಗ ನನ್ನನ್ನು ಸ್ಟುಡಿಯೋಗೆ ಕರೆದುಕೊಂಡು ಹೋಗಿ ನನ್ನನ್ನು ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದರು. ನನ್ನನ್ನು ಸ್ಟುಡಿಯೋಗೆ ಬರುವಂತೆ ಕರೆದಾಗ ಮಾತನಾಡಲು ಮಾತ್ರ ಕರೆಯುತ್ತಿದ್ದರೆ ಬರುವುದಾಗಿ ಹೇಳುತ್ತಿದ್ದೆ, ಆದರೆ ಅಲ್ಲಿಗೆ ಹೋದ ನಂತರ ಸೆಕ್ಸ್ ಗಾಗಿ ಒತ್ತಾಯಿಸುತ್ತಿದ್ದ ಎಂದು ಶ್ರೀರೆಡ್ಡಿ ಆರೋಪಿಸಿದ್ದಾರೆ. 
ದೊಡ್ಡ ನಿರ್ದೇಶಕರು, ನಿರ್ಮಾಪಕರು ಮತ್ತು ನಟರು ತಮ್ಮ ಲೈಂಗಿಕ ತೃಷೆಯನ್ನು ತೀರಿಸಿಕೊಳ್ಳಲು ಸ್ಟುಡಿಯೋಗಳನ್ನು ವೇಶ್ಯಾವಾಟಿಕೆಗಳಂತೆ ಬಳಸಿಕೊಳ್ಳುತ್ತಿದ್ದಾರೆ. ಸ್ಟುಡಿಯೋಗಳ ಒಳಗೆ ಯಾರು ಬರುವುದಿಲ್ಲ ಎಂಬ ಧೈರ್ಯದಿಂದ ಇದು ನಡೆಯುತ್ತಿದೆ ಎಂದು ಹೇಳಿದ್ದಾರೆ. 
ಇನ್ನು ತಮ್ಮನ್ನು ಲೈಂಗಿಕವಾಗಿ ಬಳಸಿಕೊಂಡ ಖ್ಯಾತ ನಿರ್ಮಾಪಕರ ಪುತ್ರನ ಹೆಸರು ಹಾಗೂ ಫೋಟೋವನ್ನು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.