ಸಿನಿಮಾ ಸುದ್ದಿ

'ಕಾಲೇಜ್ ಕುಮಾರ್' ವಿಲ್ಲನ್ ಗೆ ನಟಿ ಸಂಯುಕ್ತಾ ಹೆಗ್ಡೆ ಪಂಚ್!

ನಟಿ ಸಂಯುಕ್ತಾ ಹೆಗ್ಡೆ ಸವಾಲುಗಳನ್ನು ದಾಟಿ ಮುಂದೆ ಹೋಗಲು ಬಯಸುತ್ತಾರೆ. ಬೆಳ್ಳಿ ಪರದೆ ಮೇಲೆ ಆಕೆ ಟಿಪಿಕಲ್ ಹಿರೋಯಿನ್ ಆಗಿರಲು ಆಕೆ ಸಿದ್ಧವಿಲ್ಲ, ...

'ಕಾಲೇಜ್ ಕುಮಾರ್' ವಿಲ್ಲನ್ ಗೆ ನಟಿ ಸಂಯುಕ್ತಾ ಹೆಗ್ಡೆ ಪಂಚ್!
ಸಂಯುಕ್ತಾ ಹೆಗಡೆ
Published On :
ಬೆಂಗಳೂರು:  ನಟಿ ಸಂಯುಕ್ತಾ ಹೆಗ್ಡೆ ಸವಾಲುಗಳನ್ನು ದಾಟಿ ಮುಂದೆ ಹೋಗಲು ಬಯಸುತ್ತಾರೆ. ಬೆಳ್ಳಿ ಪರದೆ ಮೇಲೆ ಆಕೆ ಟಿಪಿಕಲ್ ಹಿರೋಯಿನ್ ಆಗಿರಲು ಆಕೆ ಸಿದ್ಧವಿಲ್ಲ, ಉತ್ತಮ ಡ್ಯಾನ್ಸರ್ ಆಗಿರುವ ಸಂಯುಕ್ತಾ ತನ್ನ ಎರಡನೇ ಸಿನಿಮಾವಾದ ಸಂತೋಷ್ ನಿರ್ದೇಶನದ ಕಾಲೇಜ್ ಕುಮಾರ್ ನಲ್ಲಿ ಆಕ್ಷನ್ ಸನ್ನಿವೇಶಕ್ಕೆ ತಮ್ಮ ದೇಹವನ್ನು ದಂಡಿಸಿದ್ದಾರೆ.
ನಾಯಕಿ ಸಂಯುಕ್ತಾ ಹೆಗಡೆ ಜನ್ಮ ದಿನವಾದ ಇಂದು ಆಕೆ ಅಭಿನಯದ ಸ್ಟಂಟ್ ದಶ್ಯಗಳನ್ನು ರಿಲೀಸ್ ಮಾಡಲು ಚಿತ್ರ ತಂಡ ನಿರ್ಧರಿಸಿದೆ, ಕಾಲೇಜ್ ಕುಮಾರ್ ಸಿನಿಮಾದಲ್ಲಿ ಸಂಯುಕ್ತಾ ಹೆಗಡೆ ಸ್ಟಂಟ್ಸ್ ದೊಡ್ಡ ಸರ್ ಫ್ರೈಸ್ ಆಗಿದೆ ಎಂದು ಚಿತ್ರ ತಂಡ ತಿಳಿಸಿದೆ.
ಸಿನಿಮಾದಲ್ಲಿ ಫೈಟಿಂಗ್ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿರುವ ಸಂಯುಕ್ತಾ ಹೆಗಡೆ ನಿಜ ಜೀವನದಲ್ಲೂ ಕೂಡ ಅದೇ ರೀತಿ ಫೈಟಿಂಗ್ ಮಾಡಿದ್ದಾರಂತೆ, ತೆರೆಯ ಮೇಲೆ ಹೇಗೆ ನಾನು ಹೊಡೆದಿದ್ದೆನೋ ಹಾಗಯೇ ನಿಜ ಜೀವನದಲ್ಲೂ ಹೊಡೆದಿದ್ದೇನೆ, ಈ ಬಗ್ಗೆ ನನ್ನ ತಾಯಿ ನನ್ನನ್ನು ಹೊಗಳುತ್ತಿದ್ದರು, ನನ್ನನ್ನು ಜಗಳದ ಕೋಳಿ ಎಂದು ಕರೆಯುತ್ತಿದ್ದರು., ಆದರೆ ನಾನು  ನನ್ನನ್ನು ರಕ್ಷಿಸಿಕೊಳ್ಳಬಲ್ಲೆ ಎಂಬ ಆತ್ಮವಿಶ್ವಾಸವಿದೆ ಎಂದು ಹೇಳಿದ್ದಾರೆ.
ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ನಿಮಗೆ ನೀವೇ ಉತ್ತಮ ವ್ಯಕ್ತಿ, ಕೆಟ್ಟ ಸನ್ನಿವೇಶದಿಂದ ಹೇಗೆ ಪಾರಾಗಬೇಕು ಎಂಬುದನ್ನು ನೀವು ತಿಳಿದುಕೊಂಡಿರಬೇಕು. ನಿಮ್ಮನ್ನು ರಕ್ಷಿಸಲು ನಿಮಗಿಂತ ದೊಡ್ಡ ವ್ಯಕ್ತಿ ನಿಮಗಿಂತ ಬೇರೆ ಯಾರು ಇಲ್ಲ, ಸಿನಿಮಾ ರಂಗದಲ್ಲಿ ನೀವು ಯಾವುಗಲೂ ಒಂಟಿಯಾಗಿರುತ್ತೀರಿ, ಒಮ್ಮೊಮ್ಮೆ ವಿವಿಧ ಲೋಕೆಶನ್ ಗಳಿಗೆ ಒಬ್ಬೊಬ್ಬರೇ ಹೋಗಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಆತ್ಮರಕ್ಷಣೆಯೇ ಮೊದಲ ಪಾಠವಾಗಬೇಕು. ಇದರ ಮೇಲೆ ನಾನು ಯಾವಾಗಲು ನಂಬಿಕೆಯಿಡುತ್ತೇನೆ, ಸಿನಿಮಾ ರಂಗಕ್ಕೆ ಬರುವುದಕ್ಕಿಂತ ಮುಂಚಿನಿಂದಲೂ ನಾನು ಸ್ವಯಂ ರಕ್ಷಣೆ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇನೆ ಎಂದು ಹೇಳಿದ್ದಾರೆ.
ಎಂಆರ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಎಲ್, ಪದ್ಮನಾಭ್ ಕಾಲೇಜ್ ಕುಮಾರ್ ಸಿನಿಮಾ ನಿರ್ಮಿಸುತ್ತಿದ್ದಾರೆ, ವಿಕ್ಕಿ, ರವಿಶಂಕರ್, ಶೃತಿ ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದ 54 ದಿನಗಳ ಶೂಟಿಂಗ್ ಮುಗಿದಿದೆ. ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.