ಸಿನಿಮಾ ಸುದ್ದಿ

ಫೇಸ್ ಬುಕ್ ನಲ್ಲಿ ಡೆತ್ ನೋಟ್ ಬರೆದಿಟ್ಟು ನಿರ್ಮಾಪಕ ಅತುಲ್ ಟಾಪ್ಕಿರ್ ಆತ್ಮಹತ್ಯೆ

ಮರಾಠಿ ಚಲನಚಿತ್ರ ನಿರ್ಮಾಪಕ ಅತುಲ್‌ ತಾಪ್ಕಿರ್‌ ಫೇಸ್ ಬುಕ್ ನಲ್ಲಿ ಡೆತ್ ನೋಟ್ ಬರೆದು ಭಾನುವಾರ ಆತ್ಮಹತ್ಯೆಗೆ...

ಫೇಸ್ ಬುಕ್ ನಲ್ಲಿ ಡೆತ್ ನೋಟ್ ಬರೆದಿಟ್ಟು ನಿರ್ಮಾಪಕ ಅತುಲ್ ಟಾಪ್ಕಿರ್ ಆತ್ಮಹತ್ಯೆ
ಅತುಲ್ ಟಾಪ್ಕಿರ್
Published On :
ಮುಂಬಯಿ: ಮರಾಠಿ ಚಲನಚಿತ್ರ ನಿರ್ಮಾಪಕ ಅತುಲ್‌ ತಾಪ್ಕಿರ್‌ ಫೇಸ್ ಬುಕ್ ನಲ್ಲಿ ಡೆತ್ ನೋಟ್ ಬರೆದು ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ತನ್ನ ನಿರ್ಧಾರಕ್ಕೆ ಹೆಂಡತಿಯೇ ಕಾರಣವೆಂದು ಡೆತ್ ನೋಟ್ ನಲ್ಲಿ ಅತುಲ್ ಬರೆದಿದ್ದಾರೆ. ಆತ್ಮಹತ್ಯೆಗೆ ಕಾರಣ ನೀಡಿ ಬರೆದಿರುವ ಪತ್ರವನ್ನು ಅತುಲ್‌ ಅವರು ತಮ್ಮ ಫೇಸ್‌ಬುಕ್‌ಗೆ ಹಾಕಿದ್ದಾರೆ.
ಅತುಲ್‌ ಅವರು 2015ರಲ್ಲಿ ನಿರ್ಮಿಸಿದ್ದ  ಧೋಲ್‌ ತಾಶೆ ಚಿತ್ರ ಯಶಸ್ವಿಯಾಗಿರಲಿಲ್ಲ. ಈ ಚಿತ್ರಕ್ಕಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಇದರಿಂದ ಕುಟುಂಬದಲ್ಲಿ ಕಲಹ ಉಂಟಾಗಿತ್ತು ಎನ್ನಲಾಗಿದೆ. ಹಲವು ತಿಂಗಳಿಂದ ಪತ್ನಿ ತಮ್ಮ ಜೊತೆ ನಿರಂತರವಾಗಿ ಜಗಳವಾಡುತ್ತಿದ್ದುದ್ದಾಗಿ ಹೇಳಿಕೊಂಡಿದ್ದಾರೆ.
ಹಣಕಾಸಿನ ತೊಂದರೆಗೆ ಸಿಲುಕಿದ ನಂತರ ಪತ್ನಿ ಪ್ರಿಯಾಂಕಾ ಮತ್ತು ಆಕೆಯ ಸಹೋದರರು ನನಗೆ ತುಂಬಾ ಕಿರುಕುಳ ನೀಡಿದರು. ನನ್ನ ಮಕ್ಕಳನ್ನೂ ಭೇಟಿ ಮಾಡಲು ಬಿಡಲಿಲ್ಲ ಎಂದು ಅತುಲ್‌ ಪತ್ರದಲ್ಲಿ ತಿಳಿಸಿದ್ದಾರೆ.
ಸುಮಾರು ಆರು ತಿಂಗಳಿನಿಂದ ಒಂಟಿಯಾಗಿದ್ದ ಅತುಲ್‌ ಪುಣೆಯ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಭಾನುವಾರ ಬೆಳಿಗ್ಗೆ ಬಾಗಿಲು ತೆರೆಯದ ಕಾರಣ ಹೋಟೆಲ್‌ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಾಗಿಲು ಒಡೆದು ನೋಡಿದಾಗ ಅತುಲ್‌ ಹಾಸಿಗೆ ಮೇಲೆಯೇ ಮೃತಪಟ್ಟಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.