ಸಿನಿಮಾ ಸುದ್ದಿ

ಮುಂದಿನ ಸಿನಿಮಾಗಾಗಿ ರಕ್ಷಿತ್ ಶೆಟ್ಟಿ ಜೊತೆಯಾಗಲಿರುವ ನಟ ನಿವಿನ್ ಪೌಲಿ

ಮಲಯಾಳಂ ನಟ ನಿವಿನ್ ಪೌಲಿ ಮತ್ತು ಕನ್ನಡ ಸ್ಟಾರ್ ರಕ್ಷಿತ್ ಶೆಟ್ಟಿ ಮುಂದಿನ ಸಿನಿಮಾ ಪ್ರಾಜೆಕ್ಟ್ ಗಾಗಿ ಒಂದಾಗಲಿದ್ದಾರೆ...

ಮುಂದಿನ ಸಿನಿಮಾಗಾಗಿ ರಕ್ಷಿತ್ ಶೆಟ್ಟಿ ಜೊತೆಯಾಗಲಿರುವ ನಟ ನಿವಿನ್ ಪೌಲಿ
ರಕ್ಷಿತ್ ಶೆಟ್ಟಿ ಮತ್ತು ನಿವಿನ್ ಪೌಲಿ
Published On :
ಬೆಂಗಳೂರು: ಮಲಯಾಳಂ ನಟ ನಿವಿನ್ ಪೌಲಿ ಮತ್ತು ಕನ್ನಡ ಸ್ಟಾರ್ ರಕ್ಷಿತ್ ಶೆಟ್ಟಿ ಮುಂದಿನ ಸಿನಿಮಾ ಪ್ರಾಜೆಕ್ಟ್ ಗಾಗಿ ಒಂದಾಗಲಿದ್ದಾರೆ.
ನಿವಿನ್ ಪೌಲಿ ಸದ್ಯಕ್ಕೆ ಕನ್ನಡದ ಉಳಿದವರು ಕಂಡಂತೆ ರಿಮೇಕ್  ಮಲಯಾಳಂ ನ ರಿಚ್ಚೀ ಚಿತ್ರದಲ್ಲಿ ನಟಿಸುತ್ತಿದ್ದು, ಸಿನಿಮಾ ಕಲ್ಟ್ ನಿಯೋ ನಾಯರ್ ನಿರ್ದೇಶಿಸುತ್ತಿದ್ದಾರೆ. 
ಉಳಿದವರು ಕಂಡಂತೆ ಸಿನಿಮಾ 2014 ರಲ್ಲಿ ಬಿಡುಗಡೆಯಾಗಿತ್ತು. ಕೊಲೆಯೊಂದರ ಸಂಬಂಧ 5 ಕಥೆಗಳನ್ನು ಹೆಣೆಯಲಾಗಿತ್ತು. ಕಥೆಯ್ನು ವಿವಿಧ ಪಾತ್ರಗಳ ದೃಷ್ಠಿಯಲ್ಲಿ ಹೇಳಲಾಗಿತ್ತು. 
ಇತ್ತೀಚೆಗೆ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದ ವೇಳೆ ನಿವಿನ್ ಪೌಲಿ ವಿವಿಧ ಭಾಷೆಗಳಲ್ಲಿ ನ ಕಲಾವಿದರ ಜೊತೆ ಕೆಲಸ ಮಾಡುವ ಅನುಭವದ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ್ದಾರೆ.
ಅತಿಥಿ ಪಾತ್ರದಲ್ಲಿ ಮತ್ತೊಬ್ಬ ನಟ ಅಭಿನಯಿಸುವುದನ್ನು ಕ್ರಿಯೇಟ್ ಮಾಡುವುದು ದೊಡ್ಡ ಹೊಣೆಗಾರಿಕೆ ಎಂದ ಅವರು ರಕ್ಷಿತ್ ಶೆಟ್ಟಿ ಅವರ 2ನೇ ನಿರ್ಮಾಣದ ಹಂಬಲ್ ಪೊಲಿಟಿಶಿಯನ್ ನೊಗರಾಜ್ ಚಿತ್ರವನ್ನು ಪ್ರಶಂಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.