'ರಾಜಕುಮಾರ' ಸೂಪರ್ ಹಿಟ್ ನಂತರ, ಹೊಂಬಾಳೆ ಫಿಲ್ಮ್ಸ್ ಮುಂದಿನ ಚಿತ್ರಕ್ಕೆ ಸುದೀಪ್ ನಾಯಕ
ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ರಾಜಕುಮಾರ ಈ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾವಾಗಿದೆ. ಪುನೀತ್ ಅಭಿನಯದ ಈ ಚಿತ್ರವನ್ನು ..

Published On :
ಬೆಂಗಳೂರು: ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ 'ರಾಜಕುಮಾರ' ಈ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾವಾಗಿದೆ. ಪುನೀತ್ ಅಭಿನಯದ ಈ ಚಿತ್ರವನ್ನು ಸಂತೋಷ್ ಆನಂದರಾಮ್ ನಿರ್ದೇಶಿಸಿದ್ದರು. ರಾಜಕುಮಾರ ಸಿನಿಮಾ ಕನ್ನಡ ಪ್ರೇಕ್ಷಕರ ಮೇಲೆ ಉತ್ತಮ ಪರಿಣಾಮ ಬೀರಿತ್ತು. ಈ ಸಿನಿಮಾವನ್ನು ತೆಲುಗಿನಲ್ಲಿಯೂ ನಿರ್ಮಾಣ ಮಾಡಲಾಗುತ್ತಿದೆ.
ಪುನೀತ್ ರಾಜ್ ಕುಮಾರ್ ಅಭಿನಯದ ನಿನ್ನಿಂದಲೇ ಸಿನಿಮಾ ಮೂಲಕ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಆರಂಭಿಸಿತು, ಅದಾದ ನಂತರ ಯಶ್ ಅಭಿನಯದ ಮಾಸ್ಟರ್ ಪೀಸ್, ಮೂರನೇ ಸಿನಿಮಾ ರಾಜಕುಮಾರ ಮತ್ತು ಯಶ್ ಅಭಿನಯದ ಕೆಜಿಎಫ್ ಸಿನಿಮಾ ನಿರ್ಮಿಸುತ್ತಿದೆ. ಈಗ ಕೇಳಿ ಬರುತ್ತಿರುವ ಹೊಸ ಸುದ್ದಿಯೇನೆಂದರೇ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣದ ಮುಂದಿನ ಸಿನಿಮಾದಲ್ಲಿ ಸುದೀಪ್ ನಾಯಕರಾಗಲಿದ್ದಾರೆ ಇದಕ್ಕೆ ಸುದೀಪ್ ಕೂಡ ಒಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ಸಿನಿಮಾ ಬಗ್ಗೆ ಸುದೀಪ್ ಜೊತೆ ಈಗಾಗಲೇ ಹಲವು ಸುತ್ತಿನ ಚರ್ಚೆಗಳು ನಡೆದಿವೆ. ಮುಂದಿನ ವರ್ಷದ ಆರಂಭದಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ. ಈ ಸಿನಿಮಾಗೆ ಎಸ್. ಕೃಷ್ಣ ನಿರ್ದೇಶನ ಮಾಡಲಿದ್ದಾರೆ. ಈ ವಿಷಯ ಕೇಳಿ ಸುದೀಪ್ ಅಭಿಮಾನಿಗಳು ಕುತೂಹಲಭರಿತರಾಗಿದ್ದಾರೆ. ಸತತ ಹಿಟ್ ಸಿನಿಮಾಗಳನ್ನು ನೀಡಿರುವ ಹೊಂಬಾಳೆ ಫಿಲ್ಮ್ಸ್ ಈ ಬಗ್ಗೆ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.
ಸದ್ಯ ಸುದೀಪ್ ಪ್ರೇಮ್ ನಿರ್ದೇಶನದ ವಿಲ್ಲನ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


