ನಟ ಕಮಲ್ ಹಾಸನ್ ರಿಂದ ಇಂಗ್ಲೆಂಡ್ ರಾಣಿ ಕ್ವೀನ್ ಎಲಿಜಬೆತ್ ಭೇಟಿ
ಬಹುಭಾಷಾ ನಟ ಕಮಲ್ ಹಾಸನ್ ಕ್ವೀನ್ ಎಲಿಜಬೆತ್ II ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ...

ಚೆನ್ನೈ: ಬಹುಭಾಷಾ ನಟ ಕಮಲ್ ಹಾಸನ್ ಕ್ವೀನ್ ಎಲಿಜಬೆತ್ II ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡಿದ್ದರು.
ಯುಕೆ- ಇಂಡಿಯಾ ಇಯರ್ ಆಫ್ ಕಲ್ಚರ್ 2017 ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕಮಲ್ ಎಲಿಜಬೆತ್ II ರ ಭೇಟಿ ಕುರಿತಂತೆ ಫೇಸ್ಬುಕ್ನಲ್ಲಿ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು 1997ರ ಹಳೆಯ ನೆನಪೊಂದನ್ನು ಮೆಲುಕು ಹಾಕಿದ್ದಾರೆ.
1997ರಲ್ಲಿ ಇಂಗ್ಲೆಂಡ್ನ ರಾಣಿ ಎಲಿಜಬೆತ್ II ಭಾರತಕ್ಕೆ ಭೇಟಿ ಕೊಟ್ಟಾಗ ಅವರು ಕಮಲ್ ಅಭಿನಯಿಸುತ್ತಿದ್ದ 'ಮರುಧನಾಯಗಂ' ಚಿತ್ರದ ಶೂಟಿಂಗ್ ಸೆಟ್ಗೆ ಭೇಟಿ ಕೊಟ್ಟಿದ್ದರು. ಆ ಸಂದರ್ಭವನ್ನು ಕಮಲ್ಹಾಸನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕ್ವೀನ್ ಎಲಿಜಬೆತ್ ತನ್ನ ಇಡೀ ಜೀವನದಲ್ಲಿ ನೋಡಿರುವ ಏಕೈಕ ಸಿನಿಮಾ ಶೂಟಿಂಗ್ ಬಹುಶಃ ಇದೇ ಆಗಿರಬಹುದು ಎಂದು ಕಮಲ್ ಸಾಮಾಜಿಕ ಜಾಲತಾಣಗಳಲ್ಲಿ ಆ ದಿನಗಳನ್ನು ಸ್ಮರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


