ತೆರೆಯ ಮೇಲೆ ಬರಲಿದೆ ಟೆಕ್ಕಿ ಸ್ವಾತಿ ಮರ್ಡರ್ ಕೇಸ್
ಕಳೆದ ವರ್ಷ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ ಟೆಕ್ಕಿ ಸ್ವಾತಿ ಕೊಲೆ ಪ್ರಕರಣ ತೆರೆಯ ಮೇಲೆ ಮೂಡಿ ಬರಲಿದೆ...

Published On :
ಚೆನ್ನೈ: ಕಳೆದ ವರ್ಷ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ ಟೆಕ್ಕಿ ಸ್ವಾತಿ ಕೊಲೆ ಪ್ರಕರಣ ತೆರೆಯ ಮೇಲೆ ಮೂಡಿ ಬರಲಿದೆ.
ಜಯ ಶುಭಾಶ್ರೀ ಬ್ಯಾನರ್ ನಲ್ಲಿ ಎಸ್.ಕೆ ಸುಬ್ಬಯ್ಯ ಬ್ಯಾನರ್ ನಲ್ಲಿ 'ಸ್ವಾತಿ ಕೊಲೈ ವಝಾಕು' ಎಂಬ ಟೈಟಲ್ ನಲ್ಲಿ ಸಿನಿಮಾ ತೆರೆ ಮೇಲೆ ಬರಲಿದೆ.
ಜೂನ್ 24 ರಂದು ನುಂಗಬಾಕಂ ರೈಲ್ವೆ ನಿಲ್ದಾಣದಲ್ಲಿ ಸ್ವಾತಿ ಕೊಲೆಯಾಗಿತ್ತು. ಅರ್ಜುನ್ ವಿಜಯ್ ಅಭಿನಯದ ಜನನಂ ಸಿನಿಮಾ ನಿರ್ದೇಶಕ ಎಸ್ ಡಿ ರಮೇಶ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ನೈಜ ಘಟನೆಯಾಧರಿಸಿ ಚಿತ್ರ ತಯಾರಿಸಲಿದ್ದು ಕೊಲೆಯ ನಂತರದ ಘಟನೆಗಳ ವಿವರಗಳನ್ನು ತೋರಿಸಲಾಗುತ್ತದೆ.
ಪ್ರಕರಣದ ತನಿಖೆ ನಡೆಸಿದ ಇನ್ಸ್ ಪೆಕ್ಟರ್ ಶಕ್ತಿ ಪಾತ್ರದಲ್ಲಿ ಅಜ್ಮಲ್ ನಟಿಸಲಿದ್ದಾರೆ. ಆಯಿರಾ ಸ್ವಾತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಡಿಬೂಟಂಟ್ ಮನೋ ಆರೋಪಿಯ ಪಾತ್ರ ನಿರ್ವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಸಿನಿಮಾFilmInfosys employeeಇನ್ಫೋಸಿಸ್ ಉದ್ಯೋಗಿSwathi murder caseಸ್ವಾತಿ ಕೊಲೆ ಪ್ರಕರಣSwathi Kolai Vazhakuಸ್ವಾತಿ ಕೊಲೆಯ್ ವಝಾಕು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


