ಚಾಲೆಂಜಿಂಗ್ ಸ್ಟಾರ್ ಗೆ ಮತ್ತೊಂದು ಗರಿ: ಬ್ರಿಟಿಷ್ ಪಾರ್ಲಿಮೆಂಟ್ ಹೌಸ್ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ
ದರ್ಶನ್ ಫ್ಯಾನ್ಸ್ ಗಳಿಗೆ ಗುಡ್ ನ್ಯೂಸ್. ಪ್ರೀತಿಯ ದಾಸ ದರ್ಶನ್ ಖ್ಯಾತಿ ಇದೀಗ ಇಂಗ್ಲೆಂಡ್ ತಲುಪಿದ್ದು, ಅಲ್ಲಿನ ಸರ್ಕಾರದ ಗೌರವ ಪ್ರಶಸ್ತಿ ಒಲಿದು..

Published On :
ಬೆಂಗಳೂರು: ದರ್ಶನ್ ಫ್ಯಾನ್ಸ್ ಗಳಿಗೆ ಗುಡ್ ನ್ಯೂಸ್. ಪ್ರೀತಿಯ ದಾಸ ದರ್ಶನ್ ಖ್ಯಾತಿ ಇದೀಗ ಇಂಗ್ಲೆಂಡ್ ತಲುಪಿದ್ದು, ಅಲ್ಲಿನ ಸರ್ಕಾರದ ಗೌರವ ಪ್ರಶಸ್ತಿ ಒಲಿದು ಬಂದಿದೆ.
ಬ್ರಿಟನ್ ಸಂಸತ್ತು ನೀಡುವ ಪ್ರತಿಷ್ಠಿತ 2017ನೇ ಸಾಲಿನ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿಗೆ ದರ್ಶನ್ ಆಯ್ಕೆಯಾಗಿದ್ದಾರೆ. ಈ ಮೂಲಕ ಬ್ರಿಟಿಷ್ ಪಾರ್ಲಿಮೆಂಟ್‌ನಿಂದ ಸನ್ಮಾನಿಸಲ್ಪಡುತ್ತಿರುವ ಮೊದಲ ದಕ್ಷಿಣ ಭಾರತದ ನಟ ಎನ್ನುವ ಹೆಗ್ಗಳಿಕೆಗೆ ದರ್ಶನ್ ಪಾತ್ರರಾಗಿದ್ದಾರೆ.
ಈ ಖುಷಿಯ ಸುದ್ದಿಯನ್ನು ದರ್ಶನ್ ಅಭಿಮಾನಿಗಳು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಅಕ್ಟೋಬರ್ 19ರಂದು ಲಂಡನ್‌ನಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ತಮ್ಮ ಸಿನಿಮಾಗಳ ಮೂಲಕ ಕರ್ನಾಟಕದ ಕಲೆಗೆ ಕೊಡುಗೆ ನೀಡಿರುವುದನ್ನು ಪರಿಗಣಿಸಿ ದರ್ಶನ್ ಅವರಿಗೆ ಈ ಗೌರವ ಸಲ್ಲುತ್ತಿರುವುದು ವಿಶೇಷ.
ಈ ಮೊದಲು ಈ ಪ್ರಶಸ್ತಿಯನ್ನು ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ ಮತ್ತು ಶಾರುಖ್ ಖಾನ್ ಹಾಗೂ ಇತ್ತೀಚೆಗಷ್ಟೇ ನಟ ಸಲ್ಮಾನ್ ಖಾನ್‌ಗೆ ಬ್ರಿಟಿಷ್ ಪಾರ್ಲಿಮೆಂಟ್ ಹೌಸ್‌ನಿಂದ ಗ್ಲೋಬಲ್ ಡೈವರ್ಸಿಟಿ ಅವಾರ್ಡ್ ಲಭಿಸಿತ್ತು. ಈಗ ದರ್ಶನ್ ಅವರಿಗೆ ಈ ಸನ್ಮಾನ ಸಿಗುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.
ಕರ್ನಾಟಕ ಮತ್ತು ಲಂಡನ್ ನಡುವಣ ಸಾಂಸ್ಕೃತಿಕ ಬಾಂಧವ್ಯವನ್ನು ಬೆಸೆಯಲು ಯುಕೆ ಕರ್ನಾಟಕ ಬ್ಯುಸಿನೆಸ್ ಚೇಂಬರ್ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Karnatakaಕರ್ನಾಟಕDarshanದರ್ಶನ್ಇಂಗ್ಲೆಂಡ್United KingdomBiritsh Parliament House Awardಬ್ರಿಟಿಷ್ ಪಾರ್ಲಿಮೆಂಟ್ ಹೌಸ್ ಪ್ರಶಸ್ತಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


