'ಕವಲು ದಾರಿ'ಯಲ್ಲಿ ಪೊಲೀಸ್ ಅಧಿಕಾರಿಯಾಗಿ ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ
ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದ ಯಶಸ್ಸಿನ ನಂತರ ನಿರ್ದೇಶಕ ಹೇಮಂತ್ ರಾವ್ ಕವಲು ದಾರಿ...

Published On :
ಬೆಂಗಳೂರು: ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದ ಯಶಸ್ಸಿನ ನಂತರ ನಿರ್ದೇಶಕ ಹೇಮಂತ್ ರಾವ್ ಕವಲು ದಾರಿ ಎಂಬ ಮತ್ತೊಂದು ಸಿನಿಮಾ ಮಾಡಲು ಹೊರಟಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್, ಕಾರ್ತಿಕ್ ಮತ್ತು ಕೆಆರ್ ಜಿ ಸ್ಟುಡಿಯೋಸ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಆಗಸ್ಟ್ ನಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದ್ದು, ಆಪರೇಷನ್ ಅಲಮೇಲಮ್ಮ ಚಿತ್ರದ ನಾಯಕ ರಿಷಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಕವಲುದಾರಿ ಥ್ರಿಲ್ಲರ್ ಸಿನಿಮಾದಲ್ಲಿ ರಿಷಿ ಪೋಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಮಂತ್ ರಾವ್ ಹೇಳಿದ್ದಾರೆ.
ಅಪರೇಷನ್ ಅಲಮೇಲಮ್ಮ ಸಿನಿಮಾ ಟ್ರೇಲರ್ ನೋಡಿದ ಹೇಮಂತ್ ತಮ್ಮ ಕವಲು ದಾರಿ ಸಿನಿಮಾದ ಪೊಲೀಸ್ ಪಾತ್ರಕ್ಕೆ ರಿಷಿಯೇ ಸೂಕ್ತ ನಟ ಎಂದು ನಿರ್ಧರಿಸಿದ್ದರು. ಆಪರೇಷನ್ ಅಲಮೇಲಮ್ಮ ಸಿನಿಮಾದ ಪರ್ಮಿ ಪಾತ್ರ ನನ್ನನ್ನು ಬಹಳ ಇಂಪ್ರೆಸ್ ಮಾಡಿತ್ತು ಎಂದು ತಿಳಿಸಿದ್ದಾರೆ
ಕವಲು ದಾರಿ ಎಂದರೇ ಕ್ರಾಸ್ ರೋಡ್, ಪೊಲೀಸ್ ಅಧಿಕಾರಿಯೊಬ್ಬನ ಸತ್ಯ ಮತ್ತು ಸುಳ್ಳಿನ ನಡುವಿನ ಜೀವನದ ಕಥೆಯನ್ನೊಳಗೊಂಡ ಸಿನಿಮಾವಾಗಿದೆ, ಸಿನಿಮಾ ಗೆ ನಾಯಕಿ ಪಾತ್ರ ಇನ್ನೂ ಅಂತಿಮವಾಗಿಲ್ಲ. ಚಿತ್ರಕ್ಕೆ ಚರಣ್‍ರಾಜ್ ಸಂಗೀತ ಮತ್ತು ಅದ್ವೈತ ಗುರುಮೂರ್ತಿ ಛಾಯಾಗ್ರಹಣವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಹೇಮಂತ್ ಎಂ ರಾವ್RishiGodhi Banna Sadharana Mykattuಗೋಧಿ ಬಣ್ಣ ಸಾಧಾರಣ ಮೈಕಟ್ಟುHemanth M RaoರಿಷಿKavalu Daariಕವಲು ದಾರಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


