ಚಂದ್ರು 'ಕನಕ'ನಿಗೆ ಆಟೋ ಚಾಲಕ ಸ್ಫೂರ್ತಿ
ದುನಿಯಾ ವಿಜಯ್ ನಾಯಕನಟನಾಗಿರುವ ಆರ್ ಚಂದ್ರು ನಿರ್ದೇಶನದ 'ಕನಕ' ಸದ್ಯಕ್ಕೆ ಚಿತ್ರೀಕರಣಗೊಳ್ಳುತ್ತಿದೆ. ನಾಯಕನಟನ ಮೊದಲ ನೋಟದಿಂದ ಅವರು ಡಾ. ರಾಜಕುಮಾರ್

Published On :
ಬೆಂಗಳೂರು: ದುನಿಯಾ ವಿಜಯ್ ನಾಯಕನಟನಾಗಿರುವ ಆರ್ ಚಂದ್ರು ನಿರ್ದೇಶನದ 'ಕನಕ' ಸದ್ಯಕ್ಕೆ ಚಿತ್ರೀಕರಣಗೊಳ್ಳುತ್ತಿದೆ. ನಾಯಕನಟನ ಮೊದಲ ನೋಟದಿಂದ ಅವರು ಡಾ. ರಾಜಕುಮಾರ್ ಅಭಿಮಾನಿಯಾದ ಆಟೋ ಚಾಲಕನ ಪಾತ್ರ ನಿರ್ವಹಿಸುತ್ತಿರುವುದು ತಿಳಿದುಬರುತ್ತದೆ ಮತ್ತು ಚಂದ್ರು ಅವರೇ ಹೇಳುವಂತೆ ಈ ರೋಮ್ಯಾಂಟಿಕ್ ಸಿನೆಮಾಗೆ ನಿಜ ಜೀವನ ಸ್ಫೂರ್ತಿ ಎನ್ನುತ್ತಾರೆ.
"ನಾನು ಬೆಂಗಳೂರಿನಲ್ಲಿ ಆಟೋ ಚಾಲಕರೊಬ್ಬರನ್ನು ಭೇಟಿ ಮಾಡಿದೆ. ಅವರು ಅನಕ್ಷರಸ್ಥ ಮತ್ತು ಡಾ. ರಾಜಕುಮಾರ್ ಸಿನೆಮಾಗಳನ್ನು ನೋಡಿಕೊಂಡು ಬೆಳೆದವರು. ಅವರಿಗೆ ರಾಜಕುಮಾರ್ ಅವರ ಸಿನಿಮಾಗಳೇ ಕಲಿಯುವ ವ್ಯವಸ್ಥೆ-ಸಂಸ್ಥೆಯಂತೆ.
ಅಣ್ಣಾವ್ರು ತೀರಿಕೊಂಡ ನಂತರ ಊಟ ಮಾಡುವುದನ್ನೇ ಬಿಟ್ಟಿದ್ದಾಗಿ ಕೂಡ ಅವರು ನನಗೆ ಹೇಳಿದ್ದರು.
ಡಾ. ರಾಜಕುಮಾರ್ ಅವರ ಆದರ್ಶಗಳನ್ನು ಪಾಲಿಸಿ ಸಮಾಜ ಸೇವೆ ಮಾಡುವುದೊಂದೇ ಅವರ ಗುರಿಯಾಗಿತ್ತು" ಎಂದು ವಿವರಿಸುತ್ತಾರೆ ಚಂದ್ರು.
ಆಟೋಚಾಲಕನ ಜೀವನದಲ್ಲಿ ಒಂದು ಸುಂದರ ಪ್ರೇಮಕಥೆ ಕೂಡ ಇತ್ತು ಮತ್ತೀಗ ಅದನ್ನು ಸಿನಿಮಾಗಾಗಿ ತಕ್ಕಂತೆ ಅಳವಡಿಸಿಕೊಂಡಿರುವುದಾಗಿ ಹೇಳುತ್ತಾರೆ ಚಂದ್ರು.
"ಪ್ರೇಕ್ಷಕರಿಗೆ ಸಂಬಂಧಿಸುವ ನೈಜ ಕಥೆಗಳನ್ನು ನಾನು ಹುಡುಕುತ್ತಿರುತ್ತೇನೆ. ನಾನು ಕಮರ್ಷಿಯಲ್ ಸಿನೆಮಾಗಳ ಮೂಲಕ ಹಣ ಮಾಡಿದ್ದೇನೆ.
ಆದರೆ ನಾನು ಭೇಟಿ ಮಾಡುವ ಬಹಳಷ್ಟು ಜನರು, ನಾನು ನಿಜ ಕಥೆಗಳನ್ನು ಆಧರಿಸಿ ಮಾಡಿರುವ 'ತಾಜ್ ಮಹಲ್', 'ಚಾರ್ ಮಿನಾರ್' ಮತ್ತು 'ಮೈಲಾರಿ' ಸಿನೆಮಾಗಳನ್ನು ಹೆಚ್ಚು ಮೆಚ್ಚಿದ್ದಾಗಿ ಹೇಳುತ್ತಿರುತ್ತಾರೆ. ಮತ್ತೀಗ ಈ ಸಿನೆಮಾ ಅದಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆ" ಎನ್ನುತ್ತಾರೆ ಚಂದ್ರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


