ಕಲರ್ಸ್ ಸೂಪರ್ ಚಾನೆಲ್ ನಲ್ಲಿ ಮನೆದೇವ್ರು ಧಾರಾವಾಹಿ
ಕಲರ್ಸ್ ಕನ್ನಡದಲ್ಲಿ ರಾತ್ರಿ ವೇಳೆ ಪ್ರಸಾರವಾಗುತ್ತಿದ್ದ ಮನೆದೇವ್ರು ಧಾರಾವಾಹಿ ಇನ್ನು ಮುಂದೆ ಕಲರ್ಸ್ ಸೂಪರ್‍ನಲ್ಲಿ ಪ್ರಸಾರವಾಗಲಿದೆ.

ಮನೆದೇವ್ರು ಸೀರಿಯಲ್ ವೀಕ್ಷಕರಿಗೊಂದು ಸಿಹಿ ಸುದ್ದಿ!. ಕಲರ್ಸ್ ಕನ್ನಡದಲ್ಲಿ ರಾತ್ರಿ ವೇಳೆ ಪ್ರಸಾರವಾಗುತ್ತಿದ್ದ ಮನೆದೇವ್ರು ಧಾರಾವಾಹಿ ಇನ್ನು ಮುಂದೆ ಕಲರ್ಸ್ ಸೂಪರ್‍ನಲ್ಲಿ ಪ್ರಸಾರವಾಗಲಿದೆ. ಇದೇ ಸೆಪ್ಟೆಂಬರ್ 18ರಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಸಾಯಂಕಾಲ 6 ಗಂಟೆಗೆ ನಿಮ್ಮ ಮೆಚ್ಚಿನ ಮನೆದೇವ್ರು ಧಾರಾವಾಹಿಯನ್ನು ಆನಂದಿಸಬಹುದು.
ವೀಕ್ಷಕರ ಒತ್ತಾಸೆಯ ಮೇರೆಗೆ ಹಾಗೂ ಒಂದೊಳ್ಳೆ ಕತೆಯನ್ನು ಪ್ರಸಾರ ಮಾಡುವುದಕ್ಕಾಗಿ ಕಲರ್ಸ್ ಸೂಪರ್ ವಾಹಿನಿಗೆ ಮನೆದೇವ್ರು ಧಾರಾವಾಹಿಯನ್ನು ವರ್ಗಾಯಿಸಲಾಗಿದೆ.
ಸ್ತ್ರೀ ಪುರುಷನ ಅಧೀನ ಎನ್ನುವ, ಪುರುಷ ಪ್ರಧಾನ ಕುಟುಂಬದ ಯಜಮಾನ ಜಯರಾಮನ ಮನೆತನಕ್ಕೆ ಸೊಸೆಯಾಗಿ ಬರುವ ನಾಯಕಿ ಜಾನಕಿಯ ಸುತ್ತ ಹೆಣೆದಿರುವಕತೆ ಮನೆದೇವ್ರು. ಹೆಣ್ಣಿಗೆ ಸೂಕ್ತ ಸ್ಥಾನಮಾನಗಳು ದೊರೆಯುವಂತೆ ಮಾಡುವುದೇ ಜಾನಕಿಯ ಮುಂದಿರುವ ಸವಾಲು. ಜಯರಾಮನ ಮಗನ ಹೆಂಡತಿಯಿಂದ ತನ್ನ ಯಜಮಾನಿಕೆ, ಹೆಣ್ಣಿನ ಮೇಲಿನ ದಬ್ಬಾಳಿಕೆ ಅಂತ್ಯವಾಗುತ್ತೆಂಬುದು ಭವಿಷ್ಯವಾಣಿ. ಅವನ ಮಗ ಕಥಾನಾಯಕ ಸೂರ್ಯ ಗುಟ್ಟಾಗಿ ಜಾನಕಿಯನ್ನು ಮದುವೆಯಾಗಿರುತ್ತಾನೆ. ಕುಟುಂಬದ ಕಟುಸತ್ಯವನ್ನರಿತ ಜಾನಕಿ ಅಮೇರಿಕಾಕ್ಕೆ ಹೋಗಬೇಕೆನ್ನುವ ತನ್ನ ಕನಸನ್ನೇ ತ್ಯಾಗಮಾಡಿ ಸೀತೆ ಎಂಬ ಹೆಸರಿನಲ್ಲಿ ಸೂರ್ಯನ ಮನೆಗೆ ಕೆಲಸದವಳಾಗಿ ಬಂದು ಸೇರುತ್ತಾಳೆ. ಮನೆಕೆಲಸದವಳಾದರು ಕೆಲವೊಂದು ಪರಿಸ್ಥಿತಿಗಳಲ್ಲಿ ಮನೆಯ ಯಜಮಾನ ಜಯರಾಮ, ಅವನ ತಮ್ಮ ರಘುರಾಮ ಹಾಗೂ ಮಗ ಸೂರ್ಯ ಅಪಾಯದಲ್ಲಿರುವಾಗ ಪಾರು ಮಾಡಿ ಮನೆಯವರಿಗೆ ಹತ್ತಿರವಾಗಿರುತ್ತಾಳೆ. ಸೂರ್ಯಗುಟ್ಟಾಗಿ ಮದುವೆಯಾಗಿದ್ದಾನೆಎಂದು ಮನೆಯವರೆಲ್ಲರಿಗೂ ತಿಳಿದರೂ, ಅವಳು ಯಾರು ಎಂದು ಕಂಡುಹಿಡಿಯಲಾಗದೆ ಇದ್ದಾಗ ಜಯರಾಮ ಸೂರ್ಯನಿಗೆ ಮತ್ತೊಂದು ಮದುವೆ ಮಾಡಿದರೆ, ಅವನಿಗಿರುವ ಕಂಟಕ ದೂರಾಗುತ್ತದೆಂದು ಹೆಣ್ಣು ಹುಡುಕಿ ಮದುವೆ ಮಾಡಲು ಯೋಚಿಸುತ್ತಾನೆ. ಆದರೆ ವಿಧಿಯಾಟವೇ ಬೇರೆ ಸೂರ್ಯನಿಗೆ ಒಪ್ಪುವಂತಹ ಹುಡುಗಿ ನಮ್ಮ ಸೀತೆ ಎಂದು ಮಗನಿಗೆ ಮನೆಕೆಲಸದವಳೊಂದಿಗೆ ಮದುವೆ ಮಾಡುತ್ತಾನೆ. ಮನೆಯವರೆಲ್ಲರ ಮುಂದೆ ಸೂರ್ಯ-ಸೀತೆಯರು ಸಪ್ತಪದಿ ತುಳಿಯುತ್ತಾರೆ. ಇವರ ಮದುವೆಯ ಕೊನೆಯ ಕ್ಷಣದಲ್ಲಿ ರಘುರಾಮನಿಗೆ ಸೀತೆ ಬೇರೆಯಾರೂ ಅಲ್ಲ ಸೂರ್ಯನ ಗುಟ್ಟಾದ ಹೆಂಡತಿ ಜಾನಕಿ ಎಂದು ತಿಳಿಯುತ್ತದೆ. ಈಗ ಸೀತೆಯೇ ಜಾನಕಿ ಎಂಬ ಸತ್ಯ ಗೊತ್ತಾದರೂ ರಘುರಾಮ ಮುಚ್ಚಿಡುತ್ತಾನೆ. ಕಾರಣ ಅಣ್ಣ ಜಯರಾಮ್‍ನಿಂದಾಗುವ ಅವಮಾನದ ವಿರುದ್ಧ ದ್ವೇಷ ತೀರಿಸಿಕೊಳ್ಳಲು ಸತ್ಯ ತಿಳಿದರೂ ಮುಚ್ಚಿಟ್ಟು ಜಾನಕಿಯನ್ನೇ ಹಗೆತನಕ್ಕೆ ಅಸ್ತ್ರವಾಗಿಸಿಕೊಳ್ಳಬೇಕೆಂದು ಯೋಚಿಸುತ್ತಾನೆ. ಸೀತೆಯಾಗಿ ಮನೆಸೊಸೆಯಾದ ಜಾನಕಿ ಕುಟುಂಬದಲ್ಲಿರುವ ಸವಾಲುಗಳನ್ನು ಭೇದಿಸಬಲ್ಲಳೇ? ಈ ಪಯಣದಲ್ಲಿ ಅವಳು ಯಾವರೀತಿಯ ಸಂಕಷ್ಟಕ್ಕೆ ಸಿಲುಕುತ್ತಾಳೆ? ತನ್ನ ಕನಸನ್ನೇ ತ್ಯಾಗಮಾಡಿದ ಜಾನಕಿ ಮನೆಯ ಪರಿಸ್ಥಿಯನ್ನು ಬದಲಾಯಿಸಬಲ್ಲಳೇ? ಎಂಬುದೇ ಈ ಕತೆ.
ಮನೆದೇವ್ರು ಧಾರಾವಾಹಿಯನ್ನು ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಿ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


