'ಗರ್ಲ್ ನಾಟ್ ಎ ಸಿನ್' ಹೊಸ ಮ್ಯೂಸಿಕ್ ವಿಡಿಯೋದಲ್ಲಿ ನಟಿ ಮಯೂರಿ
ನಟಿ ಮಯೂರಿ ಕ್ಯಾತರಿ ಮೊದಲ ಮ್ಯೂಸಿಕ್ ವಿಡಿಯೋ ಟ್ರೇಲರ್ ರಿಲೀಸ್ ಆಗಿದ್ದು, ಹಾಡು ಒಂದು ವಾರದ ನಂತರ ಬಿಡುಗಡೆಯಾಗಲಿದೆ. ಗರ್ಲ್ ನಾಟ್ ಎ ಸಿನ್ ...

Published On :
ಬೆಂಗಳೂರು: ನಟಿ ಮಯೂರಿ ಕ್ಯಾತರಿ ಮೊದಲ ಮ್ಯೂಸಿಕ್ ವಿಡಿಯೋ ಟ್ರೇಲರ್ ರಿಲೀಸ್ ಆಗಿದ್ದು, ಹಾಡು ಒಂದು ವಾರದ ನಂತರ ಬಿಡುಗಡೆಯಾಗಲಿದೆ. ಗರ್ಲ್ ನಾಟ್ ಎ ಸಿನ್ ಎಂಬ ಮ್ಯೂಸಿಕ್ ವಿಡಿಯೋದಲ್ಲಿ ನಟಿಸಿದ್ದಾರೆ.
ಈ ಹಾಡಿನ್ನು ಅಬೇ ಛಾಜಡ್ ಬರೆದು ಅವರೆ ಸಂಗೀತ ಸಂಯೋಜಿಸಿದ್ದಾರೆ. ಪ್ರತಿನಿತ್ಯ ಹೆಣ್ಣು ಮಕ್ಕಳಿಗೆ ವಿಧಿಸುವ ನಿರ್ಬಂಧಗಳ ಬಗ್ಗೆ ಇದರಲ್ಲಿ ಹೇಳಲಾಗಿದೆ, ಇದು ನನಗೆ ತುಂಬಾ ಹತ್ತಿರವಾಗಿದ್ದು, ಸಮಾಜಕ್ಕೆ ಸಂದೇಶ ನೀಡಲಿದೆ ಎಂದು ಮಯೂರಿ ಹೇಳಿದ್ದಾರೆ.
ತನ್ನ ಮೊದಲ ಮ್ಯೂಸಿಕ್ ವಿಡಿಯೋವನ್ನು ಎಲ್ಲಾ ಯುವತಿಯರಿಗೆ ಅರ್ಪಿಸುವುದಾಗಿ ಹೇಳಿಕೊಂಡಿದ್ದಾರೆ, ಪ್ರತಿದಿನದ ಎಲ್ಲಾ ಸಂತೋಷಗಳಿಗೂ ಯುವತಿ ಹೊಂದಿಕೊಳ್ಳುವುದು, ಆಕೆಯನ್ನು ಹುಟ್ಟಿನಿಂದಲೇ ನಿಯಂತ್ರಿಸಲಾಗುತ್ತದೆ, ಹೇಗೆ ಕುಳಿತು ಕೊಳ್ಳಬೇಕು, ಹೇಗೆ ಮಾತನಾಡಬೇಕು, ಹೇಗೆ ಉಡುಪು ಧರಿಸಬೇಕು, ಯಾವ ರೀತಿಯ ಗೆಳೆಯರನ್ನು ಆಯ್ಕೆ ಮಾಡಬೇಕು ಎಂದು ನಿರ್ಬಂಧ ಹೇರುವುದರ ಜೊತೆಗೆ ನೈಟ್ ಪಾರ್ಟ್ ಗಳಲ್ಲಿ ಭಾಗವಹಿಸುವ ಅವಕಾಶ ಆಕೆಗಿಲ್ಲ, ಆಕೆ ಹೆಣ್ಣು ಎಂಬ ಕಾರಣಕ್ಕೆ ಎಲ್ಲದರಿಂದಲೂ ಆ ಒಂಟಿ ಹುಡುಗಿಗೆ ನಿರ್ಬಂದ ಹೇರಲಾಗುತ್ತದೆ ಎಂದು ಹೇಳಿದ್ದಾರೆ.
ವಿಶಾಲ್ ಮೆಹ್ತಾ ಮತ್ತು ಅಬೇ ಈ ವಿಡಿಯೋ ನಿರ್ಮಿಸಿದ್ದು, ಶಾಂಘ್ವಿ ಭಾಯಣ ಹಿನ್ನೆಲೆ ಗಾಯನ ನೀಡಿದ್ದಾರೆ, ಹಾಡನ್ನು ಪಟ್ಟಾಯದಲ್ಲಿ ಚಿತ್ರೀಕರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
music videoಮಯೂರಿMayuri KyatariGirl not a SinEnglish songಗರ್ಲ್ ನಾಟ್ ಎ ಸಿನ್ಇಂಗ್ಲೀಷ್ ಹಾಡುಮ್ಯೂಸಿಕ್ ವಿಡಿಯೋ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


