'ಚಮಕ್' ತಂಡದ ಜೊತೆಗೆ ಹೋಲಿ ಆಡಿ-ಟಿ ಶರ್ಟ್ ಗೆಲ್ಲಿ!
ಯುವಕ ಯುವತಿಯರಿಗೆ, ನಟ ಗಣೇಶ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರೊಂದಿಗೆ ಹೋಲಿ ಆಡುವ ಅವಕಾಶ. ಸುನಿ ನಿರ್ದೇಶನದ ಈ ಚಲನಚಿತ್ರವನ್ನು ಬಣ್ಣಗಳ ನಡುವೆ ಶೂಟ್ ಮಾಡಲು ನಿರ್ದೇಶಕ

Published On :
ಬೆಂಗಳೂರು: ಯುವಕ ಯುವತಿಯರಿಗೆ, ನಟ ಗಣೇಶ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರೊಂದಿಗೆ ಹೋಲಿ ಆಡುವ ಅವಕಾಶ. ಸುನಿ ನಿರ್ದೇಶನದ ಈ ಚಲನಚಿತ್ರವನ್ನು ಬಣ್ಣಗಳ ನಡುವೆ ಶೂಟ್ ಮಾಡಲು ನಿರ್ದೇಶಕ ನಿಶ್ಚಯಿಸಿದ್ದಾರೆ. ನಾಲ್ಕು ದಿನಗಳ ಈ ಚಿತ್ರೀಕರಣ ಯೋಜನೆಯಲ್ಲಿ ಹಲವು ದೃಶ್ಯಗಳು ಮತ್ತು ಫೈಟ್ ಗಳು ಛಾಯಾಗ್ರಹಣಗೊಳ್ಳಲಿವೆ. ಮೇ ೨೪ ರಿಂದ ೨೭ ರ ನಡುವೆ ಈ ಚಿತ್ರೀಕರಣ ಜರುಗಲಿದ್ದು, ಯುವಕ-ಯುವತಿಯರಿಗೆ ಇದರ ಭಾಗವಾಗಲು ಚಿತ್ರತಂಡ ಅವಕಾಶ ನೀಡಿದೆ.
"ಹೆಸರಘಟ್ಟದ, ಸೋಲದೇವನಹಳ್ಳಿಯ ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆವರಣದಲ್ಲಿ ಚಿತ್ರೀಕರಣ ನಿಶ್ಚಯಿಸಿದ್ದೇವೆ. ಇದು ಹೋಲಿ ಥೀಮ್ ಆಗಿರುವುದರಿಂದ, ಇದನ್ನು ವರ್ಣಮಯ ಮಾಡಲಿದ್ದೇವೆ. ಇದಕ್ಕಾಗಿ ಯುವಕರು ಯುವತಿಯರಿಗೆ ಆಹ್ವಾನಿಸಲಾಗಿದ್ದು, ಭಾಗಿಯಾಗುವ ಎಲ್ಲರಿಗು 'ಚಮಕ್' ಚಿತ್ರತಂಡದ ಪರವಾಗಿ ಟಿ ಶರ್ಟ್ ನೀಡಲಾಗುವುದು. ಸಾಮನ್ಯರು ಚಿತ್ರೀಕರಣದಲ್ಲಿ ಭಾಗಿಯಾಗಬೇಕು ಎಂಬುದು ನಮ್ಮಾಸೆ" ಎನ್ನುತ್ತಾರೆ ಸುನಿ. ಇದಕ್ಕಾಗಿ ಆಸಕ್ತಿ ಇರುವವರು ವಾಟ್ಸ್ ಆಪ್ ಮೂಲಕ ೭೮೯೯೭೮೧೪೪೭ ಸಂಖ್ಯೆಗೆ ಸಂದೇಶ ಕಳುಹಿಸುವಂತೆ ನಿರ್ದೇಶಕ ಕೋರಿದ್ದಾರೆ.
ನಿರತಂರವಾಗಿ ಚಿತ್ರೀಕರಣ ನಡೆಸಿರುವ ಚಿತ್ರತಂಡ ೫೦% ಸಂಪೂರ್ಣಗೊಳಿಸಿದೆ. ಮುಂದಿನ ಹಂತ ವಿದೇಶದಲ್ಲಿ ನಡೆಯಲಿದ್ದು, ಐರ್ಲಾಂಡ್ ಅಥವಾ ಪೋರ್ಚುಗಲ್ ನಲ್ಲಿ ಚಿತ್ರೀಕರಣ ನಡೆಸುವ ಸಾಧ್ಯತೆ ಇದೆ ಎನ್ನುತ್ತಾರೆ ಸುನಿ.
ಇದೆ ಮೊದಲ ಬಾರಿಗೆ ಗಣೇಶ್ ಅವರ ಚಿತ್ರವನ್ನು ಸುನಿ ನಿರ್ದೇಶಿಸುತ್ತಿದ್ದು, ನಟ ಪ್ರಸೂತಿತಜ್ಞ ವೈದ್ಯನ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ರೋಮ್ಯಾಂಟಿಕ್ ಹಾಸ್ಯ ಚಿತ್ರದಲ್ಲಿ ಬಹುಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ ಗಣೇಶ್ ಎದುರು ನಟಿಸುತ್ತಿದ್ದು, ಸಾಧುಕೋಕಿಲ, ಗಿರಿ ಕೂಡ ತಾರಾಗಣದ ಭಾಗವಾಗಿದ್ದಾರೆ.
ಟಿ ಆರ್ ಚಂದ್ರಶೇಖರ್ ನಿರ್ಮಾಣದ ಈ ಸಿನೆಮಾಗೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದು, ಸಂತೋಷ್ ರೈ ಪಾತಾಜೆ ಸಿನೆಮ್ಯಾಟೋಗ್ರಾಫರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


