ಸಿನಿಮಾ ಸುದ್ದಿ

ಗ್ರಾಮೀಣ ಸೊಗಡು, ಸರಳ ಬದುಕಿಗೆ ಆಮಿ ಜಾಕ್ಸನ್ ಫಿದಾ!

ನಿರ್ದೇಶಕ ಪ್ರೇಮ್ ಅವರ ಬಹು ನಿರೀಕ್ಷಿತ ಚಿತ್ರ ವಿಲನ್ ನ ಹಾಡಿನ ಚಿತ್ರೀಕರಣ ಇತ್ತೀಚೆಗೆ ಮೈಸೂರಿನಲ್ಲಿ ನಡೆಯಿತು. ಸುದೀಪ್ ಮತ್ತು ಆಮಿ....

ಗ್ರಾಮೀಣ ಸೊಗಡು, ಸರಳ ಬದುಕಿಗೆ ಆಮಿ ಜಾಕ್ಸನ್ ಫಿದಾ!
ವಿಲನ್ ಚಿತ್ರದ ಮೊದಲ ಹಾಡಿನ ಚಿತ್ರೀಕರಣದ ವಿರಾಮದ ವೇಳೆ
Published On :

ನಿರ್ದೇಶಕ ಪ್ರೇಮ್ ಅವರ ಬಹು ನಿರೀಕ್ಷಿತ ಚಿತ್ರ ವಿಲನ್ ನ ಹಾಡಿನ ಚಿತ್ರೀಕರಣ ಇತ್ತೀಚೆಗೆ ಮೈಸೂರಿನಲ್ಲಿ ನಡೆಯಿತು. ಸುದೀಪ್ ಮತ್ತು ಆಮಿ ಜಾಕ್ಸನ್ ಹಾಡಿನಲ್ಲಿ ಮಿಂಚಿದ್ದಷ್ಟೇ ಅಲ್ಲ ಎಲ್ಲರ ಗಮನ ಸೆಳೆದದ್ದು ಆಮಿ ಜಾಕ್ಸನ್ ಅವರ ಸಾಂಪ್ರದಾಯಿಕ  ಉಡುಗೆ.

ವಿಲನ್ ಚಿತ್ರೀಕರಣ ಸೆಟ್ ನಿಂದ  ಆಗಾಗ ಪೋಸ್ಟ್ ಆಗುತ್ತಿರುವ ಫೋಟೋಗಳು ವೈರಲ್ ಆಗುತ್ತಿವೆ. ಆಧುನಿಕ ಉಡುಪು ತೊಟ್ಟು ಸಿಗರೇಟು ಸೇದುವ ಚಿತ್ರದಲ್ಲಿ ಕಾಣಿಸಿಕೊಂಡಿರುವ ಆಮಿ ಜಾಕ್ಸನ್ ಸಾಂಪ್ರದಾಯಿಕ ಶೈಲಿಯ  ಉಡುಪಿನಲ್ಲಿ ಕೂಡ ಅಷ್ಟೇ ಸೊಗಸಾಗಿ ಕಂಗೊಳಿಸುತ್ತಿದ್ದಾರೆ.

ಈ ಮಧ್ಯೆ ಸಾಂಸ್ಕೃತಿಕ ಜಿಲ್ಲೆ ಮೈಸೂರಿನಲ್ಲಿ ಇರುವಷ್ಟು ದಿನ ಅಲ್ಲಿನ ವಾತಾವರಣ, ಹಳ್ಳಿಯ ಜೀವನಶೈಲಿಯನ್ನು ಆಮಿ ಪ್ರತಿ ಕ್ಷಣ ಸವಿಯುತ್ತಿದ್ದಾರೆ.  ಸರಳತೆಯಲ್ಲಿ ಬಹಳ ಸೌಂದರ್ಯವಿದೆ ಎಂದು ಬರೆದು ಎತ್ತಿನ ಗಾಡಿಯ ಹಳ್ಳಿ ಜೀವನದ ಫೋಟೋವೊಂದನ್ನು ತಮ್ಮ ಟ್ವಿಟ್ಟರ್ ಪುಟದಲ್ಲಿ ಹಾಕಿಕೊಂಡಿದ್ದಾರೆ. ಪ್ರಾಣಿಗಳನ್ನು ಕೂಡ  ಅಷ್ಟೇ ಪ್ರೀತಿಸುವ ಆಮಿ ವಿರಾಮದ ವೇಳೆಯಲ್ಲಿ ನಾಯಿಗಳ ಜೊತೆ ಆಟವಾಡುತ್ತಾರೆ.

ಶಿವರಾಜ್ ಕುಮಾರ್ ಕೂಡ ಪ್ರಧಾನ ಪಾತ್ರದಲ್ಲಿರುವ ವಿಲನ್ ಚಿತ್ರದ ಚಿತ್ರೀಕರಣ ಡಿಸೆಂಬರ್ ವರೆಗೆ ಮುಂದುವರಿಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.