ನಿಖಿಲ್ ಚಿತ್ರಕ್ಕೆ ಇನ್ನೂ ಸಿಗದ ಹೊಸ ನಿರ್ದೇಶಕ
'ಜಾಗ್ವಾರ್' ನಿಖಿಲ್ ಕುಮಾರ್ ಅವರ ಎರಡನೇ ಚಿತ್ರದ ನಿರ್ಮಾಪಕರು ಚಿತ್ರೀಕರಣ ಪ್ರಾರಂಭಿಸಲು ಇನ್ನು ಕಾಯುತ್ತಿದ್ದಾರೆ. ಈ ಮೊದಲು ಈ ಸಿನೆಮಾ ನಿರ್ದೇಶಿಸಬೇಕಿದ್ದ ಚೇತನ್ ಕುಮಾರ್

Published On :
ಬೆಂಗಳೂರು: 'ಜಾಗ್ವಾರ್' ನಿಖಿಲ್ ಕುಮಾರ್ ಅವರ ಎರಡನೇ ಚಿತ್ರದ ನಿರ್ಮಾಪಕರು ಚಿತ್ರೀಕರಣ ಪ್ರಾರಂಭಿಸಲು ಇನ್ನು ಕಾಯುತ್ತಿದ್ದಾರೆ. ಈ ಮೊದಲು ಈ ಸಿನೆಮಾ ನಿರ್ದೇಶಿಸಬೇಕಿದ್ದ ಚೇತನ್ ಕುಮಾರ್ ಈಗ ಹೊರಬಿದ್ದಿದ್ದು, ಹೊಸ ನಿರ್ದೇಶಕ ಅನ್ವೇಷಣೆ ಮುಂದುವರೆದಿದೆ.
ಈಮಧ್ಯೆ ನಟ ನಿಖಿಲ್ ಕುಮಾರ್ ಮತ್ತು ನಟಿ ರಿಯಾ ನಾಲ್ವಡೆ ಅವರ ಸಿನೆಮಾದ ಮೊದಲ ನೋಟ ಹೊರಬಿದ್ದಿದ್ದು, ಪ್ರೇಕ್ಷಕರ ಗಮನ ಸೆಳೆದಿದೆ.
ಆಕರ್ಷಕ ಉಡುಗೆತೊಡುಗೆಗಳನ್ನು ತೊಟ್ಟ ನಟ ನಟಿಯರ ಈ ಚಿತ್ರ ವೈರಲ್ ಆಗುವತ್ತ ಮುನ್ನಡೆದಿದ್ದು, ಸ್ಯಾಂಡಲ್ವುಡ್ ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಲಿದೆ ಎನ್ನುತ್ತಾರೆ ಅಭಿಮಾನಿಗಳು.
ಈ ಸಿನೆಮಾ ಮೂಲಕ ಕನ್ನಡ ತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ರಿಯಾ ನಾಲ್ವಡೆ ನಿರ್ದೇಶಕ ಸಾದ್ ಖಾನ್ ಅವರಿಂದ ತರಬೇತಿ ಪಡೆದಿದ್ದಾರೆ. ಸಾದ್ ಖಾನ್ ಸದ್ಯಕ್ಕೆ 'ಹಂಬಲ್ ಪೊಲಿಟಿಷಿಯನ್ ನೊಗರಾಜ್' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ನಿಖಿಲ್ ಅವರ ಎರಡನೇ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನೀಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


