ಸಿನಿಮಾ ಸುದ್ದಿ

ದರ್ಶನ್ 'ಕುರುಕ್ಷೇತ್ರ'ಕ್ಕೆ ಭರದ ಸಿದ್ಧತೆ; ಹಂಸಲೇಖ ಸಂಗೀತ

ನಿರ್ಮಾಪಕ ಮುನಿರತ್ನ ತಮ್ಮ ಹುಟ್ಟುಹಬ್ಬದ ದಿನವಾದ ಜುಲೈ ೨೩ ರಂದು 'ಕುರುಕ್ಷೇತ್ರ' ಸಿನೆಮಾಗೆ ಚಾಲನೆ ನೀಡಲು ಮುಂದಾಗಿದ್ದಾರೆ. ಹೈದರಾಬಾದಿನ ರಾಮೋಜಿ ಸ್ಟುಡಿಯೋಸ್ ನಲ್ಲಿ ಇದಕ್ಕಾಗಿ ಬೃಹತ್ ಸೆಟ್

ದರ್ಶನ್ 'ಕುರುಕ್ಷೇತ್ರ'ಕ್ಕೆ ಭರದ ಸಿದ್ಧತೆ; ಹಂಸಲೇಖ ಸಂಗೀತ
ದರ್ಶನ್
Published On :
ಬೆಂಗಳೂರು: ನಿರ್ಮಾಪಕ ಮುನಿರತ್ನ ತಮ್ಮ ಹುಟ್ಟುಹಬ್ಬದ ದಿನವಾದ ಜುಲೈ ೨೩ ರಂದು 'ಕುರುಕ್ಷೇತ್ರ' ಸಿನೆಮಾಗೆ ಚಾಲನೆ ನೀಡಲು ಮುಂದಾಗಿದ್ದಾರೆ. ಹೈದರಾಬಾದಿನ ರಾಮೋಜಿ ಸ್ಟುಡಿಯೋಸ್ ನಲ್ಲಿ ಇದಕ್ಕಾಗಿ ಬೃಹತ್ ಸೆಟ್ ಸೃಷ್ಟಿಸಲಾಗುತ್ತಿದ್ದು, ಚಿತ್ರೀಕರಣ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ. 
ಕಲಾ ನಿರ್ದೇಶಕ ಕಿರಣ್ ಈ ಸೆಟ್ ನಿರ್ಮಿಸಲು ದುಡಿಯುತ್ತಿದ್ದು, ಇದಕ್ಕೆ ಕನಿಷ್ಠ ಎರಡು ವರೆ ತಿಂಗಳು ಹಿಡಿಯಲಿದೆ ಎನ್ನುತ್ತವೆ ನಿರ್ಮಾಣ ತಂಡದ ಮೂಲಗಳು. ಆಗಸ್ಟ್ ಮೊದಲ ವಾರದಿಂದ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆಯಂತೆ.
ದರ್ಶನ್ ಫೋಟೋ ಶೂಟ್ ಕೂಡ ನಡೆದಿದೆ ಎಂದು ತಿಳಿಸುವ ಮೂಲಗಳು "ದರ್ಶನ್ ಈಗ ಸದ್ಯಕ್ಕೆ 'ತಾರಕ್' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. 
"ಇದು ಐತಿಹಾಸಿಕ-ಪುರಾಣ ಚಿತ್ರವಾಗಿರುವುದರಿಂದ ಅವರ ಉಡುಪುಗಳನ್ನು ಸಿದ್ಧಪಡಿಸಲು ನಿರ್ಧಿಷ್ಟ ಅಳತೆ ಬೇಕಾಗುತ್ತದೆ. ದುರ್ಯೋಧನದ ಪಾತ್ರ ಮಾಡಲಿರುವ ದರ್ಶನ್ ನಾಲ್ಕು ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ" ಎನ್ನುತ್ತವೆ.
ಉಳಿದ ತಾರಾಗಣದ ಆಯ್ಕೆಯಲ್ಲಿ ನಿರತರಾಗಿರುವ ಚಿತ್ರತಂಡ ಹಂಸಲೇಖ ಅವರ ಸಂಗೀತ ಚಿತ್ರಕ್ಕಿರಲಿದೆ ಎಂದು ಧೃಢೀಕರಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.