ಡಬ್ಬಿಂಗ್ ಗೆ ತಯಾರಾದ ನಿರೂಪ್ 'ರಾಜರಥ'
ಅನುಪ್ ಭಂಡಾರಿ ನಿರ್ದೇಶನದ ರಾಜರಥ ಚಿತ್ರೀಕರಣ ಪೂರ್ನಗೊಂಡಿದ್ದು ಇದೀಗ ಡಬ್ಬಿಂಗ್ ಕೆಲಸ ನಡೆಯುತ್ತಿದೆ.

Published On :
ಬೆಂಗಳೂರು: ಅನುಪ್ ಭಂಡಾರಿ ನಿರ್ದೇಶನದ ರಾಜರಥ ಚಿತ್ರೀಕರಣ ಪೂರ್ನಗೊಂಡಿದ್ದು ಇದೀಗ ಡಬ್ಬಿಂಗ್ ಕೆಲಸ ನಡೆಯುತ್ತಿದೆ. ಆದರೆ, ಚಿತ್ರಕ್ಕೆ ಸಂಬಂಧಿಸಿ ಒಂದು ಹಾಡಿನ ಶೂಟಿಂಗ್ ಬಾಕಿ ಉಳಿದಿದೆ, ನಿರೂಪ್ ಭಂಡಾರಿ ಅವರು ಗಾಯದಿಂದ ಚೇತರಿಸಿಕೊಂಡ ನಂತರ ಹಾಡಿನ ಚಿತ್ರೀಕರಣ ನಡೆಸುವುದಾಗಿ ಚಿತ್ರತಂದ ತಿಳಿಸಿದೆ. ಮೈಸೂರಿನಲ್ಲಿ ನಡೆದಿದ್ದ ಸಾಹಸ ದೃಷ್ಯದ ಚಿತ್ರೀಕರಣದ ವೇಳೆ ನಿರೂಪ್ ಕಯ್ ಗೆ ಬಲವಾದ ಗಾಯವಾಗಿತ್ತು.
ಏತನ್ಮಧ್ಯೆ, ಪೋಸ್ಟ್ ಪ್ರೊದಕ್ಷನ್ ಕಾರ್ಯ ದಲ್ಲಿ ನಿರತವಾಗಿರುವ ಚಲನಚಿತ್ರ ನಿರ್ಮಾಪಕರು ಅಕ್ಟೋಬರ್ ನಲ್ಲಿ ಟೀಸರ್ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ, ಅಜಯ್ ರೆಡ್ಡಿ, ವಿಶು ದೀಪಕಾಗ್ರಿ, ಅಂಜು ವಲ್ಲಭ ಮತ್ತು ಸತೀಶ್ ಶಾಸ್ತ್ರಿ ಈ ರೊಮ್ಯಾಂಟಿಕ್ ಕಾಮಿಡಿ ಚಿತ್ರದ ನಿರ್ಮಾಪಕರಾಗಿದ್ದಾರೆ
ಚಿತ್ರದಲ್ಲಿ ಆವಂತಿಕಾ ಶೆಟ್ಟಿ ಪ್ರಮುಖ ನಾಯಕಿ ಪಾತ್ರ ನಿರ್ವಹಿಸಿದರೆ ಇವರೊಡನೆ ಆರ್ಯ, ಪಿ. ರವಿಶಂಕರ್ ನಟಿಸಿದ್ದಾರೆ.
ಚಿತ್ರಕ್ಕೆ ಅನೂಪ್ ಭಂದಾರಿ ಸಂಗೀತ ಸಂಯೋಜಿಸಿದ್ದಾರೆ. ಅಜನೀಶ್ ಲೋಕನಾಥ್, ಬ್ಯಾಕ್ ಗ್ರೌಂಡ್ ಸ್ಕೋರ್, ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


