ಹನಿಪ್ರೀತ್ ಜೀವನ ಚಿತ್ರಕಥೆ: ಗುರ್ಮಿತ್ ದತ್ತುಪುತ್ರಿ ಪಾತ್ರದಲ್ಲಿ ರಾಖಿ ಸಾವಂತ್
ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಜೈಲು ಪಾಲಾದ ಬಳಿಕ ಆತನ ದತ್ತು ಪುತ್ರಿ, ಪಾಪಾಸ್ ಏಂಜಲ್ ಖ್ಯಾತಿಯ ಹನಿಪ್ರೀತ್ ಇನ್ಸಾನ್ ಭಾರೀ...

Published On :
ಮುಂಬೈ: ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಜೈಲು ಪಾಲಾದ ಬಳಿಕ ಆತನ ದತ್ತು ಪುತ್ರಿ, ಪಾಪಾಸ್ ಏಂಜಲ್ ಖ್ಯಾತಿಯ ಹನಿಪ್ರೀತ್ ಇನ್ಸಾನ್ ಭಾರೀ ಚರ್ಚೆಯಲ್ಲಿದ್ದಾಳೆ.
ಇದೀಗ ಆಕೆಯ ಜೀವಿನ ಚರಿತ್ರೆ ಆಧಾರಿತ ಸಿನಿಮಾ ಬರಲಿದೆ ಎಂಬ ಸುದ್ದಿ ಹರಿದಾಡತೊಡಗಿದ್ದು, ಹನಿಪ್ರೀತ್ ಪಾತ್ರದಲ್ಲಿ ಬಾಲಿವುಡ್ ಬೆಡಗಿ ರಾಖಿ ಸಾವಂತ್ ಕಾಣಿಸಿಕೊಳ್ಳಲಿದ್ದಾಳೆಂದು ಹೇಳಲಾಗುತ್ತಿದೆ.
ಹನಿಪ್ರೀತ್ ಪಾತ್ರದಲ್ಲಿ ನಟಿಸುವುದಕ್ಕೆ ರಾಖಿ ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಹನಿಪ್ರೀತ್ ಬಗ್ಗೆ 7-8 ವರ್ಷಗಳಿಂದ ತಿಳಿದಿರುವುದರಿಂದ, ಆಕೆಯ ಪಾತ್ರವನ್ನು ನಾನೇ ನಿರ್ವಹಿಸುತ್ತಿದ್ದೇನೆ. ಪ್ರಸ್ತುತ ಹನಿಪ್ರೀತ್ ಲಂಡನ್ ನಲ್ಲಿದ್ದಾಳೆಂದು ನನಗನ್ನಿಸುತ್ತಿದೆ. ನಾನು ಹಾಗೂ ನನ್ನ ಸಹೋದರ ರಾಕೇಶ್ ಸಾವಂತ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದೇವೆಂದು ರಾಖಿ ಹೇಳಿಕೊಂಡಿದ್ದಾರೆ.
ಪ್ರಸ್ತುತ ನಾನು ದೆಹಲಿಯಲ್ಲಿದ್ದು, ಇಲ್ಲಿಯೇ ಚಿತ್ರೀಕರಣವನ್ನು ನಡೆಸುತ್ತೇವೆ. ಚಿತ್ರ ಸೆಟ್ ಕೂಡ ಡೇರಾ ಸಚ್ಚಾ ಸೌದಾದಂತೆಯೇ ಇರುತ್ತದೆ. ಬಾಬಾ ಗುರ್ಮಿತ್'ನ ಪ್ರತೀಯೊಂದು ಮುಖವನ್ನು ಬಯಲು ಮಾಡುತ್ತೇನೆಂದು ನಾನು ಈ ಮೂಲಕ ಪ್ರೇಕ್ಷಕರಿಗೆ ಭರವಸೆ ನೀಡುತ್ತೇನೆಂದು ರಾಖಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
BiopicRakhi Sawantರಾಖಿ ಸಾವಂತ್Gurmeet Ram Rahim Singhಗುರ್ಮಿತ್ ರಾಮ್ ರಹೀಮ್ ಸಿಂಗ್Honeypreet Insanಹನಿಪ್ರೀತ್ ಇನ್ಸಾನ್ಜೀನಾಧರಿತ ಚಿತ್ರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


