ಸಿನಿಮಾ ಸುದ್ದಿ

ಕರುಣಾನಿಧಿ ಮರಿ ಮೊಮ್ಮಗನ ಜತೆ ಸಪ್ತಪದಿ ತುಳಿದ ನಟ ವಿಕ್ರಮ್ ಪುತ್ರಿ

ಕಾಲಿವುಡ್ ಸ್ಟಾರ್ ನಟ ಚಿಯಾನ್ ವಿಕ್ರಮ್ ಪುತ್ರಿ ಅಕ್ಷಿತಾ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಡಿಎಂಕೆ ಅಧ್ಯಕ್ಷ ಎಂ ಕರುಣಾನಿಧಿ ಅವರ ಮರಿ ಮೊಮ್ಮಗ ಮನು ರಂಜಿತ್...

ಕರುಣಾನಿಧಿ ಮರಿ ಮೊಮ್ಮಗನ ಜತೆ ಸಪ್ತಪದಿ ತುಳಿದ ನಟ ವಿಕ್ರಮ್ ಪುತ್ರಿ
ಮನು ರಂಜಿತ್, ಕರುಣಾನಿಧಿ, ಅಕ್ಷಿತಾ
Published On :
ಕಾಲಿವುಡ್ ಸ್ಟಾರ್ ನಟ ಚಿಯಾನ್ ವಿಕ್ರಮ್ ಪುತ್ರಿ ಅಕ್ಷಿತಾ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಡಿಎಂಕೆ ಅಧ್ಯಕ್ಷ ಎಂ ಕರುಣಾನಿಧಿ ಅವರ ಮರಿ ಮೊಮ್ಮಗ ಮನು ರಂಜಿತ್ ಜತೆ ಸಪ್ತಪದಿ ತುಳಿದಿದ್ದಾರೆ. 
ಕರುಣಾನಿಧಿ ಅವರೊಂದಿಗೆ ಅಕ್ಷಿತಾ ಮತ್ತು ಮನು ರಂಜಿತ್ ಮದುವೆ ಉಡುಪಿನಲ್ಲಿ ಫೋಟೋ ತೆಗೆಸಿಕೊಂಡಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನೊಂದು ಫೋಟೋದಲ್ಲಿ ವಿಕ್ರಮ್ ಸಹ ಪೋಸ್ ಕೊಟ್ಟಿದ್ದಾರೆ.
ಮದುವೆ ಸಮಾರಂಭದಲ್ಲಿ ಎರಡು ಕುಟುಂಬದವರು ಹಾಗೂ ಕೆಲ ಆಪ್ತರು ಮಾತ್ರ ಭಾಗವಹಿಸಿದ್ದರು ಎಂದು ಹಿಂದುಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಇನ್ನು ಮದುವೆ ಆರತಕ್ಷತೆಯನ್ನು ಅದ್ಧೂರಿಯಾಗಿ ಮಾಡಲು ಎರಡು ಕುಟುಂಬದವರು ತೀರ್ಮಾನಿಸಿದ್ದು ಆರತಕ್ಷತೆಗೆ ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ಮುಖಂಡರನ್ನು ಕರೆಸಲು ನಿರ್ಧರಿಸಿದ್ದಾರೆ. 
ಚಿಯಾನ್ ವಿಕ್ರಮ್ ಸದ್ಯ ಹರಿ ನಿರ್ದೇಶನದ ಸಾಮಿ ಚಿತ್ರದ ಸೀಕ್ವೆಲ್ ನಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರೀಕರಣ ಭರದಿಂದ ಸಾಗುತ್ತಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.