ಸಿನಿಮಾ ಸುದ್ದಿ

ಸಿನೆಮಾ ಮೂರ್ಖರ ಆಟವಲ್ಲ: ನಿರ್ದೇಶಕ ಪ್ರೇಮ್

'ದ ವಿಲನ್' ಸಿನೆಮಾಗೆ ಇಬ್ಬರು ಸ್ಟಾರ್ ಗಳು ಶಿವರಾಜ್ ಕುಮಾರ್ ಮತ್ತು ಸುದೀಪ್ ಅವರನ್ನು ಒಟ್ಟಿಗೆ ತಂದಿರುವ ನಿರ್ದೇಶಕ ಪ್ರೇಮ್ ತುದಿಗಾಲ ಮೇಲೆ ನಿಂತಿದ್ದಾರೆ. ಏಪ್ರಿಲ್ ೧೩ ರಿಂದ ಜೈಲು ದೃಶ್ಯವನ್ನು

ಸಿನೆಮಾ ಮೂರ್ಖರ ಆಟವಲ್ಲ: ನಿರ್ದೇಶಕ ಪ್ರೇಮ್
ಶಿವರಾಜ್ ಕುಮಾರ್-ಪ್ರೇಮ್-ಸುದೀಪ್
Published On :
ಬೆಂಗಳೂರು: 'ದ ವಿಲನ್' ಸಿನೆಮಾಗೆ ಇಬ್ಬರು ಸ್ಟಾರ್ ಗಳು ಶಿವರಾಜ್ ಕುಮಾರ್ ಮತ್ತು ಸುದೀಪ್ ಅವರನ್ನು ಒಟ್ಟಿಗೆ ತಂದಿರುವ ನಿರ್ದೇಶಕ ಪ್ರೇಮ್ ತುದಿಗಾಲ ಮೇಲೆ ನಿಂತಿದ್ದಾರೆ. ಏಪ್ರಿಲ್ ೧೩ ರಿಂದ ಜೈಲು ದೃಶ್ಯವನ್ನು ಚಿತ್ರೀಕರಿಸಲು ಪರವಾನಗಿ ಪಡೆಯಲು ಅವರು ಬ್ಯುಸಿಯಾಗಿದ್ದಾರೆ. ಹಾಗೆಯೇ ಸಿನೆಮಾದ ಮೊದಲ ನೋಟವನ್ನು ಬಿಡುಗಡೆ ಮಾಡಲು ಕೆಲಸ ಮಾಡುತ್ತಿರುವ ಅವರು ಏಪ್ರಿಲ್ ೧ ರಂದು ಅನಾವರಣಗೊಳಿಸಲಿದ್ದಾರಂತೆ.
ಮೊದಲ ನೋಟದ ಬಿಡುಗಡೆಯನ್ನು ಅದ್ದೂರಿಯಾಗಿ ನೆರವೇರಿಸಲು ಸಿದ್ಧತೆ ನಡೆಸುತ್ತಿರುವ ಪ್ರೇಮ್, ಎಲ್ಲವು ಸುಸೂತ್ರವಾಗಿ ನಡೆಯಲೆಂದು ಗಳೂರು, ಚೆನ್ನೈ ಮತ್ತು ಹೈದರಾಬಾದ್ ನಡುವೆ ಹಲವು ಸುತ್ತುಗಳ ಪ್ರಯಾಣ ನಡೆಸಿದ್ದಾರೆ. "ಮೊದಲಿಗೆ ೭-೮ ಗ್ರಾಮಗಳಲ್ಲಿ ಮೊದಲ ನೋಟವನ್ನು ಬಿಡುಗಡೆ ಮಾಡಲು ನಿಶ್ಚಯಿಸಿದ್ದೆ. ಆದರೆ ಸುದೀಪ್ ಮತ್ತು ಶಿವಣ್ಣ ಅಭಿಮಾನಿಗಳು ಎಲ್ಲ ಗ್ರಾಮಗಳಲ್ಲೂ ಇದು ಬೇಕೆಂದು ಕೇಳಿಕೊಂಡರು, ಆದುದರಿಂದ ಈಗ ಆ ಸಂಖ್ಯೆ ೩೦ಕ್ಕೆ ಏರಿದೆ" ಎನ್ನುವ ಪ್ರೇಮ್ "ಆದುದರಿಂದ ಈಗ ಒಂದು ನಿರ್ಣಯಕ್ಕೆ ಬಂದಿದ್ದು, ಬೆಂಗಳೂರಿನ ದೇವಾಲಯದಲ್ಲಿ ಬಿಡುಗಡೆ ಮಾಡಲಿದ್ದೇವೆ, ನಂತರ ರಾತ್ರಿ ೭ ಘಂಟೆಗೆ ಚಾಲನೆ ನೀಡಲಿದ್ದೇವೆ" ಎನ್ನುತ್ತಾರೆ.
ಸುದೀಪ್ ಮತ್ತು ಇತರ ಕಲಾವಿದರನ್ನು ಒಳಗೊಂಡ ಮೊದಲ ಹಂತದ ಚಿತ್ರೀಕರಣ ೧೩ ದಿನಗಳವರೆಗೆ ನಡೆಯಲಿದೆ. 'ದಿ ವಿಲನ್' ಮೂಲಕ ಅಮಿ ಜಾಕ್ಸನ್ ಕನ್ನಡಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ವದಂತಿಗಳಿವೆ ಆದರೆ ನಿರ್ಮಾಪಕರಿಂದ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. ಈಮಧ್ಯೆ ಪ್ರೇಮ್ ಮತೊಬ್ಬ ನಾಯಕ ನಟಿಯ ಶೋಧ ನಡೆಸಿದ್ದಾರೆ ಎಂದು ತಿಳಿದುಬಂದಿದೆ. "ಯಾರು ಹೀರೋಯಿನ್ ಆಗಲಿದ್ದಾರೆ ಎಂಬುದರ ಬಗ್ಗೆ ಸಾಕಷ್ಟು ಚರ್ಚೆಗಳಿವೆ ಆದರೆ ಸಿನೆಮಾ ಮೂರ್ಖರ ಆಟ ಅಲ್ಲ. ಅತ್ಯುತ್ತಮವಾದದನ್ನು ಆಯ್ಕೆ ಮಾಡಲು ಇನ್ನಷ್ಟು ಪ್ರಯತ್ನ ಮಾಡಲಿದ್ದೇನೆ ಮತ್ತು ಕೆಲವು ಸಂಗತಿಗಳು ನನ್ನ ಕೈಲಿಲ್ಲ. ಆದರೆ ನನ್ನ ಶ್ರಮ ಮುಂದುವರೆಯುತ್ತದೆ" ಎನ್ನುತ್ತಾರೆ ಪ್ರೇಮ್. 
ಬಹುತೇಕ ಅಂತಿಮವಾಗಿದ್ದ ಅಮಿ ಜಾಕ್ಸನ್ ಈಗ ಸಿನೆಮಾದ ಭಾಗವಾಗಿರುವುದಿಲ್ಲ ಎಂದು ವಿವರಿಸುವ ಪ್ರೇಮ್ "ಅಮಿ ಅವರಿಗೆ ನಿರ್ಮಾಪಕ ಸಿ ಆರ್ ಮನೋಹರ್ ಮುಂಗಡ ರಾಯಧನ ನೀಡಿದ್ದರು. ಡಿಸೆಂಬರ್ ಸಮಯದಲ್ಲಿ ಅವರು ನಮ್ಮ ಸಂಪರ್ಕದಲ್ಲಿದ್ದರು ಮತ್ತು ನಮ್ಮ ಯೋಜನೆಯಲ್ಲಿ ನಟಿಸಲು ಉತ್ಸುಕರಾಗಿದ್ದರು. ಆದರೆ ಸುದೀಪ್ ಕೇಶಶೈಲಿಯ ಬಗ್ಗೆ ನಾನು ನಿಖರನಾಗಿದ್ದರಿಂದ ಚಿತ್ರೀಕರಣ ಮುಂದೂಡಬೇಕಾಗಿ ಬಂತು. ಅವರು ಅವರ ಕೇಶಶೈಲಿಯಲ್ಲಿ ಹೆಬ್ಬುಲಿ ಚಿತ್ರೀಕರಣ ಮುಗಿಸಬೇಕಿತ್ತು, ಆದುದರಿಂದ ಇಡೀ ಚಿತ್ರೀಕರಣ ಮುಂದೆ ಹಾಕಬೇಕಾಯಿತು, ಈ ಮಧ್ಯೆ ಅಮಿ ಇಂಗ್ಲಿಷ್ ಸಿನೆಮಾವೊಂದರಲ್ಲಿ ಬ್ಯುಸಿಯಾಗಿ, ಎರಡು ತಿಂಗಳ ನಂತರವಷ್ಟೇ ಸಿಗುವುದಾಗಿ ತಿಳಿಸಿದರು. ಅಲ್ಲದೆ (ರಜನಿಕಾಂತ್ ಜೊತೆಗೆ ನಟಿಸುತ್ತಿರುವ) ೨.೦ ದಲ್ಲಿ ಕೂಡ ೨ ಹಾಡುಗಳು ಬಾಕಿಯಿದ್ದು, ಸದ್ಯಕ್ಕೆ ದಿನಾಂಕ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ" ಎಂದು ತಿಳಿಸುತ್ತಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.