ಸಿನಿಮಾ ಸುದ್ದಿ

ಚೈನಾದಲ್ಲಿ ಚಿತ್ರೀಕರಣಗೊಳ್ಳಲಿರುವ ನಂದ ಕಿಶೋರ್ ನಿರ್ದೇಶನದ 'ಹಯಗ್ರೀವ'

ಧ್ರುವ್ ಸರ್ಜಾ ಅಭಿನಯಿಸುತ್ತಿರುವ ನಂದ ಕಿಶೋರ್ ನಿರ್ದೇಶನದ 'ಹಯಗ್ರೀವ' ಸಿನೆಮಾದ ಚಿತ್ರೀಕರಣ ಚೈನಾದಲ್ಲಿ ನಡೆಯಲಿದೆ. ಕನ್ನಡ ಚಿತ್ರರಂಗದ ಸಿನೆಮಾಗಳು ಚೈನಾದಲ್ಲಿ

ಚೈನಾದಲ್ಲಿ ಚಿತ್ರೀಕರಣಗೊಳ್ಳಲಿರುವ ನಂದ ಕಿಶೋರ್ ನಿರ್ದೇಶನದ 'ಹಯಗ್ರೀವ'
ಧ್ರುವ್ ಸರ್ಜಾ
Published On :
ಬೆಂಗಳೂರು: ಧ್ರುವ್ ಸರ್ಜಾ ಅಭಿನಯಿಸುತ್ತಿರುವ ನಂದ ಕಿಶೋರ್ ನಿರ್ದೇಶನದ 'ಹಯಗ್ರೀವ' ಸಿನೆಮಾದ ಚಿತ್ರೀಕರಣ ಚೈನಾದಲ್ಲಿ ನಡೆಯಲಿದೆ. ಕನ್ನಡ ಚಿತ್ರರಂಗದ ಸಿನೆಮಾಗಳು ಚೈನಾದಲ್ಲಿ ಚಿತ್ರೀಕರಣಗೊಳ್ಳುವುದೇ ವಿರಳ. 
ಚಿತ್ರೀಕರಣದ ತಾಣಗಳ ಹುಡುಕಾಟಕ್ಕೆ ಚಿತ್ರತಂಡ ಚೈನಾಗೆ ಪ್ರವಾಸ ಬೆಳೆಸಲಿದೆ. ಚೈನಾದ ಕೆಲವು ಕಲಾವಿದರು ಕೂಡ ಸಿನೆಮಾದ ಭಾಗವಾಗಲಿದ್ದಾರಂತೆ. ಚೈನಾದ ನಗರಗಳನ್ನು ಚಿತ್ರೀಕರಣಕ್ಕೆ ಬಳಸಿಕೊಳ್ಳುವುದಾಗಿ ತಿಳಿಸುವ ನಂದಕಿಶೋರ್ "ಅಮೆರಿಕ, ಆಸ್ಟ್ರೇಲಿಯಾ ದೇಶಗಳಲ್ಲಿ ಕನ್ನಡ ಸಿನೆಮಾಗಳ ಚಿತ್ರೀಕರಣ ಸಾಕಷ್ಟು ಮಾಡಲಾಗಿದೆ. ನಾನು ವಿದೇಶದಲ್ಲಿ ಚಿತ್ರೀಕರಣ ಮಾಡುವ ಬಗ್ಗೆ ಚಿಂತಿಸುವಾಗ ಚೈನಾ ಮೊದಲು ನನ್ನ ತಲೆಗೆ ಬಂತು. ನಮ್ಮ ಸಿನೆಮಾ ಭವಿಷ್ಯದ ಬಗೆಗಿದ್ದು, ಆಧುನಿಕ ಕಾರುಗಳು, ಕಟ್ಟಡಗಳು ಮತ್ತು ಜನರನ್ನು ಹೊಂದಿರುವ ಚೈನಾದ ನಗರಗಳು ಇದಕ್ಕೆ ಬಹಳ ಸೂಕ್ತ" ಎನ್ನುತ್ತಾರೆ. 
"ಚೈನಾ ಕರ್ಮದ ದೇಶ ಮತ್ತು ಆಧ್ಯಾತ್ಮಿಕತೆಯು ಅಲ್ಲಿದೆ. ಅಲ್ಲಿನ ಸಂಸ್ಕೃತಿ ಕೂಡ ಆಸಕ್ತಿದಾಯಕ. ಇದು ಕೂಡ ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಳ್ಳಲು ಕಾರಣ" ಎನ್ನುವ ನಂದಕಿಶೋರ್ ಜೂನ್ ನಲ್ಲಿ ಚಿತ್ರೀಕರಣ ಪ್ರಾರಂಭಿಸುವುದಾಗಿ ಹೇಳುತ್ತಾರೆ. 
ರಮ್ಯಾ ಕೃಷ್ಣ, ಪ್ರಕಾಶ್ ರೈ ,ಅತ್ತು ರವಿಶಂಕರ್ ಈಗಾಗಲೇ ತಾರಾಗಣದ ಭಾಗವಾಗಿದ್ದು, ಅವರಿಗೆ ಪ್ರಮುಖ ಪಾತ್ರಗಳು ಇರಲಿವೆಯಂತೆ. ಚಿಕ್ಕಣ್ಣ, ಸಾಧುಕೋಕಿಲ ಮತ್ತು ತಬಲಾ ನಾಣಿ ಕೂಡ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅರ್ಜುನ್ ಜನ್ಯ ಸಿನೆಮಾಗೆ ಸಂಗೀತ ನೀಡಲಿದ್ದಾರೆ. 
ಈಮಧ್ಯೆ ಚೇತನ್ ಕುಮಾರ್ ನಿರ್ದೇಶನದ 'ಭರ್ಜರಿ' ಸಿನೆಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ಧ್ರುವ್ ತೊಡಗಿಸಿಕೊಂಡಿದ್ದಾರೆ. ನಂದಕಿಶೋರ್ 'ಟೈಗರ್' ಸಿನೆಮಾದ ಬಿಡುಗಡೆಯನ್ನು ಎದುರುನೋಡುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.