ಸಿನಿಮಾ ಸುದ್ದಿ

ವಿನಯ್ ರಾಜ್ ಕುಮಾರ್ ಅಭಿನಯದ ಅನಂತುಗೆ ಲತಾ ಹೆಗ್ಡೆ ನುಸ್ರತ್?

ಸುಧೀರ್ ಶಾನುಭೋಗ್ ಅವರ ಚೊಚ್ಚಲ ನಿರ್ದೇಶನದ ಚಿತ್ರ ಅನಂತು v/s ನುಸ್ರತ್ ನಲ್ಲಿ ವಿನಯ್ ರಾಜ್...

ವಿನಯ್ ರಾಜ್ ಕುಮಾರ್ ಅಭಿನಯದ ಅನಂತುಗೆ ಲತಾ ಹೆಗ್ಡೆ ನುಸ್ರತ್?
ವಿನಯ್ ರಾಜ್ ಕುಮಾರ್ ಮತ್ತು ಲತಾ ಹೆಗ್ಡೆ
Published On :
ಬೆಂಗಳೂರು: ಸುಧೀರ್ ಶಾನುಭೋಗ್ ಅವರ ಚೊಚ್ಚಲ ನಿರ್ದೇಶನದ ಚಿತ್ರ ಅನಂತು v/s ನುಸ್ರತ್ ನಲ್ಲಿ ವಿನಯ್ ರಾಜ್ ಕುಮಾರ್ ವಕೀಲ ಪಾತ್ರ ನಿರ್ವಹಿಸುತ್ತಿದ್ದಾರೆ. ನಾಯಕಿಗಾಗಿ ಹುಡುಕಾಡುತ್ತಿದ್ದ ಚಿತ್ರತಂಡ ನುಸ್ರತ್ ಪಾತ್ರಕ್ಕೆ ಲತಾ ಹೆಗ್ಡೆಯವರನ್ನು ಆಯ್ಕೆ ಮಾಡಿದೆ ಎಂದು ತಿಳಿದುಬಂದಿದೆ.
ನ್ಯೂಜಿಲೆಂಡ್ ನಲ್ಲಿ ಬೆಳೆದ ಕನ್ನಡ ನಟಿ ಲತಾ ಹೆಗ್ಡೆ ಮಹೇಶ್ ಬಾಬು ಅವರ ಅತಿರಥ ಚಿತ್ರದಲ್ಲಿ ಚೇತನ್ ಗೆ ನಾಯಕಿಯಾಗಿ ಆಯ್ಕೆಯಾಗಿದ್ದರು. ಈ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆಯಾದ ನಂತರ ಲತಾ ಹೆಗ್ಡೆ ಚಿತ್ರ ನಿರ್ಮಾಪಕರ ಗಮನ ಸೆಳೆದಿದ್ದಾರೆ.
ಇದೀಗ ಸುಧೀರ್ ನುಸ್ರತ್ ಪಾತ್ರಕ್ಕೆ ಅವರನ್ನು ಕೇಳಿದ್ದಾರೆ ಎನ್ನಲಾಗುತ್ತಿದೆ.ಆದರೆ ನಿರ್ದೇಶಕರು ಹಿರೋಯಿನ್ ಗೆ ಲತಾ  ಆಯ್ಕೆಯಾಗಿರುವುದರ ಬಗ್ಗೆ ಇನ್ನೂ ದೃಢಪಡಿಸಿಲ್ಲ. ನಾಯಕಿಯ ಹೆಸರನ್ನು ಬಹಿರಂಗಪಡಿಸಲು ಇನ್ನು ಕೆಲ ದಿನಗಳು ಬೇಕು ಎನ್ನುತ್ತಾರೆ ನಿರ್ದೇಶಕರು.
ಚಿತ್ರದ ಮುಹೂರ್ತ ಸೆಪ್ಟೆಂಬರ್ 4ರಂದು ನಡೆದಿದ್ದು ಅಕ್ಟೋಬರ್ ಮೊದಲ ವಾರದಲ್ಲಿ ಶೂಟಿಂಗ್ ಪ್ರಾರಂಭಿಸಲಿದೆ. ನಾಯಕಿ ಜೊತೆ ಫೊಟೊಶೂಟ್ ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.
ಸುನದ್ ಗೌತಮ್ ಸಂಗೀತ ನೀಡುವ ಅನಂತ್ v/s ನುಸ್ರತ್ ಚಿತ್ರಕ್ಕೆ ಅಭಿಷೇಕ್ ಕಾಸರಗೋಡು ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.