ಸಿನಿಮಾ ಸುದ್ದಿ

ಚಂದನವನಕ್ಕೆ ಮತ್ತೊಬ್ಬ ನಟಿ ಐಶ್ವರ್ಯಾ ಪ್ರಸಾದ್ ಎಂಟ್ರಿ

ಸ್ಯಾಂಡಲ್ ವುಡ್ ಗೆ ಇತ್ತೀಚೆಗೆ ಹೊಸ ಪ್ರತಿಭೆಗಳ ಆಗಮನವಾಗುತ್ತಿದೆ. ಅವರಲ್ಲೊಬ್ಬರು ಐಶ್ವರ್ಯಾ ಪ್ರಸಾದ್...

ಚಂದನವನಕ್ಕೆ ಮತ್ತೊಬ್ಬ ನಟಿ ಐಶ್ವರ್ಯಾ ಪ್ರಸಾದ್ ಎಂಟ್ರಿ
ಐಶ್ವರ್ಯಾ ಪ್ರಸಾದ್
Published On :

ಸ್ಯಾಂಡಲ್ ವುಡ್ ಗೆ ಇತ್ತೀಚೆಗೆ ಹೊಸ ಪ್ರತಿಭೆಗಳ ಆಗಮನವಾಗುತ್ತಿದೆ. ಅವರಲ್ಲೊಬ್ಬರು ಐಶ್ವರ್ಯಾ ಪ್ರಸಾದ್. ಅರವಿಂದ ಕೌಶಿಕ್ ನಿರ್ದೇಶನದ ಶಾರ್ದೂಲ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟಿರುವ ಈ ನಟಿ ನಂತರ ಗುರು ದೇಶಪಾಂಡೆ ನಿರ್ದೇಶನದ ಪಡ್ಡೆಹುಲಿಯಲ್ಲಿ ಅಭಿನಯಿಸಲಿದ್ದಾರೆ.

ಶ್ರೇಯಸ್ ಮಂಜು ಅವರ ಜೊತೆಗೆ ನಾಯಕಿಯಾಗಿ ಪಡ್ಡೆಹುಲಿಯಲ್ಲಿ ಕಾಣಿಸಿಕೊಳ್ಳಲಿರುವ ಐಶ್ವರ್ಯಾ ಪ್ರಸಾದ್ ಜೊತೆಗೆ ಮತ್ತೊಬ್ಬ ನಾಯಕಿ ನಿಶ್ವಿಕಾ ನಾಯ್ಡು ಕೂಡ ಅಭಿನಯಿಸಲಿದ್ದಾರೆ.

ಮೈಸೂರು ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಐಶ್ವರ್ಯಾ ಪ್ರಸಾದ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮುನ್ನ ಮಾಡೆಲ್ ಆಗಿದ್ದವರು. ಮಿಸ್ ಮೈಸೂರು ಪಟ್ಟ ಗೆದ್ದುಕೊಂಡಿರುವ ಐಶ್ವರ್ಯಾ 2017ರ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ಅಂತಿಮ 10 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಪುನೀತ್ ರಾಜ್ ಕುಮಾರ್ ಜೊತೆಗೆ ಟಿವಿ ಜಾಹಿರಾತೊಂದರಲ್ಲಿ ಭಾಗಿಯಾಗಿದ್ದು ಅವರಿಗೆ ಸ್ಯಾಂಡಲ್ ವುಡ್ ಗೆ ಪ್ರವೇಶ ಪಡೆಯಲು ಸಹಾಯವಾಯಿತು ಎನ್ನುತ್ತಾರೆ.

ಬಾಲಿವುಡ್ ಸುಂದರಿ ಮೌನಿ ರಾಯ್ ಜೊತೆಗೆ ಐಶ್ವರ್ಯಾ ಅವರನ್ನು ಹೋಲಿಕೆ ಮಾಡುವುದುಂಟು, ನನಗೆ ನಟನಾ ತರಬೇತಿಗೆ ಸೇರಿದಾಗ ನಟನೆಯಲ್ಲಿ ಆಸಕ್ತಿ ಮೂಡಿತು. ಅಲ್ಲಿ ನಾನು ದೊಡ್ಡ ದೊಡ್ಡ ಜಾಹಿರಾತುಗಳು ಮತ್ತು ವಾಣಿಜ್ಯ ಬ್ರಾಂಡ್ ಪ್ರಚಾರಗಳಲ್ಲಿ ಭಾಗಿಯಾದೆ. ಮಾಡೆಲ್ ಆಗಬೇಕೆಂದರೆ ನಿಮ್ಮ ವ್ಯಕ್ತಿತ್ವವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು ಆದರೆ ನಾನು ಕಲಾವಿದೆಯಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸಿದೆ ಎನ್ನುತ್ತಾರೆ ಐಶ್ವರ್ಯಾ.

ಐಶ್ವರ್ಯಾ ಸಿನಿಮಾ ಹಿನ್ನೆಲೆಯವರೇನಲ್ಲ. ಅವರ ತಾತ ಚಿನ್ನಸ್ವಾಮಿ ರಾಜಕಾರಣಿ ಮತ್ತು ಮೂಲತಃ ಕೃಷಿಕ ಕುಟುಂಬ. ಈ ಚಿತ್ರದಲ್ಲಿ ಅವರು ಕಾಲೇಜಿಗೆ ಹೋಗುವ ಹುಡುಗಿ ಪಾತ್ರ ನಿರ್ವಹಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.