ಸಿನಿಮಾ ಸುದ್ದಿ

ಹೆಂಡತಿಯಿಂದ ಹೊಡೆಸಿಕೊಂಡ ಹಲವು ಶೂಗಳು ನನ್ನೊಂದಿಗಿವೆ: ಸಂಜಯ್ ದತ್

ಬಾಲಿವುಡ್ ನಟ ಸಂಜಯ್ ದತ್ ಭೂಮಿ ಸಿನಿಮಾದ ಮೂಲಕ ನಟನೆಗೆ ವಾಪಾಸಾಗಿದ್ದಾರೆ. ಝೂಮ್ ಚಾನೆಲ್ ನಲ್ಲಿ ಪ್ರಸಾರವಾಗುವ ಯಾರ್ ಮೇರಾ ಸೂಪರ್ ...

ಹೆಂಡತಿಯಿಂದ ಹೊಡೆಸಿಕೊಂಡ ಹಲವು ಶೂಗಳು ನನ್ನೊಂದಿಗಿವೆ: ಸಂಜಯ್ ದತ್
ಸಂಜಯ್ ದತ್
Published On :
ಮುಂಬಯಿ: ಬಾಲಿವುಡ್ ನಟ ಸಂಜಯ್ ದತ್ ಭೂಮಿ ಸಿನಿಮಾದ ಮೂಲಕ ನಟನೆಗೆ ವಾಪಾಸಾಗಿದ್ದಾರೆ. ಝೂಮ್ ಚಾನೆಲ್ ನಲ್ಲಿ ಪ್ರಸಾರವಾಗುವ ಯಾರ್ ಮೇರಾ ಸೂಪರ್ ಸ್ಟಾರ್ ಸೀಸನ್-2 ನಲ್ಲಿ ತಮ್ಮ ವಯಕ್ತಿಕ ಜೀವನದ ಬಗ್ಗೆ  ಜೋಕ್ ಮಾಡಿದ್ದಾರೆ.
ತಮ್ಮ ಕೆಲವು ಶೂಗಳನ್ನು ಮೆಕ್ಸಿಕೋದಲ್ಲಿ ತಯಾರಿಸಲಾಗಿದೆ, ಇವು ನನ್ನ ಬೂಟುಗಳು, ಇವನ್ನು ಮೆಕ್ಸಿಕೋದಲ್ಲಿ  ಮೆಷಿನ್ ಬಳಸದೇ ಕೈಯ್ಯಿಂದ ತಯಾರಿಸಲಾಗಿದೆ. ಆದರೆ ಆಗ್ರಾದಲ್ಲಿರು ಮೋಚಿ ಈ ರೀತಿಯ ಶೂಗಳನ್ನು ತಯಾರಿಸಲಾರ, ಮೆಕ್ಸಿಕೋದಿಂದ ತಂದ ಈ ಶೂಗಳಿಂದ ನಾನು ಹಲವು ತೊಂದರೆಗಳನ್ನು ಅನುಭವಿಸಿದ್ದೇನೆ. ಈ ಶೂ ಅಂಗಡಿಯ ಹೆಸರು ಬ್ಯಾಕ್ ಅಟ್ ದಿ ರ್ಯಾಂಚ್ ಎಂದು ಸಂಜಯ್ ಹೇಳಿದ್ದಾರೆ.
ಆತ ಶೂಗಳ ವಿನ್ಯಾಸದ ಮಾದರಿಯನ್ನು ಕಳುಹಿಸಿ, ನಿಮಗೆ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಿ ಎಂದು ಹೇಳುತ್ತಾನೆ, ಆದರೆ ಇದು ಲೆದರ್ ಅಲ್ಲ, ಪ್ಲಾಸ್ಟಿಕ್, ನನ್ನ ಹೆಂಡತಿ ಮಾನ್ಯತಾ  ತಲೆ ಮೇಲೆ ಹೊಡೆದ ಶೂಗಳನ್ನ ನನ್ನ ಜೊತೆಯಲ್ಲಿಟ್ಟುಕೊಂಡಿದ್ದೇನೆ ಎಂದು ತಮಾಷೆ ಮಾಡಿದ್ದಾರೆ.
2016ರ್ಲಿ ಪುಣೆ ಜೈಲಿನಿಂದ ಬಿಡುಗಡೆಯಾದ ಮೇಲೆ ನಟಿಸುತ್ತಿರುವ ಮೊದಲ ಸಿನಿಮಾ ಇದಾಗಿದೆ. ಇದೊಂದು ತಂದೆ -ಮಗಳ ಕುರಿತಾದ ಸಿನಿಮಾವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.