ಸಿನಿಮಾ ಸುದ್ದಿ

ರಾಧಿಕಾ ಪಂಡಿತ್-ನಿರೂಪ್ ಭಂಡಾರಿ ಚಿತ್ರಕ್ಕೆ ನಾಳೆ ಮುಹೂರ್ತ

ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ಅಭಿನಯದ...

ರಾಧಿಕಾ ಪಂಡಿತ್-ನಿರೂಪ್ ಭಂಡಾರಿ ಚಿತ್ರಕ್ಕೆ ನಾಳೆ ಮುಹೂರ್ತ
ರಾಧಿಕಾ ಪಂಡಿತ್-ನಿರೂಪ್ ಭಂಡಾರಿ
Published On :
ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ಅಭಿನಯದ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. 
ಚಿತ್ರದ ಮುಹೂರ್ತ ನಾಳೆ ನಡೆಯಲಿದೆ. ವಿ.ಪ್ರಿಯಾ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಅವರಲ್ಲಿ ಸಹಾಯಕರಾಗಿ ಕೆಲಸ ಮಾಡಿರುವ ಪ್ರಿಯಾ ಈಗಾಗಲೇ ಮೂರು ತಮಿಳು ಚಿತ್ರಗಳಲ್ಲಿ ಕೆಲಸ ಮಾಡಿ ಬಂದಿದ್ದಾರೆ. ಕನ್ನಡದಲ್ಲಿ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.
ಬೆಂಗಳೂರಿಗೆ ಕೆಲ ದಿನಗಳ ಹಿಂದೆ ಆಗಮಿಸಿರುವ ಪ್ರಿಯಾ, ಡಿಸೆಂಬರ್ 11ರಿಂದ ಚಿತ್ರದ ಶೂಟಿಂಗ್ ಆರಂಭಿಸಲಿದ್ದಾರೆ. ಮೊದಲ ಕನ್ನಡ ಚಿತ್ರವಾಗಿರುವುದರಿಂದ ಕುತೂಹಲ, ಅಂಚಿಕೆ, ಅಳುಕು ಇದ್ದೇ ಇದೆ ಎನ್ನುತ್ತಾರೆ. ಚಿತ್ರದ ಶೀರ್ಷಿಕೆಯನ್ನು ಇನ್ನೂ ಇಟ್ಟಿಲ್ಲ. 
ಕಥೆಯಲ್ಲಿ ಅಭಿನಯ,ಹಾಸ್ಯ, ಪ್ರೀತಿ ಎಲ್ಲವೂ ಇದೆ. ಚಿತ್ರದ ಶೀರ್ಷಿಕೆ ಬಗ್ಗೆ ಕೆಲವು ಹೆಸರುಗಳು ನಮ್ಮ ಬಳಿ ಇದ್ದು ಸದ್ಯದಲ್ಲಿಯೇ ಅವುಗಳಲ್ಲಿ ಒಂದು ಸೂಕ್ತವಾದದ್ದನ್ನು ಆರಿಸುತ್ತೇವೆ. ಕುಟುಂಬ ಆಧಾರಿತ ಚಿತ್ರವಾಗಿರಲಿದ್ದು ಇದು ವೃದ್ಧರಿಗೂ ಮತ್ತು ಈಗಿನ ಯುವ ಜನಾಂಗಕ್ಕೂ ಇಷ್ಟವಾಗಲಿದೆ ಎನ್ನುತ್ತಾರೆ ಪ್ರಿಯಾ.
ಚಿತ್ರದಲ್ಲಿ ತಾರಾ, ಸುಚೇಂದ್ರ ಪ್ರಸಾದ್ ಕೂಡ ನಟಿಸುತ್ತಿದ್ದು ಪ್ರೀತಂ ಜಯರಾಂ ಅವರ ಛಾಯಾಗ್ರಹಣವಿದೆ. 
ರಾಧಿಕಾಗೆ ಡಬಲ್ ಧಮಾಕಾ: ಒಂದೊಡೆ ಯಶ್ ಮತ್ತು ರಾಧಿಕಾ ಡಿಸೆಂಬರ್ 10ರಂದು ತಮ್ಮ ಮದುವೆಯ ಮೊದಲ ವಾರ್ಷಿಕೋತ್ಸವವನ್ನು ಆಚರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮದುವೆಯಾದ ನಂತರ ಇದು ನನ್ನ ಮೊದಲ ಚಿತ್ರ ಎನ್ನುವ ರಾಧಿಕಾಗೆ ಒಂದು ವರ್ಷ ಕಳೆದು ಹೋಗಿದ್ದೇ ಗೊತ್ತಾಗುತ್ತಿಲ್ಲವಂತೆ. 
ನನಗೆ ಮದುವೆಯಾಗಿ ಒಂದು ವರ್ಷವಾಗುತ್ತಿದೆ. ಈ ಸಮಯದಲ್ಲಿ ಮತ್ತೆ ಕ್ಯಾಮರಾ ಮುಂದೆ ಬರಲಿದ್ದೇನೆ ಎನ್ನುವ ರಾಧಿಕಾ ದಂಪತಿ ಮದುವೆ ವಾರ್ಷಿಕೋತ್ಸವ ಸಂದರ್ಭದಲ್ಲಿ ವಿದೇಶಕ್ಕೆ ಹೋಗಲು ಯೋಜನೆ ಹಾಕಿಕೊಂಡಿದ್ದಾರೆ.
ಇನ್ನೊಂದೆಡೆ ನಟ ನಿರೂಪ್ ಭಂಡಾರಿ ಹೊಸ ತಂಡದೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದಾರೆ. ರಾಜರಥ ಚಿತ್ರದ ಶೂಟಿಂಗ್ ವೇಳೆ ಗಾಯಗೊಂಡಿದ್ದ ನಿರೂಪ್ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.ಡಿಸೆಂಬರ್ 11ರಿಂದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದೇನೆ. ಆದರೆ ಒಂದು ತಿಂಗಳಿನಿಂದ ಚಿತ್ರಕ್ಕೆ ಸಿದ್ದತೆ ನಡೆಸಿಕೊಳ್ಳುತ್ತಿದ್ದೇನೆ. ಚಿತ್ರದ ಪಾತ್ರದ ಬಗ್ಗೆ ಚೆನ್ನಾಗಿ ಅರಿವಿಗೆ ಬಂದಿದೆ ಎನ್ನುತ್ತಾರೆ ನಿರೂಪ್ ಭಂಡಾರಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.