ನಟ ಕಮಲ್ ಹಾಸನ್ ಜನ್ಮ ದಿನಾಚರಣೆ ರದ್ದು; ವೈದ್ಯಕೀಯ ಶಿಬಿರಕ್ಕೆ ತೆರಳಿದ ನಟ!
ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಅವರು ತಮ್ಮ 63ನೇ ಜನ್ಮ ದಿನವನ್ನು ಆಚರಣೆ ಮಾಡದಿರಲು ನಿರ್ಧರಿಸಿದ್ದು, ಅದರ ಬದಲಿಗೆ ವೈದ್ಯಕೀಯ ಕ್ಯಾಂಪ್ ಗಳಲ್ಲಿ ಪಾಲ್ಗೊಳ್ಳುವ ನಿರ್ಧಾರ ಮಾಡಿದ್ದಾರೆ.

Published On :
ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಅವರು ತಮ್ಮ 63ನೇ ಜನ್ಮ ದಿನವನ್ನು ಆಚರಣೆ ಮಾಡದಿರಲು ನಿರ್ಧರಿಸಿದ್ದು, ಅದರ ಬದಲಿಗೆ ವೈದ್ಯಕೀಯ ಕ್ಯಾಂಪ್ ಗಳಲ್ಲಿ ಪಾಲ್ಗೊಳ್ಳುವ ನಿರ್ಧಾರ ಮಾಡಿದ್ದಾರೆ.
ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ನಟ ಕಮಲ್ ಹಾಸನ್ ಅವರು, ನನ್ನ ಜನ್ಮ ದಿನಕ್ಕಾಗಿ ಕಾದು ಆಚರಣೆ ಮಾಡಲು ಮುಂದಾಗಿದ್ದ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ಆದರೆ ನನ್ನ ನಿರ್ಧಾರದಿಂದ ನಿಮಗೆ ನಿರಾಸೆಯಾಗಿರಬಹುದು. ನನ್ನ ಪ್ರಕಾರ ಜನ್ಮದಿನ ಮತ್ತೊಂದು ಸಾಮಾನ್ಯ ದಿನವಷ್ಟೇ..ಆದರೆ ಈ ದಿನವನ್ನು ನಾವು ಸೇವಾ ಕಾರ್ಯಗಳ ಮೂಲಕ ವಿಶೇಷವಾಗಿಸಬಹುದು. ಒಂದು ಅತ್ಯುತ್ತಮ ಕಾರಣಕ್ಕಾಗಿ ಈ ದಿನವನ್ನು ಮೀಸಲಿಡುವ ಮೂಲಕ ಇದನ್ನು ವಿಶೇಷವಾಗಿಸಬಹುದು. ಇದೇ ಕಾರಣಕ್ಕೆ ನಾನು ವೈದ್ಯಕೀಯ ಶಿಬಿರಕ್ಕೆ ತೆರಳುತ್ತಿದ್ದೇನೆ. ಇದಕ್ಕೂ ನನ್ನ ರಾಜಕೀಯಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಆದರೆ ಇದರಿಂದ ಕನಿಷ್ಠ ಪಕ್ಷ ಒಂದಷ್ಟು ಮಂದಿಗಾದರೂ ನೆರವಾಗುತ್ತದೆ ಎಂದು ಹೇಳಿದ್ದಾರೆ.
ಅಂತೆಯೇ ತಮ್ಮ ರಾಜಕೀಯ ಭವಿಷ್ಯದ ಕುರಿತು ಮಾತನಾಡಿರುವ ಕಮಲ್, ಜನ ನನೇನೋ ದೊಡ್ಡದ್ದನ್ನು ಸಾಧಿಸುತ್ತೇನೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಅವರ ನಂಬಿಕೆಗೆ ನಾನು ಚಿರಋಣಿ, ಹಾಗೂ ಅವರ ನಂಬಿಕೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


