12 ವರ್ಷಗಳ ನಂತರ ಮತ್ತೆ ತೆರೆಯ ಮೇಲೆ 'ಅಣ್ಣ-ತಂಗಿ' ಫೇವರಿಟ್ ಜೋಡಿ!
ವರಿಗೆ ಬಾ ತಂಗಿ, ಅಣ್ಣ ತಂಗಿ ನಂತರ ರಾಧಿಕಾ ಬ್ಯಾನರ್ ಅಡಿ, ಶಮಿಕಾ ಎಂಟರ್ ಪ್ರೈಸಸ್ ಪ್ರೊಡಕ್ಷನ್ ನಲ್ಲಿ ಮತ್ತೆ ಸೂಪರ್ ಹಿಟ್ ಜೋಡಿಯಾದ ಶಿವಣ್ಣ- ರಾಧಿಕಾ...

Published On :
ಬೆಂಗಳೂರು: ನಿರ್ದೇಶಕ ಸಾಯಿ ಪ್ರಕಾಶ್ ಮತ್ತು ಶಿವರಾಜ್ ಕುಮಾರ್ ಹಾಗೂ ರಾಧಿಕಾ ಕುಮಾರಸ್ವಾಮಿ ಕಾಂಬಿನೇಷನ್ ನಲ್ಲಿ 12 ವರ್ಷದ ನಂತರ ಮತ್ತೆ ಸಿನಿಮಾ ಮೂಡಿ ಬರುತ್ತಿದೆ.
ತವರಿಗೆ ಬಾ ತಂಗಿ, ಅಣ್ಣ ತಂಗಿ ನಂತರ ರಾಧಿಕಾ ಬ್ಯಾನರ್ ಅಡಿ, ಶಮಿಕಾ ಎಂಟರ್ ಪ್ರೈಸಸ್ ಪ್ರೊಡಕ್ಷನ್ ನಲ್ಲಿ ಮತ್ತೆ ಸೂಪರ್ ಹಿಟ್ ಜೋಡಿಯಾದ ಶಿವಣ್ಣ- ರಾಧಿಕಾ ಅಣ್ಣ ತಂಗಿ ಪಾತ್ರದಲ್ಲಿ ನಟಿಸಲಿದ್ದಾರೆ. ಸಿನಿಮಾವನ್ನು ಸಾಯಿ ಪ್ರಕಾಶ್ ನಿರ್ದೇಶನ ಮಾಡಲಿದ್ದಾರೆ.
ಸದ್ಯ ರಾಧಿಕಾ ರವಿಚಂದ್ರನ್ ಅವರ ರಾಜೇಂದ್ರ ಪೊನ್ನಪ್ಪ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಅರ್ಜುನ್ ಸರ್ಜಾ ಅವರ ಸಿನಿಮಾದಲ್ಲೂ ರಾಧಿಕಾ ಅಭಿನಯಿಸುತ್ತಿದ್ದಾರೆ. ಸಾಯಿ ಪ್ರಕಾಶ್ ಕಥೆ ಹೆಣೆಯುತ್ತಿದ್ದಾರೆ, ಅಣ್ಣ-ತಂಗಿ ಬಾಂಧವ್ಯದ ಕಥೆ ಇದಾಗಿದ್ದು, ಇಂದಿನ ಟ್ರೆಂಡ್ ಗೆ ಅನುಗುಣವಾಗಿ ಚಿತ್ರಕಥೆ ತಯಾರಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ರಾಧಿಕಾ ಕುಮಾರಸ್ವಾಮಿ ಈ ಬಗ್ಗೆ ಅಧಿಕತ ಪ್ರಕಟಣೆ ಹೊರಡಿಸಬೇಕಿದೆ. ಸದ್ಯ ಶಿವರಾಜ್ ಕುಮಾರ್ ಬ್ಯಾಂಕಾಂಕ್ ನಲ್ಲಿ ವಿಲ್ಲನ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ, ಶಿವಣ್ಣ ಅಲ್ಲಿಂದ ವಾಪಸ್ ಬಂದ ಮೇಲೆ ಕಥೆಯ ಬಗ್ಗೆ ಅವರೊಂದಿಗೆ ಚರ್ಚಿಸಬೇಕಿದೆ. ಎಲ್ಲಾ ಅಂತಿಮಗೊಂಡ ನಂತರ, ತಮ್ಮ ಮುಂದಿನ ಪ್ರೊಡಕ್ಷನ್ ಬಗ್ಗೆ ತಿಳಿಸುವುದಾಗಿ ರಾಧಿಕಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಸಿನಿಮಾCinemaRadhika Kumaraswamyರಾಧಿಕಾ ಕುಮಾರಸ್ವಾಮಿShivaraj Kumarಶಿವರಾಜ್ ಕುಮಾರ್Sai Prakashಸಾಯಿ ಪ್ರಕಾಶ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


