3 ಗಂಟೆ 30 ದಿನ 30 ಸೆಕೆಂಡ್: ಹಾಡುಗಳಿಗೆ ಸಂಗೀತ ದಿಗ್ಗಜರ ಮೆಚ್ಚುಗೆ
18 ವರ್ಷಗಳ ಕಾಲ ಜಾಹೀರಾತು ತಯಾರಿಸಿ ಮೊದಲ ಬಾರಿಗೆ ಮಧುಸೂದನ್ ನಿರ್ದೇಶಿಸುತ್ತಿರುವ 3 ಗಂಟೆ 30 ದಿನ 30 ಸೆಕೆಂಡ್...

Published On :
ಬೆಂಗಳೂರು: 18 ವರ್ಷಗಳ ಕಾಲ ಜಾಹೀರಾತು ತಯಾರಿಸಿ ಮೊದಲ ಬಾರಿಗೆ ಮಧುಸೂದನ್ ನಿರ್ದೇಶಿಸುತ್ತಿರುವ 3 ಗಂಟೆ 30 ದಿನ 30 ಸೆಕೆಂಡ್ ಎಂಬ ಸಿನಿಮಾ ಮನೋ ವಿಶ್ಲೇಷಾತ್ಮಕ ಚಿತ್ರವಾಗಿದೆ. ಇದೊಂದು ಪ್ರೇಮ ಕಥೆಯಾಗಿದ್ದು. ಉತ್ತಮ ಸಂಗೀತ ಪ್ರೇಕ್ಷಕರನ್ನು ಮನರಂಜಿಸಲಿದೆ.
ಅರುಣ್ ಗೌಡ ಮತ್ತು ಕಾವ್ಯಾ ಶೆಟ್ಟಿ ನಟಿಸಿರುವ ಚಿತ್ರಕ್ಕೆ ವಿ. ಶ್ರೀಧರ್ ಸಂಗೀತ ನೀಡಿದ್ದಾರೆ. ಸಿನಿಮಾದ ಅರ್ಧಚಂದ್ರ ಎಂಬ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಈ ಹಾಡಿಗೆ ಸಂಗೀತ ಮಾಂತ್ರಿಕ ಹಂಸಲೇಖಾ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಸಾಹಿತ್ಯ ಮತ್ತು ಸಂಗೀತದ ನಡುವಿನ ಮ್ಯಾರಥಾನ್ ಎಂದು ವರ್ಣಿಸಿದ್ದಾರೆ.
ಬಿಟ್ಟಿ ಬಿಲ್ಡಪ್ ಎಂಬ ಮತ್ತೊಂದು ಹಾಡಿಗೆ ರಮೇಶ್ ಅರವಿಂದ್ ಮೆಚ್ಚಿದ್ದಾರೆ. ಮನಸು ಮನಸು ಹಾಡನ್ನು ಸಂಗೀತ ನಿರ್ದೇಶಕ ಗುರು ಕಿರಣ್ ಪ್ರಶಂಸಿದ್ದಾರೆ.
ಆಡಿಯೋ ಮೂಲಕ ನಮ್ಮ ಅರ್ಧ ಕೆಲಸ ಮಾಡಿ ಮುಗಿಸಿದ್ದೇವೆ, ಇದು ಸಾಮಾನ್ಯ ಪ್ರೇಕ್ಷಕರನ್ನು ಗೆದ್ದಿದೆ. ನಮ್ಮ ಪ್ರಯತ್ನಕ್ಕೆ ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ, ಸದ್ಯ ಸಿನಿಮಾ ಸೆನ್ಸಾರ್ ಹಂತದಲ್ಲಿದ್ದು ನವೆಂಬರ್ ನಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
musicಕನ್ನಡ ಸಿನಿಮಾಸಂಗೀತ3 gante 30 dina 30 secondsKannada cinema Madhusudhan3 ಗಂಟೆ 30 ದಿನ 30 ಸೆಕೆಂಡ್ಮಧುಸೂದನ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


