ಸಿನಿಮಾ ಸುದ್ದಿ

ಸೆಟ್ ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ನಟ ಕಪಿಲ್ ಶರ್ಮಾ: ಶೂಟಿಂಗ್ ರದ್ದುಗೊಳಿಸಿದ ಶಾರುಖ್-ಅನುಷ್ಕಾ!

ಜನಪ್ರಿಯ ಹಾಸ್ಯನಟರಾಗಿರುವ ಕಪಿಲ್ ಶರ್ಮಾ ಅವರು ತೀವ್ರವಾಗಿ ಅಸ್ವಸ್ಥಗೊಂಡು ಶೂಟಿಂಗ್ ಸೆಟ್ ನಲ್ಲಿಯೇ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ...

ಸೆಟ್ ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ನಟ ಕಪಿಲ್ ಶರ್ಮಾ: ಶೂಟಿಂಗ್ ರದ್ದುಗೊಳಿಸಿದ ಶಾರುಖ್-ಅನುಷ್ಕಾ!
ನಟ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಹಾಗೂ ಅನುಷ್ಕಾ ಶರ್ಮಾ ಹಾಗೂ ನಟ ಕಪಿಲ್ ಶರ್ಮಾ
Published On :
ಮುಂಬೈ: ಜನಪ್ರಿಯ ಹಾಸ್ಯನಟರಾಗಿರುವ ಕಪಿಲ್ ಶರ್ಮಾ ಅವರು ತೀವ್ರವಾಗಿ ಅಸ್ವಸ್ಥಗೊಂಡು ಶೂಟಿಂಗ್ ಸೆಟ್ ನಲ್ಲಿಯೇ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. 
ಕಪಿಲ್ ಶರ್ಮಾ ಅವರು ಒಂದೆಡೆ ಕಿರುತೆರೆ ಕಾರ್ಯಕ್ರಮ ಹಾಗೂ ಮತ್ತೊಂದೆಡೆ 'ಫಿರಂಗಿ" ಸಿನಿಮಾದಲ್ಲೂ ಕೆಲಸ ಮಾಡುತ್ತಿದ್ದಾರೆ. ಬಿಡುವಿಲ್ಲದೆ, ಕೆಲಸಗಳಲ್ಲಿ ತೊಡಗಿಕೊಂಡಿರುವ ಕಾರಣದಿಂದಾಗಿ ಅತೀಯಾದ ಬಳಲಿಕೆಯಿಂದ ಸೆಟ್ ನಲ್ಲಿಯೇ ಕುಸಿದು ಬಿದ್ದಿದ್ದಾರೆಂದು ತಿಳಿದುಬಂದಿದೆ. 
ಕಪಿಲ್ ಶರ್ಮಾ ನಡೆಸಿಕೊಡಲಿದ್ದ ಈ ಕಾರ್ಯಕ್ರಮದಲ್ಲಿ ಜಬ್ ಹರಿ ಮೆಟ್ ಸೆಜೋಲ್ ಚಿತ್ರದ ಪ್ರಚಾರಕ್ಕಾಗಿ ನಟ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಹಾಗೂ ಅನುಷ್ಕಾ ಶರ್ಮಾ ಅವರು ಬಂದಿದ್ದರು. ಕಪಿಲ್ ಶರ್ಮಾ ಅವರು ಕುಸಿದುಬಿದ್ದ ಪರಿಣಾಮ ಕಾರ್ಯಕ್ರಮ ರದ್ದುಗೊಂಡಿತ್ತು. ಈ ಹಿನ್ನಲೆ ಶಾರುಖ್ ಹಾಗೂ ಅನುಷ್ಕಾ ಕಾಮಿಡಿ ಶೋ ಶೂಟ್ ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. 
ಈ ಹಿಂದೆ ನಟಿ ಕೃತಿ ಕರಬಂಧ ನಡೆಸಿದ್ದ 'ಗೆಸ್ಟ್ ಲಿನ್ ಲಂಡನ್ ಚಿತ್ರದ ತಂಡ ಬಂದಾಗಲೂ ಕಪಿಲ್ ಅವರು ಇದೇ ಸಮಸ್ಯೆಯಿಂದ ಬಳಲಿದ್ದರು. ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದರೂ ಕಪಿಲ್ ಅವರ ಆರೋಗ್ಯ ಹದಗೆಟ್ಟಿದ್ದ ಕಾರಣ ಕಾರ್ಯಕ್ರಮದ ಚಿತ್ರೀಕರಣ ನಡೆದಿರಲಿಲ್ಲ. 
ಕೆಲ ತಿಂಗಳ ಹಿಂದಷ್ಟೇ ಕಪಿಲ್ ಶರ್ಮಾ ಅವರು ತಮ್ಮ ಆಪ್ತ ಹಾಗೂ ಸಹ ನಟ ಸುನೀಲ್ ಗ್ರೋವರ್ ಅವರ ಮೇಲೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂಗ ನಿಂದಿಸಿ ದೊಡ್ಡ ರಾದ್ಧಾಂತವನ್ನೇ ಮಾಡಿದ್ದರು. ಪ್ರಸ್ತುತ ಕಪಿಲ್ ಶರ್ಮಾ ಅವರು ಸೋನಿ ವಾಹಿನಿಯಲ್ಲಿ ಮೂಡಿಬರುತ್ತಿರುವ 'ದಿ ಕಪಿಲ್ ಶರ್ಮಾ ಶೋ'ವನ್ನು ನಡೆಸಿಕೊಡುತ್ತಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.