ಸಿನಿಮಾ ಸುದ್ದಿ

103 ವರ್ಷದ ಅಭಿಮಾನಿಯ ಆಸೆ ಈಡೇರಿಸಿದ ಅಮಿತಾಬ್ ಬಚ್ಚನ್!

ತೆರೆಯ ಮೇಲೆ ಮಾನವೀಯತೆ ಪ್ರೀತಿ ತೋರಿ, ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿರುವ ಬಿಗ್ ಬಿ ಅಮಿತಾಬ್ ಬಚ್ಚನ್ ನಿಜ ಜೀವನದಲ್ಲೂ ಇತರರಿಗೆ ...

103 ವರ್ಷದ ಅಭಿಮಾನಿಯ ಆಸೆ ಈಡೇರಿಸಿದ ಅಮಿತಾಬ್ ಬಚ್ಚನ್!
103 ವರ್ಷದ ಅಭಿಮಾನಿಯೊಂದಿಗ ಅಮಿತಾಬ್ ಬಚ್ಚನ್
Published On :
ನವದೆಹಲಿ: ತೆರೆಯ ಮೇಲೆ ಮಾನವೀಯತೆ ಪ್ರೀತಿ ತೋರಿ, ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿರುವ ಬಿಗ್ ಬಿ ಅಮಿತಾಬ್ ಬಚ್ಚನ್ ನಿಜ ಜೀವನದಲ್ಲೂ ಇತರರಿಗೆ ಮಾದರಿಯಾಗಿದ್ದಾರೆ. ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
74 ವರ್ಷದ ಪಿಕು ನಟ 103 ವರ್ಷದ ಅಭಿಮಾನಿಯನ್ನು ಭೇಟಿ ಮಾಡಿ ಅವರ ಆಸೆ ಈಡೇರಿಸಿದ್ದಾರೆ. 103 ವರ್ಷದ ಕ್ರಿಸ್ಚೀನ್ ಅಮಿತಾಬ್ ಅವರ ಕಟ್ಟಾ ಅಭಿಮಾನಿ. ಅಮಿತಾಬ್ ಬಚ್ಚನ್ ಅವರನ್ನು ಭೇಟಿಯಾಗಬೇಕೆಂಬ ಮಹದಾಸೆ ಹೊಂದಿದ್ದರು. ಇದನ್ನು ತಿಳಿದ ಬಿಗ್ ಬಿ ಸ್ವತಃ ತಾವೇ ಅವರ ಮನೆಗೆ ಭೇಟಿ ನೀಡಿ ಕ್ರಿಸ್ಟೀನ್ ಅವರ ಆಸೆ ಈಡೇರಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅಮಿತಾಬ್  "ನನ್ನ ಕಟ್ಟಾಭಿಮಾನಿಯನ್ನು ಇಂದು ನಾನು ಭೇಟಿ ಮಾಡಿದ್ದೇನೆ, ಇದು ಅವರ ಹಲವು ವರ್ಷಗಳ ಕನಸಾಗಿತ್ತು. ಸೋ ಸ್ವೀಟ್ ಅಂಡ್ ಕ್ಯೂಟ್, ನಾನು 103 ವರ್ಷ ಬಾಳುವಂತೆ ನನಗೂ ಹರಸಿ" ಎಂದು ಅಭಿಮಾನಿಯೊಂದಿಗಿನ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.