ತಾಯಿ-ಮಗನ ಬಾಂಧ್ಯವದ ಅಮ್ಮ ಐ ಲವ್ ಯೂ ಚಿತ್ರದಲ್ಲಿ ಸಿತಾರಾ
ನಿರ್ದೇಶಕ ಚೈತನ್ಯ ಮತ್ತು ಚಿರಂಜೀವಿ ಸರ್ಜಾ ಸಹಯೋಗದ 4ನೇ ಚಿತ್ರ ಇದಾಗಿದ್ದು, ದಕ್ಷಿಣ ಭಾರತದ ಪ್ರಸಿದ್ದ ನಟಿ ಸಿತಾರಾ ಅಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ...

Published On :
ಬೆಂಗಳೂರು: ದ್ವಾರಕೀಶ್ ಅವರ 51ನೇ ಚಿತ್ರಕ್ಕೆ ಅಮ್ಮ ಐ ಲವ್ ಯೂ ಎಂದು ಹೆಸರಿಟ್ಟಿದ್ದು, ಇದು ತಮಿಳಿನ "ಪಿಚ್ಚಕಾರನ್' ಚಿತ್ರದ ಅವತರಣಿಕೆಯಾಗಿದೆ.
ನಿರ್ದೇಶಕ ಚೈತನ್ಯ ಮತ್ತು ಚಿರಂಜೀವಿ ಸರ್ಜಾ ಸಹಯೋಗದ 4ನೇ ಚಿತ್ರ ಇದಾಗಿದ್ದು, ದಕ್ಷಿಣ ಭಾರತದ ಪ್ರಸಿದ್ದ ನಟಿ ಸಿತಾರಾ ಅಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರಕ್ಕೆ "ಅಮ್ಮ ಐ ಲವ್ ಯು' ಎಂದು ನಾಮಕರಣ ಮಾಡಿದ್ದು, ಇತ್ತೀಚೆಗೆ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಗಣಪತಿ ದೇವಾಲಯದಲ್ಲಿ ಮುಹೂರ್ತವೂ ನೆರವೇರಿದೆ. ಈಗಾಗಲೇ ಬೆಂಗಳೂರಿನಲ್ಲಿ ಎರಡು ದಿನಗಳ ಶೂಟಿಂಗ್ ಮುಗಿದಿದ್ದು, ಮುಂದಿನ ಚಿತ್ರೀಕರಣಕ್ಕಾಗಿ, ಮಂಗಳೂರು ಮತ್ತು ಉಡುಪಿಯಲ್ಲಿ ಸುಂದರ ಸ್ಥಳಗಳ ಹುಡುಕಾಟ ನಡೆಸಲಾಗಿದೆ.
ಚಿತ್ರದಲ್ಲಿ ಸಿತಾರಾ, ಕರಿಸುಬ್ಬು, ನಟನಾ ಪ್ರಶಾಂತ್ ಪ್ರಮುಖ ತಾರಾಗಣದಲ್ಲಿ ನಟಿಸುತ್ತಿದ್ದಾರೆ. ಕೆ.ಎಂ.ಚೈತನ್ಯ ನಿರ್ದೇಶನದ ಈ ಚಿತ್ರಕ್ಕೆ ಗುರುಕಿರಣ್ ಅವರ ಸಂಗೀತವಿದೆ.ಚಿತ್ರಕ್ಕೆ ನಾಯಕಿಯ ಹುಡುಕಾಟ ನಡೆಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


