ಸಿನಿಮಾ ಸುದ್ದಿ

ಎನ್ಆರ್ಐ ಆದ್ರೂ, ಅಚ್ಚ ದೇಸಿ ಹುಡುಗಿಯಾಗಿ ಸಾನ್ವಿ

ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ತಾರಕ್ ಚಿತ್ರದಲ್ಲಿ ದರ್ಶನ್ ಫುಟ್ಬಾಲ್ ಆಟಗಾರನ ಪಾತ್ರದಲ್ಲಿ ಅಭಿನಯಿಸಿದ್ದು ದರ್ಶನ್ ಗೆ ಸಾಥ್ ನೀಡಿರುವ ಸಾನ್ವಿ ಶ್ರೀವಾತ್ಸವ ಪಾತ್ರದ...

ಎನ್ಆರ್ಐ ಆದ್ರೂ, ಅಚ್ಚ ದೇಸಿ ಹುಡುಗಿಯಾಗಿ ಸಾನ್ವಿ
ಸಾನ್ವಿ ಶ್ರೀವಾತ್ಸವಾ
Published On :
ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ತಾರಕ್ ಚಿತ್ರದಲ್ಲಿ ದರ್ಶನ್ ಫುಟ್ಬಾಲ್ ಆಟಗಾರನ ಪಾತ್ರದಲ್ಲಿ ಅಭಿನಯಿಸಿದ್ದು ದರ್ಶನ್ ಗೆ ಸಾಥ್ ನೀಡಿರುವ ಸಾನ್ವಿ ಶ್ರೀವಾತ್ಸವ ಪಾತ್ರದ ಕುರಿತ ಪರಿಚಯವನ್ನು ಚಿತ್ರತಂಡ ಮಾಡಿಕೊಟ್ಟಿದೆ. 
ನಟಿ ಸಾನ್ವಿ ತಮ್ಮ ಪಾತ್ರದ ಕುರಿತು ಚಿತ್ರವೊಂದನ್ನು ಟ್ವೀಟ್ ಮಾಡಿದ್ದು ಈ ಫೋಟೋ ಚಲನಚಿತ್ರದಲ್ಲಿ ನನ್ನ ಪಾತ್ರವನ್ನು ಸಂಪೂರ್ಣವಾಗಿ ವಿವರಿಸುತ್ತದೆ ಎಂದು ಟ್ವೀಟಿಸಿದ್ದಾರೆ. 
ತಾರಕ್ ಚಿತ್ರದಲ್ಲಿ ಸಾನ್ವಿ ಎನ್ಆರ್ಐ ಪಾತ್ರದಲ್ಲಿ ನಟಿಸುತ್ತಿದ್ದು ಪಾಶ್ಚಾತ್ಯ ದೇಶದಲ್ಲಿ ಅಚ್ಚ ಭಾರತದ ದೇಸಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹಣೆಗೆ ತಿಲಕವಿಟ್ಟು ಸ್ಕರ್ಟ್ ಧರಿಸಿರುವ ಸಾನ್ವಿ ಅಚ್ಚ ಕನ್ನಡತಿಯಂತೆ ಕಾಣಿಸುತ್ತಿದ್ದಾರೆ. 
ಚಿತ್ರವನ್ನು ಮಿಲನ ಪ್ರಕಾಶ್ ಜಯರಾಂ ಅವರು ನಿರ್ದೇಶಿಸುತ್ತಿದ್ದು ಚಿತ್ರ ವಿಜಯದಶಮಿಗೆ ರಾಜ್ಯಾದ್ಯಂತ ಬಿಡುಗಡೆ ಮಾಡಲು ಮುಂದಾಗಿದ್ದು ಪೋಸ್ಟ್ ಪ್ರೊಡೆಕ್ಷನ್ ಕಾರ್ಯದಲ್ಲಿ ತೊಡಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.