ಸಿನಿಮಾ ಸುದ್ದಿ

ಉದ್ಯಮಿ ಜೊತೆ ನಟಿ ರಮ್ಯಾ ಬರ್ನಾ ವಿವಾಹ

ಕನ್ನಡ ಚಿತ್ರರಂಗದ ಖ್ಯಾತ ನಟಿ ರಮ್ಯಾ ಬರ್ನಾ ಉದ್ಯಮಿಯೊಂದಿಗೆ ವಿವಾಹವಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಉದ್ಯಮಿ ಜೊತೆ ನಟಿ ರಮ್ಯಾ ಬರ್ನಾ ವಿವಾಹ
ಮಾಧ್ಯಮಗಳಲ್ಲಿ ಪ್ರಸಾರವಾದ ಉದ್ಯಮಿ ಫಹಾದ್-ನಟಿ ರಮ್ಯಾ ಚಿತ್ರ
Published On :

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟಿ ರಮ್ಯಾ ಬರ್ನಾ ಉದ್ಯಮಿಯೊಂದಿಗೆ ವಿವಾಹವಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಹುಡುಗರು, ಪಂಚರಂಗಿ, ಬುಲ್'ಬುಲ್, ಪರಮಾತ್ಮ, ಲೈಫು ಇಷ್ಟೇನೆ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದ  ಖ್ಯಾತ ನಟಿ ರಮ್ಯಾ ಬರ್ನಾ ಗೌಪ್ಯವಾಗಿ ವಿವಾಹವಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ.  ಉದ್ಯಮಿ ಹಾಗೂ ಜೆಡಿಎಸ್ ಮುಖಂಡರೂ ಕೂಡ ಆಗಿರುವ ಫಹಾನ್​​​​ ಅಲಿಖಾನ್ ಅವರನ್ನು ರಮ್ಯಾ ವಿವಾಹವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಫಹಾನ್​​​​ ಅಲಿಖಾನ್ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಅವರ ಸಂಬಂಧಿ  ಎಂದು ಹೇಳಲಾಗುತ್ತಿದ್ದು, ಮಾಧ್ಯಮಗಳ ವರದಿಯಂತೆ ರಮ್ಯಾ ಬರ್ನಾ ಯಾರಿಗೂ ಹೇಳದೆ ಕಳೆದ ಮೇ 29ರಂದು ಶಿವಾಜಿ ನಗರದ ಸಬ್ ರಿಜಸ್ಟ್ರಾರ್ ಕಚೇರಿಯಲ್ಲಿ ಫಹಾನ್​​​​ ಅಲಿಖಾನ್ ಅವರೊಂದಿಗೆ ಮದುವೆಯಾಗಿದ್ದಾರೆ ಎಂದು  ವರದಿ ಮಾಡಲಾಗಿದೆ.

ಫಹಾದ್ ಅವರು 2010ರ ಬಿಬಿಎಂಪಿ ಚುನಾವಣೆಯಲ್ಲಿ ಜಯಮಹಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಇನ್ನು ರಮ್ಯಾ ಹಾಗೂ ಫಹಾದ್ ಅವರ ವಿವಾಹ ಸಂಬಂಧ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಶಾಸಕ ಜಮೀರ್ ಅಹಮದ್  ಖಾನ್ ಇಬ್ಬರೂ ಮದುವೆಯಾಗಿರುವ ವಿಷಯ ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ಇನ್ನು ರಮ್ಯಾ ಅಭಿನಯದ ಹೊಸ ಚಿತ್ರ ಟಾಸ್ ಇನ್ನೇನು ಬಿಡುಗಡೆಯಾಗಲಿದ್ದು, ಇದು ನನ್ನ ಕೊನೆಯ ಚಿತ್ರ ಮುಂದೆ ಸಿನಿಮಾ ಕ್ಷೇತ್ರ ಬಿಟ್ಟು ಉದ್ಯಮದಲ್ಲಿ ತೊಡಗಿಸಿಕೊಳ್ಳುತ್ತೇನೆಂದು ಮಾಧ್ಯಮದವರಿಗೆ ತಿಳಿಸಿದ್ದರು. ಸಬ್  ರಿಜಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿರುವುದು ನಿಜ. ನಮ್ಮದು ಪ್ರೇಮ ವಿವಾಹ. ನಮ್ಮ ಪತಿ ನನಗೆ ತುಂಬ ವರ್ಷಗಳಿಂದ ಪರಿಚಯ ಎಂದು ಹೇಳಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.