ಸಿನಿಮಾ ಸುದ್ದಿ

ತೆಲುಗು 'ಬಿಗ್ ಬಾಸ್'ಗೆ ಜ್ಯೂನಿಯರ್ ಎನ್‍ಟಿಆರ್ ನಿರೂಪಣೆ!

ಬಿಗ್ ಬಾಸ್ ರಿಯಾಲಿಟಿ ಶೋ ಭಾರತದಲ್ಲಿ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ. ಹಿಂದಿಯಲ್ಲಿ ಆರಂಭವಾದ ಬಿಗ್ ಬಾಸ್ ನಂತರ ಕನ್ನಡದಲ್ಲಿ ಭರ್ಜರಿ ಯಶಸ್ಸಿನ ಬಳಿಕ ಇದೀಗ ಇತರ ಪ್ರಾದೇಶಿಕ...

ತೆಲುಗು 'ಬಿಗ್ ಬಾಸ್'ಗೆ ಜ್ಯೂನಿಯರ್ ಎನ್‍ಟಿಆರ್ ನಿರೂಪಣೆ!
ಎನ್‍ಟಿಆರ್
Published On :
ಬಿಗ್ ಬಾಸ್ ರಿಯಾಲಿಟಿ ಶೋ ಭಾರತದಲ್ಲಿ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ. ಹಿಂದಿಯಲ್ಲಿ ಆರಂಭವಾದ ಬಿಗ್ ಬಾಸ್ ಕನ್ನಡದಲ್ಲಿ ಭರ್ಜರಿ ಯಶಸ್ಸಿನ ಬಳಿಕ ಇದೀಗ ಇತರ ಪ್ರಾದೇಶಿಕ ಭಾಷೆಗಳಲ್ಲಿ ಬಿತ್ತರಗೊಳ್ಳಲಿದೆ. 
ಇತ್ತೀಚೆಗಷ್ಟೇ ತಮಿಳಿನ ಬಿಗ್ ಬಾಸ್ ನಿರೂಪಕರಾಗಿ ಕಮಲ್ ಹಾಸನ್ ಆಯ್ಕೆಯಾಗಿದ್ದು ಅದರ ಬೆನ್ನಲ್ಲೇ ಇದೀಗ ತೆಲುಗಿನ ಬಿಗ್ ಬಾಸ್ ರಿಯಾಲಿಟಿ ಶೋ ನಿರೂಪಕರು ಯಾರೆಂದು ಗೊತ್ತಾಗಿದೆ. ಮೊದಲಿಗೆ ಮೆಗಾಸ್ಟಾರ್ ಚಿರಂಜೀವಿ ಹೆಸರು ಕೇಳಿಬಂದಿತ್ತು. ಆದರೆ ಹೀಗ ತೆಲುಗಿನ ಬಿಗ್ ಬಾಸ್ ನಿರೂಪಕರಾಗಿ ಜ್ಯೂನಿಯರ್ ಎನ್ಟಿಆರ್ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. 
ಮೀಲು ಎವರು ಕೋಟೇಶ್ವರುಡು ಚಿತ್ರದ ಶೋಗಾಗಿ ಚಿರಂಜೀವಿಗೆ ಹೆಚ್ಚು ಸಂಭಾವನೆ ನೀಡಲಾಗುತ್ತಿತ್ತು ಆದರೆ ಇದೀಗ ಬಿಗ್ ಬಾಸ್ ನಿರೂಪಣೆಗಾಗಿ ಎನ್ಟಿಆರ್ ಗೆ ಅದಕ್ಕಿಂತ ಹೆಚ್ಚು ಸಂಭಾವನೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. 
ತೆಲುಗಿನ ಸ್ಟಾರ್ ಮಾ ಟಿವಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಬಿತ್ತರಗೊಳ್ಳಲಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.