ಉತ್ತಮ ಕಥೆ ಹುಡುಕಾಟದಲ್ಲಿ ವಿನಯ್ ರಾಜ್ ಕುಮಾರ್!
ಉತ್ತಮ ಕಥೆಗಾಗಿ ಕಾಯುತ್ತಿರುವ ವಿನಯ್ ದೀರ್ಘ ಸಮಯದ ಬಳಿಕ ಸುನಿಲ್ ಥಾಲ್ಯ ಕಥೆಯನ್ನು ಕೈಗೆತ್ತಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು: ರಾಜ್ ಕುಟುಂಬದ ಕುಡಿ ವಿನಯ್ ರಾಜ್ ಕುಮಾರ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ತುಂಬಾ ದಿನಗಳೇ ಕಳೆದರು ಒಂದು ಉತ್ತಮ ಯಶಸ್ಸು ಅವರಿಗೆ ಈವರೆಗೂ ಕೈಗೆ ಸಿಕ್ಕಿಲ್ಲ. ಹೀಗಾಗಿ ಉತ್ತಮ ಕಥೆಗಾಗಿ ಕಾಯುತ್ತಿರುವ ವಿನಯ್ ದೀರ್ಘ ಸಮಯದ ಬಳಿಕ ಸುನಿಲ್ ಥಾಲ್ಯ ಕಥೆಯನ್ನು ಕೈಗೆತ್ತಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ರನ್ ಆ್ಯಂಟನಿ ಚಿತ್ರದ ಬಳಿಕ ವಿನಯ್ ರಾಜ್ ಕುಮಾರ್ ಬಳಿ ಸಾಕಷ್ಟು ಸ್ಕ್ರಿಪ್ಟ್ ಗಳು ಬಂದಿತ್ತಾದರೂ, ಉತ್ತಮ ಕಥೆಗಾಗಿ ವಿನಯ್ ಕಾದಿದ್ದರು. ಈ ಅವಧಿಯಲ್ಲು ಸುಮಾರು 15 ಸ್ಕ್ರಿಪ್ಟ್ ಗಳನ್ನು ಓದಿದ್ದ ವಿನಯ್ ಸುದೀರ್ಘ ಸಮಯದ ಬಳಿಕ ಸುನಿಲ್ ಥಾಲ್ಯ ಅವರ ಕಥೆಗೆ ಒಪ್ಪಿಗೆ ನೀಡಿದ್ದಾರಂತೆ. ಸಿಕ್ಕ ಸಿಕ್ಕ ಕಥೆಗಳನ್ನು ಮಾಡುವುದಕ್ಕಿಂತ ಉತ್ತಮವಾದ ಕಥೆಗೆ ಒಪ್ಪಿಗೆ ನೀಡುವುದು ನನ್ನ ಉದ್ದೇಶವಾಗಿತ್ತು. ಹೀಗಾಗಿ ರನ್ ಆ್ಯಂಟನಿ ಚಿತ್ರದ ಬಳಿಕ ಸಾಕಷ್ಟು ಸಮಯ ತೆಗೆದುಕೊಂಡಿದ್ದೆ.
ಈ ನಡುವೆ ಸಾಕಷ್ಟು ಕಥೆಗಳನ್ನು ಓದಿದ್ದೆ ಮತ್ತು ಈ ಪೈಕಿ ನನಗಿಷ್ಟವಾದ ಕಥೆಗಳನ್ನು ನಮ್ಮ ತಂದೆಯವರೊಂದಿಗೂ ಚರ್ಚಿಸಿದ್ದೆ. ಆ ಕಥೆಗಳಲ್ಲಿ ಪಾತ್ರ ವಿಶೇಷತೆ ಕುರಿತು ಸಾಕಷ್ಟು ಬಾರಿ ಚರ್ಚಿಸಿದ್ದೇವೆ. ಇದೀಗ ಸುನಿಲ್ ಅವರ ಕಥೆಯನ್ನು ಒಪ್ಪಿಕೊಂಡಿದ್ದೇವೆ. ಇದಲ್ಲದೆ ಮತ್ತೊಂದು ಕಥೆ ಇಷ್ಟವಾಗಿದ್ದು, ಶೀಘ್ರದಲ್ಲೇ ಈ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ವಿನಯ್ ರಾಜ್ ಕುಮಾರ್ ಹೇಳಿದ್ದಾರೆ.
ಸುನಿಲ್ ಚಿತ್ರರಂಗದಲ್ಲಿ ಸುಮಾರು 10 ವರ್ಷಗಳಷ್ಟು ಅನುಭವ ಹೊಂದಿದ್ದು, ಖ್ಯಾತ ನಿರ್ದೇಶಕರಾದ ಓಂ ಪ್ರಕಾಶ್ ರಾವ್, ಸಾಧು ಕೋಕಿಲಾ, ರಾಘವ ಲೋಕಿ, ಚೇತನ್ ಕುಮಾರ್ ಸೇರಿದಂತೆ ಹಲವು ನಿರ್ದೇಶಕ ಜೊತೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇದೀಗ ವಿನಯ್ ರಾಜ್ ಕುಮಾರ್ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗ ಹೊರಟಿದ್ದಾರೆ ಸುನಿಲ್...
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


