ಸಿನಿಮಾ ಸುದ್ದಿ

ಮಲಯಾಳಂ ನಟಿ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತೆ ಹೆಸರು ಬಹಿರಂಗಪಡಿಸುವುದರಲ್ಲಿ ತಪ್ಪಿಲ್ಲ- ಕಮಲ್ ಹಾಸನ್

ಮಲಯಾಳಂ ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ತಮಿಳು ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ಆವರು ಶುಕ್ರವಾರ ಹೇಳಿದ್ದಾರೆ...

ಮಲಯಾಳಂ ನಟಿ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತೆ ಹೆಸರು ಬಹಿರಂಗಪಡಿಸುವುದರಲ್ಲಿ ತಪ್ಪಿಲ್ಲ- ಕಮಲ್ ಹಾಸನ್
ತಮಿಳು ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್
Published On :
ಚೆನ್ನೈ: ಮಲಯಾಳಂ ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಸಂತ್ರಸ್ತೆಯ ಹೆಸರನ್ನು ಬಹಿರಂಗಪಡಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ತಮಿಳು ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ಆವರು ಶುಕ್ರವಾರ ಹೇಳಿದ್ದಾರೆ. 
ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಸುದ್ದಿಗಾರರಗೊಂದಿಗೆ ಮಾತನಾಡುತ್ತಿದ್ದ ಕಮಲ್ ಹಾಸನ್ ಅವರು ನಟಿಯ ಹೆಸರನ್ನು ಬಹಿರಂಗಪಡಿಸಿದರು. ಈ ವೇಳೆ ನಟಿಯ ಹೆಸರನ್ನು ಬಹಿರಂಗ ಪಡಿಸಿದ್ದರ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಸಂತ್ರಸ್ತೆ ಹೆಸರನ್ನು ಬಹಿರಂಗಪಡಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಜನರಿಗೆ ಸಂತ್ರಸ್ತೆಯ ಹೆಸರು ತಿಳಿಯಬೇಕಿದೆ ಎಂದು ಹೇಳಿದ್ದಾರೆ. 
ಚಿತ್ರರಂಗದಲ್ಲಿ ಒಂದರಲ್ಲಿಯೇ ಮಹಿಳೆಯರಿಗೆ ಸುರಕ್ಷತೆ ಏಕೆ ಬೇಕು? ಜನರ ಗುಂಪಿನಲ್ಲಿರುವ ಮಹಿಳೆಯರೂ ಕೂಡ ನನಗೆ ಮುಖ್ಯವಾಗುತ್ತಾರೆ. ಅವರಿಗೆ ಯಾವುದೇ ಸಮಸ್ಯೆಯಾಗಲು ನಾನು ಬಿಡುವುದಿಲ್ಲ. ನಾವು ಸುರಕ್ಷಿತರಾಗಿದ್ದೇವೆಯೇ, ಇಲ್ಲವೇ ಎಂಬುದನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿರುತ್ತದೆ. ಇದು ಕೇವಲ ನಟಿ ಎಂಬ ಮಾತ್ರಕ್ಕಷ್ಟೇ ಇಲ್ಲ. ನಟಿ ಎಂದ ಮಾತ್ರಕ್ಕೆ ನಾನು ಸಂತ್ರಸ್ತೆಗೆ ಬೆಂಬಲ ನೀಡುತ್ತಿಲ್ಲ.
ಇದೇ ವೇಳೆ ನಟಿಯ ಹೆಸರನ್ನು ಬಹಿರಂಗ ಪಡಿಸಿದ್ದಕ್ಕೆ ಉತ್ತರಿಸಿದ ಅವರು, ಸಂತ್ರಸ್ತೆ ಹೆಸರನ್ನು ಬಳಕೆ ಮಾಡುವುದರಲ್ಲಿ ಯಾವ ತಪ್ಪೂ ಇಲ್ಲ. ಮಾಧ್ಯಮಗಳೇ ಆಕೆಯ ಹೆಸರನ್ನು ಬಹಿರಂಗ ಪಡಿಸಿವೆ. ಹೆಸರನ್ನು ಮುಚ್ಚಿಡುವುದರಿಂದ, ಹೆಸರನ್ನು ಬಹಿರಂಗ ಪಡಿಸುವುದರಿಂದ ಯಾವ ತಪ್ಪೂ ಇಲ್ಲ. ದ್ರೌಪದಿ ಎಂದು ಕರೆಯಬೇಕಿದ್ದರೆ, ಆ ಹೆಸರನ್ನೇ ಕರೆಯಿರಿ. ಆದರೆ, ಆಕೆಯನ್ನು ಮಹಿಳೆಯೆಂದು ಮಾತ್ರ ಬಿಂಬಿಸಬೇಡಿ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.