ರಜನಿಕಾಂತ್ ಗಮನ ಸೆಳೆದ 'ನಿಬುಣನ್' ಟೀಸರ್
ಅರ್ಜುನ್ ಸರ್ಜಾ ಅವರ ೧೫೦ನೆಯ ಸಿನೆಮಾ 'ನಿಬುಣನ್' ಟೀಸರ್ ಅನಾವರಣ ಮಾಡಿದ ರಜನಿಕಾಂತ್, ಅದನ್ನು ಪ್ರಶಂಸಿಸಿರುವುದಕ್ಕೆ ಚಿತ್ರ ತಂಡ ಥ್ರಿಲ್ ಆಗಿದೆ.

Published On :
ಬೆಂಗಳೂರು: ಅರ್ಜುನ್ ಸರ್ಜಾ ಅವರ ೧೫೦ನೆಯ ಸಿನೆಮಾ 'ನಿಬುಣನ್' ಟೀಸರ್ ಅನಾವರಣ ಮಾಡಿದ ರಜನಿಕಾಂತ್, ಅದನ್ನು ಪ್ರಶಂಸಿಸಿರುವುದಕ್ಕೆ ಚಿತ್ರ ತಂಡ ಥ್ರಿಲ್ ಆಗಿದೆ.
ಇದರ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಅರುಣ್ ವೈದ್ಯನಾಥನ್ "ಟೀಸರ್ ನೋಡಿ ಅವರು (ರಜನೀಕಾಂತ್) ಬಹಳ ಖುಷಿ ಪಟ್ಟರು ಮತ್ತು ಎರಡನೇ ಬಾರಿ ನೋಡುವ ಆಸೆ ವ್ಯಕ್ತಪಡಿಸಿದರು. ಟೀಸರ್ ನೋಡಿ ಅವರು ಕೇಳಿದ ಮೊದಲ ಪ್ರಶ್ನೆ - ಸಂಗೀತ ನೀಡಿರುವವರು ಯಾರೆಂದು. ಸಿನೆಮಾವನ್ನು ಸರಿಯಾಗಿ ಪ್ರಚಾರ ಮಾಡಲು ಸಲಹೆ ನೀಡಿದರು" ಎನ್ನುತ್ತಾರೆ.
ಕನ್ನಡ ಟ್ರೇಲರ್ ಅನ್ನು ಕೂಡ ಪ್ರಚಾರ ಮಾಡುವ ಯೋಜನೆಗಳಿವೆ ಎನ್ನುವ ಅವರು "ದೇಶದಾದ್ಯಂತ ರಜನಿಕಾಂತ್ ಅವರಿಗೆ ಅಭಿಮಾನಿಗಳಿದ್ದಾರೆ. ಕನ್ನಡ ಸಿನೆಮಾರಂಗದ ಇತರ ತಾರೆಯರನ್ನು ಕೂಡ ನಾವು ಪ್ರಚಾರಕ್ಕೆ ಪರಿಗಣಿಸುತ್ತಿದ್ದೇವೆ. ಕಿಚ್ಚ ಸುದೀಪ್ ಕೂಡ ನಮ್ಮ ಟ್ರೇಲರ್ ನೋಡಿದ್ದಾರೆ. ಅದಿನ್ನೂ ಅಂತಿಮಗೊಂಡಿಲ್ಲವಾದರೂ ಅವರಿಗೆ ಇಷ್ಟವಾಯಿತು. ಅದನ್ನು ಇನ್ನಷ್ಟು ಸರಿಪಡಿಸಿ ಅವರಿಗೆ ಮತ್ತೆ ತೋರಿಸಲಿದ್ದೇವೆ" ಎನ್ನುತ್ತಾರೆ ಅರುಣ್.
ಈ ಸಿನೆಮಾ ಕನ್ನಡದಲ್ಲಿ 'ವಿಸ್ಮಯ' ಎಂಬ ಹೆಸರಿನಲ್ಲಿ ಮೂಡಿಬರುತ್ತಿದ್ದು, ಅದರ ಟೀಸರ್ ಕೂಡ ನೆನ್ನೆ ಬಿಡುಗಡೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


