ಬಾಲಿವುಡ್ ನಟ ರಣಬೀರ್ ಕಪೂರ್ ಶೀಘ್ರದಲ್ಲೆ ಕಂಕಣ ಭಾಗ್ಯ?
ಬಾಲಿವುಡ್ ನಟ ರಣಬೀರ್ ಕಪೂರ್ ವಿವಾಹದ ಬಗ್ಗೆ ಬಿಟೌನ್ ನಲ್ಲಿ ಹಲವು ಗುಸುಗುಸು ಆರಂಭವಾಗಿವೆ. ರಣಬೀರ್ ..

Published On :
ಮುಂಬಯಿ: ಬಾಲಿವುಡ್ ನಟ ರಣಬೀರ್ ಕಪೂರ್ ವಿವಾಹದ ಬಗ್ಗೆ ಬಿಟೌನ್ ನಲ್ಲಿ ಹಲವು ಗುಸುಗುಸು ಆರಂಭವಾಗಿವೆ. ರಣಬೀರ್ ಲಂಡನ್ ಮೂಲದ ಚೆಲುವೆಯನ್ನು ವರಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ರಣಬೀರ್ ಕಪೂರ್ ಮತ್ತು ತಾಯಿ ನೀತು ಕಪೂರ್ ಕಳೆದ ತಿಂಗಳು ಲಂಡನ್ ಗೆ ತೆರಳಿದ್ದರು. ಸದ್ಯ ಅವರು ಮುಂಬಯಿಗೆ ವಾಪಸಾಗಿದ್ದಾರೆ. ಮೂಲಗಳ ಪ್ರಕಾರ ರಣಬೀರ್ ಕಪೂರ್ ಮತ್ತು ತಾಯಿ ನೀತು ಲಂಡನ್ ನಲ್ಲಿರುವ ಪರಿಚಯಸ್ಥರ ಕುಟುಂಬದ ಭೇಟಿಗಾಗಿ ತೆರಳಿದ್ದರು ಎನ್ನಲಾಗಿದೆ.
ಲಂಡನ್ ಗೆ ತೆರಳಿದ್ದ ರಣಬೀರ್ ತಮ್ಮ ಭಾವಿ ಪತ್ನಿಯನ್ನು ನೋಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ, ಕಪೂರ್ ಮನೆಯ ಹಿರಿಯರೆಲ್ಲರಿಗೂ ಯುವತಿ ಮೆಚ್ಚುಗೆಯಾಗಿದ್ದು, ರಣಬೀರ್ ಕಪೂರ್ ಒಪ್ಪಿಗೆಗಾಗಿ ಕಾಯಲಾಗುತ್ತಿದೆ ಎಂದು ಹೇಳಲಾಗಿದೆ. ರಣಬೀರ್ ಈ ಸಂಬಂಧಕ್ಕೆ ಒಪ್ಪಿಗೆ ನೀಡಿದ್ದಾರೆಯೇ ಇಲ್ಲವೇ ಎಂಬುದು ಇನ್ನೂ ಖಚಿತವಾಗಿಲ್ಲ, ಒಂದು ವೇಳೆ ರಣಬೀರ್ ಈ ಸಂಬಂಧಕ್ಕೆ ಒಪ್ಪಿದರೇ ಶಾಹಿದ್ ಕಪೂರ್ ನಂತರ ಬಾಲಿವುಡ್ ನಲ್ಲಿ ಮತ್ತೊಂದು ಆರೇಂಜ್ಡ್ ಮ್ಯಾರೇಜ್ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


