ತಮಿಳು ನಟ ಧನುಷ್ ನಿರ್ಮಾಣದ ಕನ್ನಡ ಸಿನಿಮಾಗೆ ರಿಷಿ ಹೀರೋ!
ಆಪರೇಷನ್ ಅಲಮೇಲಮ್ಮ ಸಿನಿಮಾದಲ್ಲಿ ತಮ್ಮ ಪ್ರತಿಭಾನ್ವಿತ ನಟನೆಯ ಮೂಲಕ ಗಮನ ಸೆಳೆದಿರುವ ನಟ ರಿಷಿಗೆ ಬೇಡಿಕೆ ಹೆಚ್ಚಾಗಿದೆ. ...

Published On :
ಬೆಂಗಳೂರು: ಆಪರೇಷನ್ ಅಲಮೇಲಮ್ಮ ಸಿನಿಮಾದಲ್ಲಿ ತಮ್ಮ ಪ್ರತಿಭಾನ್ವಿತ ನಟನೆಯ ಮೂಲಕ ಗಮನ ಸೆಳೆದಿರುವ ನಟ ರಿಷಿಗೆ ಬೇಡಿಕೆ ಹೆಚ್ಚಾಗಿದೆ. ವಿವಿಧ ನಿರ್ಮಾಪಕರು ರಿಷಿ ಅವರೊಂದಿಗೆ ಕೆಲಸ ಮಾಡಲು ಆಸಕ್ತಿ ತೋರುತ್ತಿದ್ದಾರೆ.
ಸದ್ಯ ಪಿಆರ್ ಕೆ ಪ್ರೊಡಕ್ಷನ್ ನ ಕವಲು ದಾರಿಯಲ್ಲಿ ನಟಿಸುತ್ತಿರುವ ರಿಷಿ. ತಮಿಳು ನಟ ಧನುಷ್ ಕನ್ನಡದಲ್ಲಿ ನಿರ್ಮಿಸುತ್ತಿರುವ ಹೊಸ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಜಾಕೋಬ್ ಫಿಲ್ಮ್ ಹಾಗೂ ಧನುಷ್ ಮಾಲೀಕತ್ವದ ವಂಡರ್ ಬಾರ್ ಪಿಲ್ಮ್ಸ್ ಸಹಯೋಗದಲ್ಲಿ ಸಿನಿಮಾ ನಿರ್ಮಾಣವಾಗಲಿದೆ.
ಇಸ್ಲಾಹುದ್ದೀನ್ ಸಿನಿಮಾ ನಿರ್ದೇಶಕರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಂಡರ್ ಬಾರ್ ಫಿಲ್ಮ್ಸ್ ಕನ್ನಡ ಚಿತ್ರರಂಗದಲ್ಲಿ ಆಸಕ್ತಿ ತೋರಿದ್ದು, ಧನುಷ್ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಚಿತ್ರಕಥೆ ಫೈನಲ್ ಆಗುತ್ತಿದ್ದು. ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ ಎಂದು ಮೂಲಗಳು ತಿಳಿಸಿವೆ.
ಧನುಷ್ ಪ್ರೊಡಕ್ಷನ್ ಹೌಸ್ ಜೊತೆ ಕೆಲಸ ಮಾಡಲು ರಿಷಿ ಉತ್ಸುಕರಾಗಿದ್ದು, ಪ್ರಾಜೆಕ್ಟ್ ಗೆ ಒಪ್ಪಿದ್ದಾರೆ ಇದೊಂದು ಹೊಸ ರೀತಿಯ ಕಥೆಯಾಗಿದೆ ಎಂದು ಸಿನಿಮಾ ತಂಡ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


