ಕನ್ನಡಿಗರಲ್ಲಿ ಒಗ್ಗಟ್ಟಿನ ಕೊರತೆ; ಕಂಬಳ ಬೆಂಬಲಿಸಿ ನಟ ಜಗ್ಗೇಶ್ ಟ್ವೀಟ್
ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸಂಪ್ರಾದಾಯಿಕ ಕ್ರೀಡೆಗೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿರುವ ಬೆನ್ನಲ್ಲೇ ಇದೀಗ ದಕ್ಷಿಣ ಕನ್ನಡದ ಸತಾತನ ಗ್ರಾಮೀಣ ಕ್ರೀಡೆ 'ಕಂಬಳ'ದ ಪರವಾಗಿ ದನಿ ಆರಂಭವಾಗತೊಡಗಿದೆ...

ಬೆಂಗಳೂರು: ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸಂಪ್ರಾದಾಯಿಕ ಕ್ರೀಡೆಗೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿರುವ ಬೆನ್ನಲ್ಲೇ ಇದೀಗ ದಕ್ಷಿಣ ಕನ್ನಡದ ಸತಾತನ ಗ್ರಾಮೀಣ ಕ್ರೀಡೆ 'ಕಂಬಳ'ದ ಪರವಾಗಿ ದನಿ ಆರಂಭವಾಗತೊಡಗಿದೆ.
ನವರಸ ನಾಯಕ ಜಗ್ಗೇಶ್ ಅವರು ಕಂಬಳ ಪರವಾಗಿ ಮಾತನಾಡಿದ್ದು, ರಾಜ್ಯದ ಗ್ರಾಮೀಣ ಕ್ರೀಡೆಯಾಗಿರುವ ಕಂಬಳದ ಪರ ಒಗ್ಗೂಡಿ ದನಿ ಎತ್ತರ ಕನ್ನಡಿಗರ ಕುರಿತಂತೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಕಂಬಳ ಗ್ರಾಮೀಣ ಕ್ರೀಡೆ ಕುರಿತಂತೆ ಟ್ವಿಟರ್ ನಲ್ಲಿ ಹೇಳಿಕೊಂಡಿರುವ ಜಗ್ಗೇಶ್ ಅವರು, ಯಾಕೆ? ತಿಲಾಂಜಲಿ! ಜಲ್ಲಿಕಟ್ಟುವಿನಂತೆ ಕಂಬಳ ಕೂಡ ನಮ್ಮ ದಕ್ಷಿಣ ಕರ್ನಾಟಕದ ಸನಾತನ ಕ್ರೀಡೆಯಾಗಿದ್ದು, ತಮಿಳರಂತೆ ಕನ್ನಡಿಗರೂ ಒಗ್ಗಟ್ಟಿನ ಮಂತ್ರಿ ಜಪಿಸಬೇಕಿದೆ. ಇದಕ್ಕೆ ಕನ್ನಡಿಗರು ಕೈಜೋಡಿಸಬೇಕು. ಇಡೀ ವಿಶ್ವದ ಕನ್ನಡಿಗರೂ ಒಂದಾಗಬೇಕಿದೆ ಎಂದು ಹೇಳಿದ್ದಾರೆ.
ಯಾಕೆ?ತಿಲಾಂಜಲಿ!ಜಲ್ಲಿಕಟ್ಟುವಿನಂತೆ ಕಂಬಳವು ನಮ್ಮ ದಕ್ಷಿಣ ಕರ್ನಾಟಕದ ಸನಾತನ ಕ್ರೀಡೆ.ತಮಿಳರಂತೆ ಒಗ್ಗಟ್ಟಿನ ಮಂತ್ರ ಜಪಿಸಲು ಕೈಜೋಡಿಸಿ ಇಡಿವಿಶ್ವದ ಕನ್ನಡಿಗರು ಒಂದಾಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


