ಸಂಗೀತ ನನ್ನ ವೃತ್ತಿ, ನಿರ್ದೇಶನ ನನ್ನ ಹವ್ಯಾಸ: ರವಿ ಬಸ್ರೂರ್
ಸಂಗೀತ ನಿರ್ದೇಶಕನಾಗಿ ಕನ್ನಡ ಸಿನಿಮಾ ರಂಗದ ಬಗ್ಗೆ ಆಳವಾಗಿ ತಿಳಿದುಕೊಂಡಿರುವ ರವಿ ಬಸ್ರೂರ್ ಹಲವು ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ. ...

Published On :
ಬೆಂಗಳೂರು: ಸಂಗೀತ ನಿರ್ದೇಶಕನಾಗಿ ಕನ್ನಡ ಸಿನಿಮಾ ರಂಗದ ಬಗ್ಗೆ ಆಳವಾಗಿ ತಿಳಿದುಕೊಂಡಿರುವ ರವಿ ಬಸ್ರೂರ್ ಹಲವು ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ. ರವಿ ಬಸ್ರೂರ್ ಅವರ ಕ್ರಿಯಾತ್ಮಕ ಕೆಲಸ ಹಲವು ಬಾರಿ ಬೆಂಗಳೂರಿನಲ್ಲಿ ಪ್ರದರ್ಶನಗೊಂಡಿದೆ.
ಆರಂಭದಲ್ಲಿ ನೃತ್ಯ ಸಂಯೋಜಕರಾಗಿ ಕೆಲಸ ಆರಂಭಿಸಿದ ರವಿ, ಅವರನ್ನು ವಿಧಿ ಎಂಬುದು ಎಲ್ಲಿಗೊ ಕರೆದು ತಂದು ನಿಲ್ಲಿಸಿದೆ. ಹಲವು ಸಿನಿಮಾಗಳಿಗೆ ಸಂಗೀತ ನೀಡಿರುವ ರವಿ ಸದ್ಯ ಸಿನಿಮಾ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ, ಎರಡು ಕುಂದಾಪುರ ಭಾಷೆಯ ಸಿನಿಮಾಗ ನಿರ್ದೇಶನ ಮಾಡಿ, ತಮ್ಮ ಪ್ರತಿಭೆ ತೋರಿಸಿರುವ ರವಿ, ಕನ್ನಡದಲ್ಲಿ ಕಟಕ ಎಂಬ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಸಂಗೀತ ನಿರ್ದೇಶನ ಹೇಗೆ ಕೊನೆಗೊಳ್ಳುತ್ತದೆ ಎಂಬ ಬಗ್ಗೆ ನನಗೆ ಯಾವುದೇ ಸುಳಿವಿರಲಿಲ್ಲ ಎಂದು ಹೇಳಿದ್ದಾರೆ.
ಉದ್ದೇಶಿತ ಚಿತ್ರವೊಂದಕ್ಕೆ ನಿರ್ದೇಶನ ಮಾಡುತ್ತಿದ್ದು, ತಮ್ಮ ಜೀವನ ಇಲ್ಲಿಯವರೆಗೂ ಹಲವು ಆಶ್ಚರ್ಯಕರ ತಿರುವುಗಳಿಗೆ ಸಾಕ್ಷಿಯಾಗಿದೆ, ಸಂಗೀತ ನನ್ನ ವೃತ್ತಿ, ನಿರ್ದೇಶನ ನನ್ನ ಹವ್ಯಾಸ, ವರ್ಷದಲ್ಲಿ ಒಂದು ಉತ್ತಮ ಸಿನಿಮಾ ನೀಡುವ ಆಸೆ ನನಗಿದೆ ಎಂದು ಹೇಳಿದ್ದಾರೆ.
ಕಟಕ ಸಿನಿಮಾಗಾಗಿ ಹಲವು ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. 2017ರ ಬಹು ನಿರೀಕ್ಷಿತ ಸಿನಿಮಾ ಇದಾಗಿದೆ, ಎನ್ ಎಸ್ ರಾಜಕುಮಾರ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ನಟರಾದ ಪುನೀತ್, ಯಶ್, ನಿರ್ದೇಶಕ ಸಂತೋಷ್ ಆನಂದ್ ರಾಮ್ ಸೇರಿದಂತೆ ಹಲವರು ಬಿಡುಗಡೆಗೂ ಮುನ್ನ ಸಿನಿಮಾ ವೀಕ್ಷಿಸಿದ್ದು, ತಮ್ಮನ್ನು ಹೊಗಳಿದ್ದಾರೆ ಎಂದು ಹೇಳಿದ್ದಾರೆ.
ಅವರೆಲ್ಲಾ ನನ್ನ ಹೊಗಳಿರುವುದನ್ನು ವರ್ಣಿಸಲು ನನ್ನ ಬಳಿ ಪದಗಳಿಲ್ಲ, ಸೆಲೆಬ್ರಿಟಿಗಳನ್ನು ಬಿಟ್ಟು ಹಲವು ಮಂದಿ ನನಗೆ ಬೆಂಬಲ ನೀಡಿದ್ದಾರೆ. ಆಟೋ ಚಾಲಕರು, ಸೇರಿದಂತೆ ವಿವಿದೆಡೆ ಕೆಲಸ ಮಾಡುವ 100 ಮಂದಿ ಕೆಲಸಗಾರರಿಗೆ ಕಟಕ ಸಿನಿಮಾ ತೋರಿಸಿದ್ದೇನೆ. ಅವರೆಲ್ಲರ ಅಭಿಪ್ರಾಯಗಳನ್ನು ಪಡೆದು ಕೆಲವು ಸನ್ನಿವೇಶಗಳನ್ನು ರಿ ಶೂಟ್ ಮಾಡಿದ್ದೇನೆ ಎಂದು ಹೇಳಿದ್ದಾರೆ.
ತಮ್ಮ ಸಿನಿಮಾವನ್ನು ಈಡಿ ಪ್ರಪಂಚಕ್ಕೆ ತೋರಿಸುವ ಇರಾದೆ ಹೊಂದಿರುವ ರವಿ ಇಂಗ್ಲೀಷ್ ಸೇರಿದಂತೆ 16 ಭಾಷೆಗಳಿಗೆ ಡಬ್ಬಿಂಗ್ ಮಾಡಿದ್ದಾರೆ. ಕರ್ನಾಟಕದಲ್ಲಿ ಸಾಕಷ್ಟು ಪ್ರತಿಭೆಗಳಿವೆ, ದಕ್ಷಿಣ ಭಾರತದ ಸಿನಿಮಾ ರಂಗದಲ್ಲೆ ಕನ್ನಡ ಚಿತ್ರರಂಗ ಹೆಚ್ಚಿನ ಪ್ರಮಾಣದಲ್ಲಿ ಸಿನಿಮಾ ತಯಾರಾಗುತ್ತವೆ. ಹೆಚ್ಚಿನ ತಂತ್ರಜ್ಞರು ಇಲ್ಲಿಯವರೇ ಆಗಿದ್ದಾರೆ,. ಜೊತೆಗೆ ಬೇರೆ ಪ್ರದೇಶದ ಜನರಿಗೆ ನಾವು ಹೆಚ್ಚಿನ ಉದ್ಯೋಗ ಒದಗಿಸುತ್ತಿದೆ. ಆದರೂ ನಮ್ಮಲ್ಲಿ ಏನೋ ಒಂದು ಖಾಲಿತನದ ಅನುಭವ ಉಂಟಾಗುತ್ತಿದೆ.
ನಾವು ನೇರವಾಗಿ ಹಾಲಿವುಡ್ ತಲುಪಿ ಅವರ ಗಮನ ನಮ್ಮ ಬಗ್ಗೆ ಕೇಂದ್ರೀಕರಿಸುವಂತೆ ಮಾಡಲು ನಿರ್ಧರಿಸಬೇಕು, ಕಟಕ ಇಂಗ್ಲೀಷ್ ಗೆ ಡಬ್ಬಿಂಗ್ ಆಗುತ್ತಿರುವ ಮೊದಲ ಕನ್ನ ಸಿನಿಮಾವಾಗಿದೆ, ಶೀಘ್ರವೇ ಇಂಗ್ಲೀಷ್ ಭಾಷೆಯ ಹಾಡುಗಳನ್ನು ರಿಲೀಸ್ ಮಾಡಲಾಗುವುದು ಎಂದು ತಿಳಿಸಿದ್ದಾರೆ,.
ಕಟಕ ಹಾರರ್, ಥ್ರಿಲ್ಲರ್ ಸಿನಿಮಾವಾಗಿದೆ, ಸಿನಿಮಾದ 2ನೇ ಭಾಗ ಭಾವನಾತ್ಮಕವಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ, ಬಾಲನಟಿ ಶಾಗ್ಲಾ ಸಾಲಿಗ್ರಾಮ ಪ್ರದಾನ ಪಾತ್ರದಲ್ಲಿ ನಟಿಸಿದ್ದಾರೆ, ಆಜಿಶನ್ ಮೂಲಕ ಆಕೆಯನ್ನು ಆಯ್ಕೆ ಮಾಡಲಾಯಿತು, ಆಕೆ ಒಬ್ಬ ಪ್ರಬಲ ಆತ್ಮ ವಿಶ್ವಾಸವುಳ್ಳ ಬಾಲಕಿ.
ನಿರ್ದೇಶಕ ಪ್ರಶಾಂತ್ ನೀಲ್ ಅವರ ಕೆಲಸದ ಬಗ್ಗೆ ನನಗೆ ಮೆಚ್ಚುಗೆಯಿದೆ, ಉಗ್ರಮ ಮತ್ತು ಕೆಜಿಎಫ್ ಗಳಲ್ಲಿ ಅವರಿಗೆ ಜೊತೆಯಾಗಿ ಕೆಲಸ ಮಾಡಿದ್ದೇನೆ, ಪುನೀತ್ ರಾಜ್ ಕುಮಾರ್ ಅವರ ಸರಳತೆ, ಯಶ್ ಅವರ ಡೆಡಿಕೇಟಿಂಗ್ ಕೆಲಸದ ಬಗ್ಗೆ ರವಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


