ಸಿನಿಮಾ ಸುದ್ದಿ

ನನ್ನ ಪಾತ್ರಕ್ಕೆ ಜೀವ ತುಂಬಲು ಹೆಚ್ಚು ಉತ್ಸುಕಳಾಗಿದ್ದೇನೆ: ಶುಭ್ರ ಅಯ್ಯಪ್ಪ

ಸ್ಯಾಂಡಲ್ವುಡ್ ನಟ ಶಿವರಾಜ್ ಕುಮಾರ್ ಅಭಿನಯದ ವಜ್ರಕಾಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಶುಭ್ರ ಅಪ್ಪಯ್ಯ ಅವರು ಇದೀಗ ಸಿಂಪಲ್ ಸುನಿ ನಿರ್ದೇಶನದ...

ನನ್ನ ಪಾತ್ರಕ್ಕೆ ಜೀವ ತುಂಬಲು ಹೆಚ್ಚು ಉತ್ಸುಕಳಾಗಿದ್ದೇನೆ: ಶುಭ್ರ ಅಯ್ಯಪ್ಪ
ಶುಭ್ರ ಅಯ್ಯಪ್ಪ
Published On :
ಸ್ಯಾಂಡಲ್ವುಡ್ ನಟ ಶಿವರಾಜ್ ಕುಮಾರ್ ಅಭಿನಯದ ವಜ್ರಕಾಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಶುಭ್ರ ಅಪ್ಪಯ್ಯ ಅವರು ಇದೀಗ ಸಿಂಪಲ್ ಸುನಿ ನಿರ್ದೇಶನದ ಜಾನ್ ಸೀನಾ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 
ಈ ಚಿತ್ರದ ಬಗ್ಗೆ ಸಿಟಿ ಎಕ್ಸ್ಪ್ರೆಸ್ ಜತೆ ತಮ್ಮ ಮನದಾಳದ ಮಾತುಗಳನ್ನು ಆಡಿರುವ ಶುಭ್ರ ಅವರು, ಜಾನ್ ಸೀನಾ ಚಿತ್ರದಲ್ಲಿ ನಾನು ವಿಭಿನ್ನ ಪಾತ್ರದಲ್ಲಿ ಅಭಿಯಿಸುತ್ತಿದ್ದು ನನ್ನ ಪಾತ್ರಕ್ಕೆ ಜೀವ ತುಂಬಲು ಉತ್ಸುಕಳಾಗಿದ್ದೇನೆ ಎಂದರು ಹೇಳಿದ್ದಾರೆ. 
ಶುಭ್ರ ಅಯ್ಯಪ್ಪ ರೂಪದರ್ಶಿಯಾಗಿದ್ದು ತುಂಬ ಸುಂದರವಾಗಿ ಕಾಣುತ್ತಾಳೆ ಎಂದು ಜನರು ಸಾಮಾನ್ಯವಾಗಿ ಭಾವಿಸುತ್ತಾರೆ. ಆದರೆ ನನ್ನ ಅಂದ ಚಂದಕ್ಕಿಂತ ನನ್ನ ಅಭಿನಯವನ್ನು ಜನರು ನೆಚ್ಚಿಕೊಳ್ಳಬೇಕು.
ಅದಕ್ಕೆ ತಕ್ಕಂತೆ ಜಾನ್ ಸೀನಾ ಚಿತ್ರದಲ್ಲಿ ಸುನಿ ಅವರು ಅಂತಹ ಪಾತ್ರವನ್ನೇ ನೀಡಿದ್ದಾರೆ. ಅವರಿಗೆ ನಾನು ಧನ್ಯವಾದಗಳು. ವಜ್ರಕಾಯ ಚಿತ್ರದ ಪಾತ್ರಕ್ಕೆ ಹೋಲಿಸಿಕೊಂಡರೆ ಜಾನ್ ಸೀನಾ ಚಿತ್ರದ ಪಾತ್ರ ಸಾಕಷ್ಟು ವಿಭಿನ್ನವಾಗಿದೆ. ಚಿತ್ರಮಂದಿರದಲ್ಲಿ ಈ ಚಿತ್ರದಲ್ಲಿನ ನನ್ನ ಅಭಿನಯವನ್ನು ಕಾಣುವ ಪ್ರೇಕ್ಷಕರು ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ ಅದನ್ನು ಕಾಣಲು ನಾನು ಕಾಯುತ್ತಿದ್ದೇನೆ ಎಂದರು. 
ಸದ್ಯ ಸುನಿ ಆಪರೇಶನ್ ಅಲಮೇಲಮ್ಮ ಚಿತ್ರವನ್ನು ನಿರ್ದೇಶಿಸಿದ್ದು ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಈ ಮಧ್ಯೆ ಜಾನ್ ಸೀನಾ ಚಿತ್ರದ ಶೇಖಡ 60ರಷ್ಟು ಭಾಗದ ಚಿತ್ರೀಕರಣವನ್ನು ಮುಗಿಸಿರುವ ಅವರು ಇನ್ನ ಹತ್ತು ದಿನಗಳಲ್ಲಿ ಚಿತ್ರದ ಸಂಪೂರ್ಣ ಚಿತ್ರೀಕರಣ ಮುಗಿಸಲಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.