ಸಿನಿಮಾ ಸುದ್ದಿ

ನೀವೊಬ್ಬ ಮುಸ್ಲಿಂ ಆಗಿದ್ದರೇ.. ವೈರಲ್ ಆಯ್ತು ರಣದೀಪ್ ಹೂಡಾ ಫೇಸ್ ಬುಕ್ ಪೋಸ್ಟ್

ಬಾಲಿವುಡ್ ನಟ ರಣದೀಪ್ ಹೂಡಾ ಶನಿವಾರ ಸಂಜೆ ಫೇಸ್ ಬುಕ್ ನಲ್ಲಿ ಆಸಕ್ತಿದಾಯಕವಾದ ಪೋಸ್ಟ್ ಒಂದನ್ನು ಅಪ್ ಲೋಡ್ ಮಾಡಿದ್ದು, ಅದು ವೈರಲ್..

ನೀವೊಬ್ಬ ಮುಸ್ಲಿಂ ಆಗಿದ್ದರೇ.. ವೈರಲ್ ಆಯ್ತು ರಣದೀಪ್ ಹೂಡಾ ಫೇಸ್ ಬುಕ್ ಪೋಸ್ಟ್
ರಣದೀಪ್ ಹೂಡಾ
Published On :
ನವದೆಹಲಿ: ಬಾಲಿವುಡ್ ನಟ ರಣದೀಪ್ ಹೂಡಾ ಶನಿವಾರ ಸಂಜೆ ಫೇಸ್ ಬುಕ್ ನಲ್ಲಿ ಆಸಕ್ತಿದಾಯಕವಾದ ಪೋಸ್ಟ್ ಒಂದನ್ನು ಅಪ್ ಲೋಡ್ ಮಾಡಿದ್ದು, ಅದು ವೈರಲ್ ಆಗಿದೆ.
ವಿವಿಧ ಭಾಷೆ ಹಾಗೂ ಧರ್ಮದ ಜನರನ್ನು ಸಾಮಾಜಿಕ ಮಾಧ್ಯಮಗಳಿಂದ ದೂರವಿರುವಂತೆ ಸಲಹೆ ನೀಡಿದ್ದಾರೆ.
'ನೀವೊಬ್ಬ ಮುಸ್ಲಿಂ ಆಗಿದ್ದು, ಸಾವಿರಾರು ವರ್ಷಗಳಿಂದ ಬದುಕುತ್ತಿರುವ ದೇಶ ನಿಮಗೆ ಇದ್ದಕ್ಕಿದ್ಕಂತೆ ಅಸುರಕ್ಷಿತ ಎನಿಸಿದರೇ, ನೀವೊಬ್ಬ ದಲಿತರಾಗಿದ್ದು, ಪ್ರತಿಕ್ಷಣವೂ ಸಮಾಜದಲ್ಲಿ ಅವಮಾನವಾಗುತ್ತಿದೆ ಎನಿಸಿದ್ರೆ, ನೀವೊಬ್ಬ ಹಿಂದೂ ಆಗಿದ್ದೂ, ಗೋಹತ್ಯೆ ನಡೆಯುತ್ತಿದೆ ಎಂಬ ಭಾವನೆ ಮೂಡಿದ್ರೆ, ನೀವೊಬ್ಬ ಜೈನರಾಗಿದ್ದು, ಧಾರ್ಮಿಕತೆಗೆ ಧಕ್ಕೆ ಬರುತ್ತಿದೆ ಎನಿನಿಸಿದರೇ, ನೀವೊಬ್ಬ ಪಂಜಾಬಿಯಾಗಿದ್ದು, ಯುವಕರೆಲ್ಲಾ ಡ್ರಗ್ಸ್ ದಾಸರಾಗಿದ್ದಾರೆ ಎನಿಸಿದರೇ, ಸಾಮಾಜಿಕ ಜಾಲತಾಣದಿಂದ ದೂರವಿರಿ, ನ್ಯೂಸ್ ನೋಡಬೇಡಿ, ಧಾರ್ಮಿಕ ಚರ್ಚೆಯನ್ನು ನೋಡಬೇಡಿ', ಎಂದು ಫೇಸ್ ಬುಕ್ ನಲ್ಲಿ ಸಲಹೆ ನೀಡಿದ್ದಾರೆ.
ರಣದೀಪ್ ಹೂಡಾ ಅವರ ಫೇಸ್ ಬುಕ್ ಪೋಸ್ಟ್ ವೈರಲ್ ಆಗಿದ್ದು, 16 ಸಾವಿರ ಜನ ಶೇರ್ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.